ಸಂಬಂಧಗಳಲ್ಲಿ ನಿಂತು ಹೋಗುವ ಮಾತು ಕತೆಗಳು – 25

ಕುಟುಂಬದಲ್ಲಿ ಹೆತ್ತವರಿಗೂ ಮಕ್ಕಳಿಗೂ ಹಾಗೂ ಹೆಣ್ಣು ಮಕ್ಕಳಿಗೂ ಅವರ ಗಂಡನ ಹೆತ್ತವರಿಗೂ ಅನೇಕ ಕಾರಣಗಳಿಂದ ಮನಸ್ಥಾಪ ಬಂದು ಮಾತುಕತೆಗಳು ಕಡಿಮೆಯಾಗಬಹುದು. ಆದರೆ ಒಂದೇ ಕುಟುಂಬದ ಸಹೋದರರ ನಡುವೆ ಮತ್ತು ಸಹೋದರಿಯರ ನಡುವೆ ಮನಸ್ಥಾಪ ಬಂದರೆ ಅದು ಅವರ ಮಕ್ಕಳ ಮತ್ತು ಮೊಮ್ಮಕ್ಕಳವರೆಗೂ ಮುಂದುವರೆಯುವ ಸಾಧ್ಯತೆ ಇರುತ್ತದೆ. ಇಂತಹ ಘಟನೆಗಳು ಅಪರೂಪದಲ್ಲಿ ಅಪರೂಪವೆಂದೇ ಹೇಳಬಹುದು.


ಏಕೆಂದರೆ ಸಹೋದರಿಗೆ ಯಾವರೀತಿ ತಮ್ಮ ಸಹೋದರಿಯರನ್ನು ಕಂಡರೆ ವಿಶ್ವಾಸ ಇರುತ್ತದೆಯೋ ಅದೇರೀತಿ ಸಹೋದರಿಗೂ ಸಹೋದರರ ಮೇಲೆ ಅಷ್ಟೇ ವಿಶ್ವಾಸ ಇರುತ್ತದೆ. ಇವರುಗಳಲ್ಲಿ ದ್ವೇಷ ಮೂಡಲು ಅಷ್ಟಾಗಿ ಯಾವುದೇ ಕಾರಣಗಳಿರುವುದಿಲ್ಲ.

ವಿವಾಹವಾಗಿ ಗಂಡನ ಮನೆಗೆ ಹೋದರೆ ಮಾತುಗಳು ಕಡಿಮೆಯಾಗಬಹುದೇ ಹೊರತು ವಿಶ್ವಾಸ ಕಡಿಮೆಯಾಗುವುದಿಲ್ಲ.
ಗಂಡನ ಮನೆಯವರ ಬಲವಂತಕ್ಕೆ ಕಟ್ಟುಬಿದ್ದು ಸಹೋದರರಲ್ಲಿ ಆಸ್ತಿಯಲ್ಲಿ ಪಾಲು ಕೇಳಿದರೆ ಮಾತ್ರ ವಿಶ್ವಾಸ ಕಡಿಮೆಯಾಗದಿದ್ದರೂ ಮಾತುಕತೆ ನಿಲ್ಲಬಹುದು. ಏಕೆಂದರೆ ಇದರಲ್ಲಿ ಸಹೋದರಿಯ ತಪ್ಪು ಇರುವುದಿಲ್ಲ ವೆಂದು ತಿಳಿದಿರುತ್ತಾರೆ.

RELATED ARTICLES  "ಪ್ರಗತಿ"ಯ ಹೊಸ ಕನಸುಗಾರ ಪ್ರೊ. ಎಂ ಜಿ ಭಟ್ಟ.

ಯಾವಾಗಲೂ ಸಹೋದರನ ಸಂಸಾರ ಚೆನ್ನಾಗಿರಲೆಂದು ಸಹೋದರಿಯರು ಹರಸಿದರೆ ಸಹೋದರಿಯರ ಸಂಸಾರ ಚೆನ್ನಾಗಿರಲೆಂದು ಸಹೋದರರು ಆಶಿಸುತ್ತಾರೆ.

ಒಂದೇ ಕುಟುಂಬದಲ್ಲಿದ್ದಾಗ ಅನಿರೀಕ್ಷಿತವಾಗಿ ಬರುವ ಮನಸ್ಥಾಪ ದಿಂದ ಮಾತುಕತೆಗಳು ಕಡಿಮೆಯಾಗಿ ಒಬ್ಬರನ್ನು ಕಂಡರ ಇನ್ನೊಬ್ಬರಿಗೆ ಮುಖ ನೋಡಿದರೂ ಕೋಪಿಸಿಕೊಳ್ಳುವ ಹಂತಕ್ಕೆ ತಲುಪಿದ್ದರೆ ಒಂದೇ ಕುಟುಂಬದಲ್ಲಿದ್ದರೆ ದಿನ ಬೆಳಗಾದರೆ ಜಗಳವಾಡಬೇಕಾಗುತ್ತದೆ ಎಂದು ಬೇರೆ ಬೇರೆ ಸಂಸಾರ ಹೂಡಬಹುದು. ಆಗ ಅಪರೂಪಕ್ಕೆ ನಡೆಯುತ್ತಿದ್ದ ಮಾತುಕತೆಗಳು ನಿಂತು ಹೋಗಬಹುದು.

RELATED ARTICLES  ಮೂಲ ಸೌಕರ್ಯಗಳಿಂದ ವಂಚಿತವಾಗಿದೆ ಕುಮಟಾದ ಈ ಗ್ರಾಮ

ಈಗಿನ ಕಾಲದಲ್ಲಿ ಒಂದು ಕುಟುಂಬವೆಂದರೆ ಅಪ್ಪ ಅಮ್ಮ ಮಗ ಅಥವಾ ಮಗಳು ಇವರಲ್ಲಿ ಸಹೋದರಿಗೆ ವಿವಾಹವಾದರೆ ಸಹೋದರ ಒಬ್ಬನೇ ಇರಬೇಕಾಗುತ್ತದೆ. ಅಕಸ್ಮಾತ್ ಸಹೋದರರ ಇದ್ದರೂ ದೊಡ್ಡವರಾದ ಮೇಲೆ ತಮ್ಮ ತಮ್ಮ ಉದ್ಯೋಗಕ್ಕೆ ತಕ್ಕಂತೆ ಬೇರೆ ಬೇರೆ ಸಂಸಾರ ಮಾಡಲು ಇಚ್ಛಿಸಿ ಯಾವುದೇ ಮನಸ್ಥಾಪ ಬರದಂತೆ ಇರುತ್ತಾರೆ. ಇವರುಗಳ ನಡುವೆ ಕುಟುಂಬದಲ್ಲಿದ್ದಾಗ ನಡೆಯುತ್ತಿದ್ದ ಮಾತುಕತೆಗಳು ನಿಂತು ಹೋಗಬಹುದು.

ಇನ್ನು ಹಳ್ಳಿಗಳ ಜೀವನಕ್ಕೆ ಬಂದರೆ ಇಲ್ಲಿಯೂ ಸಹ ಮೊದಲಿನಂತೆ ಕುಟುಂಬದ ಸದಸ್ಯರು ಜಾಸ್ತಿ ಇರುವುದಿಲ್ಲ. ಇಲ್ಲಿಯೂ ಸಹ ಆಸ್ತಿಯ ವಿಚಾರವಾಗಿ ಮನಸ್ಥಾಪ ಬರುವುದೇ ಹೆಚ್ಚು.

ಎನ್ ಮುರಳೀಧರ್ ವಕೀಲರು ಹಾಗೂ ಸಾಹಿತಿ ಲೇಖಕರು ನೆಲಮಂಗಲ (ಮುರಳಿಮಂಗಲಧರೆ)