ಅಕ್ಷರ ರೂಪ:- ಶಿಶಿರ ಅಂಗಡಿ.

ರಾಮಚಂದ್ರಾಪುರ ಮಠದ ಶಾಖೆಯಾದ ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಾಶ್ರಮದ ನಿವೇಶನ ಮತ್ತು ಅದಕ್ಕೆ ತಾಗಿರುವ ಧರ್ಮಶಾಲೆಯ ಜಾಗ ಇವೆರಡನ್ನು ಮಠ ಅತಿಕ್ರಮಣ ಮಾಡಿದೆ ಎಂಬ ನೆಪ ನೀಡಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಕಟ್ಟದ ಮಂಜೂರಾತಿಯನ್ನು ಹಿಂಪಡೆದಿದ್ದ ಪ್ರಕರಣದಲ್ಲಿ ದಾಖಲಾಗಿದ್ದ ಎರಡೂ ವೈಯಕ್ತಿಕ ಹಿತಾಸಕ್ತಿ ಅರ್ಜಿಗಳನ್ನು ವಜಾ ಮಾಡಿ ಮಾನ್ಯ ಉಚ್ಛ ನ್ಯಾಯಾಲಯ ಆದೇಶ ನೀಡಿದೆ. ಅಷ್ಟೇ ಅಲ್ಲ,‌ ಸದರಿ ಪ್ರಕರಣದ ಕುರಿತಾಗಿ ‘ಕಟ್ಟಡದ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಬೇಕು’ ಎಂದು ನ್ಯಾಯಾಲಯ ನೀಡಿದ್ದ ಮಧ್ಯಂತರ ಆದೇಶವು ಅನೂರ್ಜಿತವಾಗಲಿದೆ. ಇದರಿಂದ ಸದ್ಯ ಗಿರಿನಗರದ ರಾಮಾಶ್ರಮದಲ್ಲಿ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತಿ ಮಹಾಸ್ವಾಮಿಗಳವರು ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಸ್ಥಳದಲ್ಲಿ ಹಾಕಲಾಗಿರುವ ತಾತ್ಕಾಲಿಕ ಪೆಂಡಾಲ್ ವ್ಯವಸ್ಥೆಯ ಮೇಲೆ ನೇತಾಡುತ್ತಿದ್ದ ತೂಗುಕತ್ತಿಯಿಂದ ಮುಕ್ತಿ ಸಿಕ್ಕಿದೆ.

RELATED ARTICLES  ಹುಲ್ಲಿನಲ್ಲಿ ಹುದುಗಿಸಿಟ್ಟು ಬೆದೆ ಹಾಕಿದ ಮಾವೇ ಚೆನ್ನಾಗಿ ಹಣ್ಣಾಗುತ್ತದೆ! ಎಂದ ಶ್ರೀಧರರು.

ಹಿನ್ನೆಲೆ:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಬನಶಂಕರಿ ೩ನೆ ಹಂತದ ವಿಶ್ವಭಾರತಿ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿಯ ಜೆ.ಪಿ. ರಸ್ತೆಯ ೨ಎ (2A) ನಿವೇಶನದಲ್ಲಿ ಧರ್ಮಶಾಲೆಯೊಂದನ್ನು ನಿರ್ಮಿಸಲು ಪರವಾನಗಿ ಮಂಜೂರು ಮಾಡಿತ್ತು. ಆದರೆ ಈ ಸ್ಥಳವನ್ನು ಮಠ ಅತಿಕ್ರಮಣ ಮಾಡಿದೆ ಎಂದು ದಾಖಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಆಧಾರದ ಮೇಲೆ ೨೦೦೬ ಜುಲೈ ೬ರಂದು ಮಂಜೂರಾತಿಯನ್ನು ಹಿಂಪಡೆದಿತ್ತು. ಇದಕ್ಕೆ ಪ್ರತಿಯಾಗಿ ಶ್ರೀಮಠವೂ ಕೂಡ ಮಂಜೂರಾತಿ ಹಿಂಪಡೆದಿದ್ದನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿತ್ತು. ಇತ್ತೀಚೆಗಷ್ಟೇ ಬಿಬಿಎಂಪಿ ಅಧಿಕಾರಿಗಳು ಇದೇ ಮಂಜೂರಾತಿ ಹಿಂಪಡೆದ ಆದೇಶವನ್ನು ವಾಪಸ್ ತೆಗೆದುಕೊಳ್ಳುವುದಾಗಿ ಹೇಳಿಕೊಂಡಿದ್ದರು.

ಮಠದ ವತಿಯಿಂದ ದಾಖಲಾದ ಸಾ.ಹಿ‌.ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ “ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಂದಿನ ಆಯುಕ್ತರಾಗಿದ್ದ ಶ್ರೀ ಟಿ. ಶ್ಯಾಮ್ ಭಟ್ ಅವರ ಮೌಖಿಕ ನಿರ್ದೇಶನದ ಮೇರೆಗೆ ನೋಟಿಸ್ ನೀಡಿದ್ದಾಗಿ ಒಪ್ಪಿಕೊಂಡಿದ್ದ ಬಿಬಿಎಂಪಿ ಅಧಿಕಾರಿಗಳನ್ನು ಮಾನ್ಯ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದ್ದನ್ನು ನಾವಿಲ್ಲಿ ಸ್ಮರಿಸಬಹುದು. ಈ ಕುರಿತು  ನಿವೃತ್ತ ಇಂಜಿನಿಯರ್ ರಾಜಗೋಪಾಲ್ ನ್ಯಾಯಾಲಯದ ಸೂಚನೆಯ ಮೇರೆಗೆ ಈ ಕುರಿತು ಅಫಿಡವಿಟ್ ಕೂಡ ಸಲ್ಲಿಸಿರುತ್ತಾರೆ.

RELATED ARTICLES  ಬದುಕಿಗೆ ಬಣ್ಣ ತುಂಬಿದವರು

ಒಟ್ಟಿನಲ್ಲಿ ಶ್ರೀರಾಮಚಂದ್ರಾಪುರ ಮಠ ಹಾಗೂ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತಿ ಮಹಾಸ್ವಾಮಿಗಳವರ ವಿರುದ್ಧ ಪಟ್ಟಭದ್ರ ಹಿತಾಸಕ್ತಿಗಳಿಂದ ಯಾವ ರೀತಿಯಲ್ಲಿ ವ್ಯವಸ್ಥಿತವಾಗಿ ಷಡ್ಯಂತ್ರ ನಡೆಯುತ್ತಿದೆ ಎಂಬುದು ಮತ್ತೆ ಮತ್ತೆ ಸಮಾಜದ ಎದುರು ಜಗಜ್ಜಾಹಿರಾಗುತ್ತಿದೆ. ಹಾಗೆಯೇ ಸತ್ಯ ಎಂದಿದ್ದರೂ ಹೊರಗೆ ಬರಲೇಬೇಕು, ಎಷ್ಟೇ ಹುನ್ನಾರ ಮಾಡಿದರೂ ಕೊನೆಯಲ್ಲಿ ಜಯ ದೊರಕುವುದು ಸತ್ಯ ಮತ್ತು ಧರ್ಮಕ್ಕೆ ಎಂದು ಸಾಬೀತಾಗುತ್ತಿದೆ. ಇನ್ನುಳಿದ ಷಡ್ಯಂತ್ರಗಾರರು ತಮ್ಮ ಕಪಟತನ ಹೊರಬರುವ ಪಾಳಿ ಯಾವಾಗ ಬರುತ್ತದೋ ಎಂದು ಆತಂಕದಲ್ಲಿ ದಿನದೂಡುತ್ತಿದ್ದಾರೆ ಎಂದು ತಿಳಿದುಬಂದಿದೆ.