ಸಂಬಂಧಗಳಲ್ಲಿ ನಿಂತು ಹೋಗುವ ಮಾತು ಕತೆಗಳು – 33
ಸ್ನೇಹದಲ್ಲಿ ಮೋಸ ಮತ್ತು ವಂಚನೆ ಇರಲೇಬಾರದು. ಮೊದಲಿನಿಂದಲೂ ಸ್ನೇಹಿತರಾಗಿ ವಿಶ್ವಾಸದಿಂದ ಮಾತುಕತೆ ಆಡಿಕೊಂಡಿದ್ದರೆ ಯಾರೊಬ್ಬರೂ ಸಹ ಪರಸ್ಪರ ಮೋಸ ಅಥವಾ ವಂಚನೆ ಮಾಡುತ್ತಾರೆಂದು ಎಣಿಸಿರುವುದಿಲ್ಲ. ಯಾರಿಗಾದರೂ ಸ್ವಾರ್ಥ ಮತ್ತು ದುರಾಸೆ ಮನಸ್ಸಿನಲ್ಲಿ ಬಂದರೆ ಮಾತ್ರ ವಂಚಿಸುವ ಮೋಸ ಮಾಡುವ ಬುದ್ದಿ ತಾನಾಗಿ ಬರುತ್ತದೆ.
ಸ್ನೇಹದಲ್ಲಿ ಮೋಸ ವಂಚನೆ ಬರುವುದು ವಿವಾಹ ಸಂಬಂಧಗಳನ್ನು ಹುಡುಕುವಾಗ, ಸಿನಿಮಾ ಮತ್ತು ರಾಜಕೀಯದಲ್ಲಿ ಹಾಗೆಯೇ ದೊಡ್ಡ ದೊಡ್ಡ ವ್ಯಾಪಾರ ವ್ಯವಹಾರಗಳಲ್ಲಿಯೂ ಬರುತ್ತದೆ. ಸಣ್ಣ ಪುಟ್ಟ ಮೋಸ ವಂಚನೆ ಮಾಡಿ ಯಾರೂ ಉದ್ದಾರವಾಗುವುದಿಲ್ಲ. ಸಾಮಾನ್ಯ ಸ್ನೇಹಿತರುಗಳಲ್ಲಿ ಅಷ್ಟಾಗಿ ಬರುವುದಿಲ್ಲ. ಮೋಸ ವಂಚನೆ ಮಾಡಿದರೂ ಯಾರಿಗೂ ತಿಳಿಯದಂತೆ ಸ್ವತಹ ತನ್ನ ಸ್ನೇಹಿತರಿಗೆ ತಿಳಿಯದಂತೆ ಮೋಸ ಮಾಡಲು ಹೋಗುತ್ತಾರೆ.
ಕೆಲವೊಮ್ಮೆ ವಿವಾಹ ಪ್ರಕರಣಗಳಲ್ಲಿ ಯಾರೂ ಸಹ ಬೇಕಂತಲೇ ಮೋಸ ಮಾಡಲು ಹೋಗುವುದಿಲ್ಲ. ಸ್ನೇಹಿತರ ಮಕ್ಕಳು ತಮ್ಮ ಮಕ್ಕಳಂತೆ ಎಲ್ಲರೂ ಚೆನ್ನಾಗಿರಲಿ ಎಂಬ ಉದ್ದೇಶದಿಂದ ಯಾವುದಾದರೂ ಸಂಬಂಧ ಹೇಳಿ ಬೇರೊಬ್ಬರ ಸ್ನೇಹಿತರ ಮಗನಿಗೋ ಅಥವಾ ಮಗಳಿಗೋ ವಿವಾಹ ಮಾಡಿಸ ಬಹುದು. ವಿವಾಹವಾದ ನಂತರ ಬೀಗರ ಬಂಡವಾಳ ತಿಳಿದರೆ ಮೋಸ ಹೋಗುವವರು ಮೊದಲ ಸ್ನೇಹಿತರು ಮಾತ್ರ. ಆಗ ಮೋಸ ಹೋದವರು ಹೇಳಬಹುದು. ಒಳ್ಳೆಯ ಸ್ನೇಹಿತ ಎಂದು ನಂಬಿದ್ದೆ ಆದರೆ ಇವನ ಮಾತು ಕೇಳಿ ಮಕ್ಕಳ ವಿವಾಹ ಮಾಡಿ ಮೋಸ ಹೋದೆ ಎಂದು ಹೇಳಬಹುದು. ಆದರೆ ವಿವಾಹಕ್ಕೂ ಮೊದಲು ತನ್ನ ಸ್ನೇಹಿತರಿಗೂ ತಿಳಿಯದಂತೆ ವಿವಾಹ ಮಾಡಿಕೊಳ್ಳುವವರು ಒಳ್ಳೆಯರಾಗಿ ಕಾಣಬಹುದು. ಗೋಮುಖ ವ್ಯಾಘ್ರನಂತೆ ಇದ್ದರೆ ಯಾರಿಗೂ ತಿಳಿಯುವುದಿಲ್ಲ. ವಿನಾಕಾರಣ ವಿವಾಹ ಸಂಬಂಧದಿಂದ ನಿಷ್ಠೂರಕ್ಕೆ ಗುರಿಯಾಗಬೇಕಾಗುತ್ತದೆ. ಸ್ನೇಹಿತನಾದವನು ತನಗೂ ಗೊತ್ತಿರಲಿಲ್ಲ ಎಂದು ಎಷ್ಟು ಹೇಳಿದರೂ ಮೋಸ ಹೋದವರಿಗೆ ಕೇಳುವ ವ್ಯವಧಾನ ಇರುವುದಿಲ್ಲ. ಆದರೂ ತನಗೆ ಮೋಸ ಮಾಡಿದನೆಂದೇ ಪರಿಗಣಿಸಿ ಮಾತನಾಡುವುದನ್ನೇ ಬಿಟ್ಟು ಬಿಡುತ್ತಾರೆ. ಕೇವಲ ಮಾತನಾಡುವುದನ್ನು ಬಿಟ್ಟರೆ ಅಲ್ಲಿಗೆ ಅವರ ಸ್ನೇಹ ಮುಗಿಯಬಹುದು. ಆದರೆ ತಮ್ಮ ಸಂಬಂಧಿಕರು ಇತರೆ ಸ್ನೇಹಿತರ ಬಳಿ ತನ್ನ ಸ್ನೇಹಿತನ ಬಗ್ಗೆ ಚಾಡಿ ಹೇಳುತ್ತಾ ಸೇಡು ತೀರಿಸಿಕೊಳ್ಳಲು ಹೋಗಬಾರದು. ಏಕೆಂದರೆ ಸಣ್ಣದಾದ ದ್ವೇಷ ದೊಡ್ಡದಾಗುತ್ತಾ ಹೋಗಿ ಯಾವ ಪರಿಣಾಮ ಬೇಕಾದರೂ ಆಗಬಹುದು. ಹೊಡೆದಾಟ ಬಡಿದಾಟ ಕಡೆಗೆ ಪ್ರಾಣ ತೆಗೆಯುವ ಹಂತಕ್ಕೆ ಬೇಕಾದರೂ ಹೋಗಬಹುದು. ಅದರಿಂದ ಇನ್ನೂ ಹೆಚ್ಚಿನ ನೋವು ಅನುಭವಿಸಬೇಕಾಗುತ್ತದೆ ಹಾಗೂ ಮನಸ್ಸಿನ ಶಾಂತಿ ಕದಡುತ್ತದೆ ವಿನಹ ಬೇರಾವುದೇ ಸಮಸ್ಯೆ ಬಗೆಹರಿಯುವುದಿಲ್ಲ. ಅದರ ಬದಲು ಮಕ್ಕಳ ಮುಂದಿನ ಭವಿಷ್ಯದ ಬಗ್ಗೆ ಯೋಚಿಸಬೇಕು.
ಅದರಲ್ಲೂ ಕೆಲವರಿಗೆ ತಪ್ಪಿನ ಅರಿವಾಗಿ ತನ್ನ ಸ್ನೇಹಿತರಿಗೂ ವಿವಾಹದ ಮುಂಚೆ ವಿಷಯ ತಿಳಿದಿರಲಿಲ್ಲ ಅವನು ತಾನೇ ಏನು ಮಾಡುತ್ತಾನೆಂದು ಪಶ್ಘಾತ್ತಾಪ ಪಟ್ಟು ಪುನಃ ತನ್ನ ಸ್ನೇಹಿತನ ಬಳಿಯೇ ಸಮಸ್ಯೆಯನ್ನು ಬಗೆಹರಿಸಲು ಸಹಾಯ ಕೇಳಬಹುದು.
ಎನ್ ಮುರಳೀಧರ್ ವಕೀಲರು ಹಾಗೂ ಸಾಹಿತಿ ಲೇಖಕರು ನೆಲಮಂಗಲ (ಮುರಳಿಮಂಗಲಧರೆ)