ಲೇಖನ:- ಆನಂದ ಸುಬ್ರಹ್ಮಣ್ಯ ನಾರಾವಿ
ಹಾಲಿನ ಉದ್ಯಮವೇ ಒಂದು ದೃಷ್ಟಿಯಿಂದ ಗೋವಿನ ಅಳಿವಿಗೆ ಕಾರಣವೋ ಅನ್ನಿಸುತ್ತದೆ.ಹಾಲುಮಾರಾಟದ ವಸ್ತು ಆಗಬಾರದಿತ್ತು. ಹಾಲು ಬೇಕಾದವರು ಗೋಸೇವೆ ಮಾಡಿ, ಗೋಪಾಲಕರಿಗೆ ಹೊಸ ಹಸು ಸಾಕಲು ಬೇಕಾದ ಸಹಾಯಮಾಡಿ, ಗೋಶಾಲೆ ಇಲ್ಲವೇ ಗೋಪಾಲಕರಿಂದ ಹಾಲು ತರುವ ಹಾಗೆ ಇರಬೇಕಿತ್ತು.
ನಮಗೆ ಹಾಲು ಬೇಕಾದಾಗ ಸೂಪರ್ ಮಾರ್ಕೆಟ್ ಇಲ್ಲವೇ ಡೈರಿಯಿಂದ ಸಿಗುವ ಬಿಳಿ ದ್ರವ ತಂದು ಹಾಲು ಎಂದು ಉಪಯೋಗಿಸುತ್ತೇವೆ.
ಅದೇ ಹಾಲು ಸಿಗುವ ಮೂಲ ಗೋವು, ಗೋಪಾಲಕರು, ಇಲ್ಲವೇ ಗೋಶಾಲೆ ಆಗಿರುತ್ತಿದ್ದರೆ.. ..ನಾವು 30×40 ಜಾಗದಲ್ಲಿ ಮನೆ ಕಟ್ಟುವಾಗಲೂ ಒಂದು ಗೋವನ್ನು ಸಾಕಲು ಜಾಗ ಇಡುತ್ತಿದ್ದೆವು. ಅಥವಾ ಗೋವಿರುವವರಿಂದ ಗೋಸೇವೆ ಮಾಡಿ ಹಾಲು ತರುತ್ತಿದ್ದೆವು. ಸೂಪರ್ ಮಾರ್ಕೆಟ್ ಗಳಲ್ಲಿ ಹುಲ್ಲು ಹಿಂಡಿ ಸಿಗುತ್ತಿತ್ತು. ನಾವು ಗಂಜಲ ಸಗಣಿಯ ಸರಿಯಾದ ಬಳಕೆ ಮರೆಯುತ್ತಿರಲಿಲ್ಲ.
ಪಾಕೆಟ್ ಹಾಲು ತರುವ ನಮಗೆ ಹಾಲಿನ ಮೂಲ ಏನೆಂಬುದೇ ಮರೆತ ಹಾಗಿದೆ.
ಒಂದು ವೇಳೆ ರಕ್ತದಾನಿಗಳು ಜಾಸ್ತಿ ಆದರೆ ಬ್ಲಡ್ ಬ್ಯಾಂಕ್ ಲ್ಲಿ ಬೇಕಾದ ರಕ್ತ ದುಡ್ಡು ಕೊಟ್ಟರೆ ಬೇಕಾದಷ್ಟು ಸಿಗುವಂತ್ತಿದ್ದರೆ… ನಾಳೆ ರಕ್ತದ ಮೂಲ ಆರೋಗ್ಯವಂತ ಮನುಷ್ಯ ಎಂಬುದನ್ನು ಜನ ಮರೆಯಲೂ ಬಹುದೋ ಏನೋ… ಏನಂತೀರ.