ತಮಿಳ್ನಾಡಿನ ಅಂದಿಯೂರು ಎಂಬಲ್ಲಿ ನಡೆಯುವ ಜಾನುವಾರು ಜಾತ್ರೆಗೆ ನಮ್ಮ ದೇಶೀಯ ಗೋವುಗಳನ್ನು ಮಲೆ ಮಹದೇಶ್ವರ ಬೆಟ್ಟದಿಂದ ಗೋಪಾಲಕರು ತೆಗೆದುಕೊಂಡು ಹೋಗಿ ಮಾರಾಟ ಮಾಡಿ ಬರುತ್ತಿದ್ದರು .ಪಾಪ ! ನಿಜವಾದ ಗೋಪ್ರೇಮ ಇರುವ ಗೋಪಾಲಕರು ಇವರು …ಈ ಗೋವುಗಳು ಎಲ್ಲಿಗೆ ಹೋಗುತ್ತವೆ ? ಏನು ಮಾಡುತ್ತಾರೆ ಇವುಗಳನ್ನು ? ಎಂಬುದನ್ನು ಅರಿಯದ ಮುಗ್ಧ ಜನ !

ಬರಗಾಲ …ಈ ಗೋಪಾಲಕರನ್ನು ಸೋತು ಹೈರಾಣಾಗುವಂತೆ ಮಾಡಿರುವುದು …ನೀರು ,ಮೇವು ಇಲ್ಲದೇ ಗೋವುಗಳನ್ನು ಸಾಕುವುದು ಅತೀ ಕಷ್ಟ ..‌ಅದರ ಜೊತೆ ಬಡತನ …ಹಲವಾರು ವರ್ಷಗಳಿಂದ ಬರಗಾಲ …ಈ ವರ್ಷವಂತೂ ಹೇಳತೀರದು …‌ಸರಕಾರ ಯಾವುದೇ ರೀತಿಯ ಸಹಾಯ ಹಸ್ತ ನೀಡಲೇ ಇಲ್ಲ …ಅಂತಹ ಸಂದರ್ಭದಲ್ಲಿ ಈ ಗೋಪಾಲಕರಿಗೆ ಸಹಾಯಕ್ಕೆ ಬಂದಿರೋದು ಶ್ರೀ ರಾಮಚಂದ್ರಾಪುರ ಮಠ , ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು …ಶ್ರೀ ಗುರುಗಳು ಎಲ್ಲಾ ಗೋವುಗಳ ರಕ್ಷಣೆಯ ಹೊಣೆ ಹೊತ್ತುಕೊಂಡರು …ಗೋಪ್ರೇಮಿಗಳು ,ಗುರುಭಕ್ತರು…ಗುರುಗಳ ಮಾರ್ಗದರ್ಶನದಂತೆಯೇ ಗೋಪ್ರಾಣಭಿಕ್ಷೆ ನೀಡಿ ಆ ಎಲ್ಲಾ ಗೋವುಗಳಿಗೆ ಪ್ರಾಣದಾನ ಮಾಡಲಾಯಿತು .

RELATED ARTICLES  ಕಾದಿರುವ ದಿನ….!

IMG 20170810 WA0001

ಈಗ ಮತ್ತದೇ ಸಂದಿಗ್ಧ ಸಮಯ ! ಆದರೆ ನೆಮ್ಮದಿಯ ವಿಷಯವೇನೆಂದರೆ ,ತಮಿಳ್ನಾಡಿನಲ್ಲಿ ನಡೆಯುವ ಆಡಿ ಜಾತ್ರೆಗೆ ಹೋಗುವ ಹಸುಗಳ ಪ್ರಾಣ ರಕ್ಷಣೆಗಾಗಿ ಶ್ರೀ ಮಠ  ಅಭಯಜಾತ್ರೆ ಆಯೋಜನೆ ಮಾಡಿದೆ . ಅಭಯಜಾತ್ರೆಯ ಘೋಷಣೆ ಆಗುತ್ತಿದ್ದಂತೆಯೇ  ದೂರದ ಹೈದರಾಬಾದ್ ನ ಅಚಲ್ ಜೈನ್ ಅವರು ಸುಮಾರು 700ಗೋವುಗಳ ಪಾಲನೆಯನ್ನು ಮಾಡುವ ಬೇಡಿಕೆಯನ್ನು ಶ್ರೀ ಮಠಕ್ಕೆ ಇಟ್ಟರು . ಇದು ಸಂತೋಷದ ವಿಷಯವೇ ಸರಿ . ಇದುವರೆಗೆ ಆಡಿ ಜಾತ್ರೆಗೆ ಹೊರಟ ಸುಮಾರು ಗೋವುಗಳನ್ನು ರಕ್ಷಿಸಲಾಯಿತು .

ಈ ಆಡಿ ಜಾತ್ರೆ ಸಂದರ್ಭದಲ್ಲಿ ಹಲವಾರು ದಲ್ಲಾಳಿಗಳು ಬೆಟ್ಟದಲ್ಲಿ ಟಿಕಾಣಿ ಹೂಡುವುದು ಸಾಮಾನ್ಯ ದೃಶ್ಯ ಆಗಿತ್ತು ಈ ಮೊದಲು .ಆದರೆ ಈ ವರ್ಷದ ಪರಿಸ್ಥಿತಿ ಹಾಗಿಲ್ಲ …ಗುರುಗಳ ಸಂಕಲ್ಪ ,ಗೋಕಿಂಕರರ ,ಗೋಪ್ರೇಮಿಗಳ ಸತತ ಪ್ರಯತ್ನದಿಂದ ಇದುವರೆಗೆ ಒಂದೇ ಒಂದು ಗೋವು ಕೂಡಾ ಕರ್ನಾಟಕದ ಎಲ್ಲೆಯನ್ನು ದಾಟಿಲ್ಲ . ಬೆಟ್ಟದ ಹಲವಾರು ಗೋಪಾಲಕರು ” ಗೋವುಗಳನ್ನು ಕಟುಕರಿಗೆ ಎಂದೆಂದೂ ಮಾರಾಟ ಮಾಡೆವು ,ಕೊಟ್ಟರೆ ಶ್ರೀ ಮಠಕ್ಕೇ ” ಎಂಬ ಮಾತನ್ನು ಹೇಳುತ್ತಿದ್ದಾರೆ .

RELATED ARTICLES  ದಯೆಯಿರುವಲ್ಲಿ ಧರ್ಮ

ಗೋಸಂಜೀವಿನಿ ಹೆಸರೇ ಹೇಳುವಂತೆ ದಿಕ್ಕಿಲ್ಲದ ,ಸಾಕಲಾಗದ ಗೋವುಗಳಿಗೆ ದಿಕ್ಕಾಗುವ ಮಹತ್ಕಾರ್ಯ . ಕಟುಕರ ಕೈಯಿಂದ ಇಂತಹ ಗೋವುಗಳಿಗೆ ಮುಕ್ತಿ ಕೊಡುವುದೇ ಗೋಸಂಜೀವಿನಿಯ ಮಹದುದ್ದೇಶವಾಗಿದೆ .

ಅಭಯಜಾತ್ರೆ ಇಂತಹ ಎಲ್ಲಾ ಗೋವುಗಳಿಗೆ ಭಯಮುಕ್ತವಾಗಿ ಜೀವಿಸುವ ಅವಕಾಶ ನೀಡುತ್ತಿದೆ.ಗೋಪಾಲಕರೇ ,ಗೋಪ್ರೇಮಿಗಳೇ ನಿಮಗಿದು ಸಕಾಲ …ಪಾಲ್ಗೊಳ್ಳಿ ಅಭಯಜಾತ್ರೆ ಯಲ್ಲಿ ..ಸಂಜೀವಿನಿಯಾಗೋಣ ಗೋವುಗಳಿಗೆ GouSanjivini ಗುರುವಿನ ಹೆಜ್ಜೆಗೆ ದನಿಯಾಗೋಣ ..ಲೇಖನಿಯೆನ್ನುವ ಖಡ್ಗವ ಬಳಸೋಣ

ವಂದೇ ಗೋಮಾತರಂ

ಬರಹ : : ” ಸುವಿಚಾರ “