ಗ್ರಾಮೀಣ ಬದುಕಿನ ಕಥೆ ವ್ಯಥೆಯಲ್ಲಿ ಯುವಕರ ಪಾತ್ರ – 7

ಗ್ರಾಮೀಣ ಪ್ರದೇಶಗಳಲ್ಲಿನ ವಿದ್ಯಾರ್ಥಿಗಳು ಕಷ್ಟಪಟ್ಟು ಪದವಿ ಮುಗಿಸಿ ಕೆಲಸಕ್ಕೆ ಸೇರಲು ನಗರ ಪಟ್ಟಣ ಪ್ರದೇಶಗಳಿಗೆ ಬರಲೇ ಬೇಕು. ಪದವಿ ಮುಗಿಸಿದ ತಕ್ಷಣ ಕೆಲಸ ಸಿಗುವ ಗ್ಯಾರಂಟಿ ಇರುವುದಿಲ್ಲ. ವಿದ್ಯಾಭ್ಯಾಸದ ಮಟ್ಟಕ್ಕೆ ಸರಿಯಾದ ನೌಕರಿ ಸಿಗುವವರೆಗೂ ಹುಡುಕುತ್ತಲೇ ಇರಬೇಕಾಗುತ್ತದೆ. ಪ್ರತಿದಿನವೂ ಕೆಲಸಕ್ಕೆ ತೆಗೆದುಕೊಳ್ಳುವ ಕಡೆ ನೇರವಾಗಿ ಸಂದರ್ಶನಕ್ಕೆ ಹೋಗಬೇಕು. ಸಾಮಾಜಿಕ ಜಾಲತಾಣದ ಮೂಲಕ ನೌಕರಿಗ ಅರ್ಜಿ ಸಲ್ಲಿಸಲು ಪಟ್ಟಣ ಪ್ರದೇಶಗಳಿಗೆ ಬರಬೇಕಾದ ಅನಿವಾರ್ಯತೆ ಇರುತ್ತದೆ. ಹಿಂದಿನ ಕಾಲದಲ್ಲಿ ಅಂಚೆ ಮೂಲಕ ಅರ್ಜಿಯನ್ನು ಮನೆಯಿಂದಲೇ ಕಳುಹಿಸಬಹುದಿತ್ತು. ಈಗ ಅಂತಹ ವ್ಯವಸ್ಥೆ ಬಹಳ ಕಡಿಮೆಯಾಗಿ ಎಲ್ಲವೂ ಆನ್‌ಲೈನ್ ಮೂಲಕವೇ ಕಳುಹಿಸಬೇಕಾಗಿರುವುದರಿಂದ ಆನ್‌ಲೈನ್ ಇರುವ ಕಡೆ ಹೋಗಬೇಕಾಗಿರುತ್ತದೆ. ಅಕಸ್ಮಾತ್ ಕೆಲವು ಹಳ್ಳಿಗಳಲ್ಲಿ ಹೋಬಳಿಗಳಲ್ಲಿ ಇಂಟರ್‌ನೆಟ್ ಸೌಲಭ್ಯ ಇದ್ದರೂ ವೇಗವೇ ಇರುವುದಿಲ್ಲ. ಆಗ ನಗರ ಪ್ರದೇಶಗಳಿಗೆ ಬರಲೇ ಬೇಕಾಗುತ್ತದೆ. ಮೊದಲಿಗೆ ಕೆಲಸಕ್ಕಾಗಿ ಅರ್ಜಿ ಹಾಕಲು ಅಂಚೆ ಸ್ಟಾಂಪ್ ಕವರ್ ಗೆ ಹಚ್ಚಿ ಪ್ರಮಾಣ ಪತ್ರಗಳನ್ನು ಅಟೆಸ್ಟ್ ಮಾಡಿಸಿ ಅಂಚೆಕಚೇರಿಗೆ ಹೋಗಿ ಕಳುಹಿಸಬೇಕಿತ್ತು. ಆದರೆ ಈಗ ಆನ್‌ಲೈನ್ ಅರ್ಜಿ ಹಾಕುವುದರಿಂದ ಇಂಟರ್‌ನೆಟ್ ಸೆಂಟರ್ ಗೆ ಹೋಗಿ ಅಲ್ಲಿ ಫೀಸನ್ನು ನೀಡಲೇಬೇಕಾದ ಸನ್ನಿವೇಶ ಉಂಟಾಗಿದೆ. ಇದು ಒಂದು ರೀತಿಯಲ್ಲಿ ಒಳ್ಳೆಯ ವ್ಯವಸ್ಥೆ ಆದರೆ ನಿರುದ್ಯೋಗಿಗಳು ಇದರ ವೆಚ್ಚವನ್ನು ಭರಿಸಲು ಕಷ್ಟವಾಗಬಹುದು.

RELATED ARTICLES  . ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲಿಕೆ -

ಸರಿಯಾದ ಕೆಲಸ ಸಿಗುವವರೆಗೆ ಅರ್ಜಿಯನ್ನು ಹಾಕುತ್ತಾ ಇರಬೇಕು. ಕೆಲಸ ಸಿಗುವವರೆಗೂ ಹಳ್ಳಿಯಲ್ಲಿ ಬೇಸಾಯ ಮಾಡಿಕೊಂಡು ಇರಬೇಕು. ಕೊನೆಗೆ ಬೇಸರವಾಗಿ ಯಾವ ಕೆಲಸವೂ ಬೇಡವೆಂದು ಕೆಲವರು ವ್ಯವಸಾಯ ಮಾಡಿ ಜಮೀನನ್ನು ಅಭಿವೃದ್ಧಿ ಪಡಿಸಲು ಹಳ್ಳಿಯಲ್ಲೇ ಉಳಿಯಬಹುದು.

RELATED ARTICLES  ಬದುಕಿಗೆ ಬಣ್ಣ ತುಂಬಿದವರು

ಈಗ ಸ್ಪರ್ಧಾ ಯುಗ ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧೆ ಇರುವುದರಿಂದ ಈ ಸ್ಪರ್ಧೆಯಲ್ಲಿ ಉತ್ತೀರ್ಣರಾದವರಿಗೆ ಉದ್ಯೋಗ ಸಿಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಅದಕ್ಕೆ ತಕ್ಕಂತೆ ತರಬೇತಿ ಅತ್ಯವಶ್ಯಕ. ನಗರ ಪ್ರದೇಶಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಲು ತರಬೇತಿ ಶಾಲೆಗಳನ್ನು ನಡೆಸುವುದರಿಂದ ನಗರ ಪ್ರದೇಶಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಹಳ್ಳಿಗಳ ವಿದ್ಯಾರ್ಥಿಗಳಿಗೆ ಸುಲಭವಾಗಿ ಎಲ್ಲರೂ ತರಬೇತಿ ಪಡೆಯಲು ಆಗುವುದಿಲ್ಲ. ಈ ಕಾರಣದಿಂದ ಸ್ಪರ್ಧೆಯಲ್ಲಿ ಭಾಗವಹಿಸಿದರೂ ಸಹ ಸ್ಪರ್ಧೆಯಲ್ಲಿ ಉತ್ತೀರ್ಣರಾಗದೇ ಇರಬಹುದು.

ಮುರಳಿಮಂಗಲಧರೆ