ಸಂಬಂಧಗಳಲ್ಲಿ ನಿಂತು ಹೋಗುವ ಮಾತು ಕತೆಗಳು

ಹೆಣ್ಣು ಮಕ್ಕಳು ನಾನಾ ಕಾರಣಗಳಿಂದ ಗಂಡನ ಮನೆಯನ್ನು ತೊರೆದು ತವರುಮನೆ ಸೇರಬಹುದು. ಇದರಲ್ಲಿ  ಗಂಡನ ಮನೆ ಸೇರಿದ ಹೆಂಡತಿಯ ತಪ್ಪು ಇರಬಹುದು ಅಥವಾ ಗಂಡನ ಮನೆಯವರ ತಪ್ಪು ಇರಬಹುದು. ಏಕೆಂದರೆ *ಒಂದು ಕೈಲಿ ಚಪ್ಪಾಳೆ ಹೊಡೆಯಲು ಆಗುವುದಿಲ್ಲ.  ಆದರೆ ಒಂದೊಂದು ಸನ್ನಿವೇಶದಲ್ಲಿ ಸ್ವಪ್ರತಿಷ್ಟೆಯಿಂದಲೋ ದುರಹಂಕಾರ, ತಿರಸ್ಕಾರ ದಿಂದ ಚಪ್ಪಾಳೆಯಲ್ಲ ತಾನೇ ತನ್ನ ಕಪಾಳಕ್ಕೆ ಹೊಡೆದುಕೊಂಡಂತೆ ಆಗುತ್ತದೆ. ಅಥವಾ ಬೇರೊಬ್ಬರಿಗೆ ಹೊಡೆದಂತೆ ಆಗಬಹುದು.* ಹೆಚ್ಚಿನ ಸಂದರ್ಭಗಳಲ್ಲಿ ಕಪಾಳಕ್ಕೆ ಹೊಡೆಯುವಂತೆ ಆಗಿರುತ್ತದೆ. ಕಪಾಳಕ್ಕೆ ಹೊಡೆದರೆ ಯಾರೂ ಸುಮ್ಮನಿರುವುದಿಲ್ಲ ವಾಪಸ್ ನೀಡಲು ಹೋಗುವುದೇ ಜಾಸ್ತಿ. 

 ಸಂಸಾರದಲ್ಲಿ ಎರಡು ಕೈ ಚಪ್ಪಾಳೆ ಯಾವಾಗ ಆಗುತ್ತದೆ ಅಥವಾ ಯಾರು ಯಾರಿಗೆ ಕಪಾಳಕ್ಕೆ ಹೊಡೆಯುವಂತೆ ಆಗುತ್ತದೆ ಎಂಬುದನ್ನು ವಿವರಿಸುತ್ತಾ ಹೋದರೆ ಮೊದಲನೆಯದಾಗಿ ಮನೆಯವರು ವರದಕ್ಷಿಣೆಗಾಗಿ ಕಿರುಕುಳ ನೀಡಿದರೆ ಅದನ್ನು ಸಹಿಸದೆ ತವರಿಗೆ ಮರಳಬಹುದು. ಮನೆಗೆ ಬಂದಿರುವ ಸೊಸೆ ಬಡವರ ಮನೆಯವರು ಎಂದು ತಾತ್ಸಾರ ಮಾಡಬಹುದು. ಗಂಡ ಹೆಂಡತಿ ನಡುವೆ ಅನ್ಯೋನ್ಯತೆ ಇಲ್ಲದಿದ್ದರೆ, ಮಕ್ಕಳಾಗಲಿಲ್ಲವೆಂದು ಅಥವಾ ಹೆಣ್ಣು ಮಕ್ಕಳಾಯಿತೆಂದು (ಇದು ಈಗಿನ ಕಾಲದಲ್ಲಿ ಅಪರೂಪ) ಇನ್ನೂ ಅನೇಕ ಕಾರಣಗಳಿಂದ ಕಿರುಕುಳ ನೀಡಬಹುದು. ಇದರಿಂದ ಅಸಹಾಯಕಳಾಗಿ ಪ್ರತಿಭಟಿಸದೆ ಮಗಳು ತವರಿಗೆ ಮರಳಬಹುದು. ಇದು ಕಾರಣವಿಲ್ಲದೆ ದುರುದ್ದೇಶದಿಂದ ಒಂದು ಕೈಯಿಂದ ಇನ್ನೊಬ್ಬರ  ಕೆನ್ನೆಗೆ ಹೊಡೆದಂತಾಗುತ್ತದೆ. 

RELATED ARTICLES  ಶ್ರೀಧರರು ಮಾತೋಶ್ರೀ ಸಾವಿತ್ರಿ ಭಾಗವತ, ವಾರಣಾಸಿ, ಇವರಿಗೆ ಬರೆದ ಪತ್ರದ ಎರಡನೆಯ ಭಾಗ

ಕೆಲವೊಮ್ಮೆ ಹೆಣ್ಣು ಮಕ್ಕಳ ಸ್ವಯಂಕೃತ ಅಪರಾಧದಿಂದಲೂ ಗಂಡನ ಮನೆ ತೊರೆದು ತವರುಮನೆ ಸೇರುವುದುಂಟು. ಏನಾದರೂ ಗಂಡನ ಹೆತ್ತವರು ಜೊತೆಯಲ್ಲಿದ್ದರೆ ಇವರ ಸೇವೆ ಮಾಡುವವರ್ಯಾರು ಎಂದು ಗಂಡನಿಗೆ ಬೇರೆ ಮನೆ ಮಾಡಲು ಹೇಳಬಹುದು. ಇದಕ್ಕೆ ಗಂಡ ಒಪ್ಪದಿದ್ದರೆ ಬೇರ ಮನೆ ಮಾಡಿಸಲೇ ಬೇಕೆಂದು ಹಠ ಹಿಡಿದು ಸಣ್ಣ ಪುಟ್ಟ ವಿಷಯಗಳಿಗೆಲ್ಲಾ ಅಳುತ್ತಾ ಗಂಡನ ಹೆತ್ತವರ ಎದುರು ಜಗಳವಾಡುತ್ತಾ ಇದ್ದರೆ  ಗಂಡನಿಗೆ ಇಕ್ಕಟ್ಟಿಗೆ ಸಿಲುಕಿದಂತಾಗಿ. ಈ ಕಡೆ ಹೆತ್ತವರನ್ನು ಬಿಡುವಂತಿಲ್ಲ ಆ ಕಡೆ ಹೆಂಡತಿಯನ್ನು ಬಿಡುವ ಹಾಗಿಲ್ಲದಂತೆ ಆಗುತ್ತದೆ. ಇದರಿಂದ ಸಂಸಾರದಲ್ಲಿ ಮನಸ್ಥಾಪ ಬಂದು ಮಾತುಕತೆಗಳು ಕಡಿಮೆಯಾಗುತ್ತಾ ಹೋಗುತ್ತದೆ. ಮೊದಲು ಗಂಡನ ಹೆತ್ತವರ ನಡುವೆ ಮಾತು ನಿಲ್ಲಬಹುದು ನಂತರ ಗಂಡನ ಜೊತೆಯಲ್ಲಿಯೂ ಮಾತು ಕಡಿಮೆಯಾಗಿ ತವರಿಗೆ ಬರಬಹುದು. ಇದು ವಿನಾಕಾರಣ ಸ್ವತಹ  ತಾನೇ ಕಪಾಳಕ್ಕೆ ಹೊಡೆದುಕೊಂಡು ಅಳುವಂತಾಗುತ್ತದೆ. ಇದಕ್ಕೆ ಯಾರು ಸಮಾಧಾನ ಮಾಡಲು ಆಗುವುದಿಲ್ಲ. ಹೇಳಿದರೆ ಕೇಳುವುದಿಲ್ಲ. ತನ್ನ ಹಠವೇ ನಡೆಯಬೇಕೆಂದು ಹಠ ಹಿಡಿದರೆ ಯಾರಿಗೂ ನೆಮ್ಮದಿ ಇರುವುದಿಲ್ಲ. 

RELATED ARTICLES  ಜಗಳಗಂಟಿತನ ‌ಯಾಕೆ? ಹೇಗೆ?

ತನ್ನ ಹೆತ್ತವರಂತೆ ಗಂಡನ ಹೆತ್ತವರೆಂದು ತಿಳಿದು ತನ್ನ ಗಂಡನನ್ನು ಬಿಟ್ಟರೆ ಅವರಿಗೂ ಯಾರೂ ಇಲ್ಲ ಎಂದು ಹೆತ್ತವರ ಯೋಗಕ್ಷೇಮ ನೋಡಿಕೊಂಡು ಸಂಸಾರ ನಡೆಸಿಕೊಂಡು ಹೋದರೆ ಯಾವ ಸಮಸ್ಯೆಯೂ ಬರುವುದಿಲ್ಲ. ಅದೇರೀತಿ ಗಂಡನ ಹೆತ್ತವರೂ ಸಹ ಮನೆಗೆ ಬಂದಿರುವ ಸೊಸೆ ತಮ್ಮ ಮಗಳಂತೆ ಎಂಬ ಮನೋಭಾವದಿಂದ ನೋಡಿದರೆ ವಿಶ್ವಾಸ ಉಳಿದಿರುತ್ತದೆ. ಇಲ್ಲದಿದ್ದರೆ ದ್ವೇಷವು ಮನದಲ್ಲಿ ಮೂಡಿ ಮಾತುಕತೆ ನಿಂತು ಹೋಗಬಹುದು

ಎನ್ ಮುರಳೀಧರ್ ವಕೀಲರು ಹಾಗೂ ಸಾಹಿತಿ ಲೇಖಕರು ನೆಲಮಂಗಲ (ಮುರಳಿಮಂಗಲಧರೆ)