*ಸಂಬಂಧಗಳಲ್ಲಿ ನಿಂತು ಹೋಗುವ ಮಾತು ಕತೆಗಳು – 24*

ಹೆತ್ತವರು ಮಗಳ ಮೇಲಿನ ಪ್ರೀತಿಯಿಂದ ಭಾವನಾತ್ಮಕವಾಗಿ ಬೆಂಬಲ ನೀಡಬಹುದು ಈ ಬೆಂಬಲವು ಅವರುಗಳು ಸದೃಢವಾಗಿರುವವರೆಗೆ ಅಥವಾ ಜೀವಂತವಾಗಿರುವವರೆಗೆ ಮಾತ್ರ ಸಿಗಬಹುದು. ಇದನ್ನು ತಿಳಿಯದೆ ಏನು ಮಾಡಿದರೂ ಹೆತ್ತವರ ಬೆಂಬಲ ಇದೆ ಎಂಬ ಧೋರಣೆಯಿಂದ ಎಲ್ಲದಕ್ಕೂ ತನ್ನ ಹಠವೇ ನಡೆಯಬೇಕೆಂದು ಎಲ್ಲರನ್ನೂ ಉದಾಸೀನತೆಯಿಂದ ನೋಡುತ್ತಾ ಇದ್ದು ಕಷ್ಟದಲ್ಲಿ ಸಿಲುಕಿದರೆ ಹೆತ್ತವರು ಸಹಾಯ ಮಾಡಲು ಅಸಹಾಯಕರಾದರೆ ಆಗ ಬೇರೆ ಯಾರೂ ಬಂದು ಸಹಾಯ ಮಾಡುವುದಿಲ್ಲ. ತನ್ನ ಸ್ವಯಂಕೃತ ಅಪರಾಧದಿಂದ ತೊಂದರೆಗೆ ಸಿಲುಕುವಂತಾಗುತ್ತದೆ. ಇದರಿಂದ ಒಂಟಿ ಜೀವನ ನಡೆಸುವಂತಾಗುತ್ತದೆ. ಹೆತ್ತವರ ಬೆಂಬಲ ಇದೆಯೆಂದು ಮೂಢವಾಗಿ ನಂಬಿ ಗಂಡನ ಮನೆಯಲ್ಲಿ ಎಲ್ಲರ ಬಳಿಯೂ ನಿಷ್ಠೂರ ಕಟ್ಟಿಕೊಂಡು ಸ್ವಯಂಕೃತ ಆಪರಾಧದಿಂದ ತವರು ಮನೆ ಸೇರಿದರೆ ಯಾರೊಬ್ಬರಿಗೂ ಮೊದಲಿನಂತೆ ಮಾತನಾಡಲು ಉತ್ಸುಕತೆ ಇರುವುದಿಲ್ಲ ಇದರಿಂದಾಗಿ ಗಂಡ ಹೆಂಡತಿ ಅತ್ತೆ ಸೊಸೆ ಮಾವ ಸೊಸೆ ಕಡೆಗೆ ಹೆತ್ತವರೂ ಸಹ ಮಾತನಾಡುವುದಿಲ್ಲ.

RELATED ARTICLES  ಪಾದಯಾತ್ರೆ ಮೂಲಕ ಮತ ಯಾಚಿಸಿದ ಸೂರಜ್ ನಾಯ್ಕ ಸೋನಿ.

ಗಂಡನ ಮನೆಯಲ್ಲಿ ಜಗಳವಾಡಿಕೊಂಡು ಬಂದ ಮಗಳನ್ನು ನೋಡಿ ಹೆತ್ತವರಿಗೆ ಕೊರಗುವಂತಾಗುತ್ತದೆ. ಮಗಳ ಮದುವೆ ಮಾಡಿ ಅವಳು ಗಂಡನ ಮನೆಯಲ್ಲಿ ಸಂತೋಷವಾಗಿರಲೆಂದು ಬಯಸಿದ ಹೆತ್ತವರ ಮನಸ್ಸು ಮಗಳು ಪುನಃ ವಾಪಸ್ ಬಂದರೆ ಯಾವ ರೀತಿ ಸಹಿಸಿಯಾರು? ಮೊದಲಿನಂತೆ ಮಗಳ ಭವಿಷ್ಯವನ್ನು ರೂಪಿಸಲು ಸಾಧ್ಯವಿಲ್ಲವಾಗಿರುತ್ತದೆ. ನಾವಿರುವವರೆಗೆ ನೋಡಿಕೊಂಡು ಹೋಗುತ್ತೇವೆ ನಮ್ಮ ನಂತರ ಹೇಗೆ ಎಂಬ ಚಿಂತೆಗೆ ಒಳಗಾಗಿರುತ್ತಾರೆ. ಮಕ್ಕಳಿದ್ದು ಅವರು ದೊಡ್ಡವರಾಗುವವರೆಗೆ ನೋಡಿಕೊಂಡರೆ ನಂತರ ಮಕ್ಕಳು ನೋಡಿಕೊಳ್ಳಬಹುದು ಎಂಬ ಮನೋಭಾವ ಇರುತ್ತದೆ. ಮಕ್ಕಳೇ ಇಲ್ಲದಿದ್ದರೆ ಏನು ಮಾಡಬೇಕೆಂಬುದೇ ತೋರುವುದಿಲ್ಲ. ಮನೆಗೆ ವಾಪಸ್ ಬಂದ ಮಗಳ ಜೊತೆ ಮೊದಲಿನಂತೆ ಮಾತನಾಡಲು ಆಗುವುದಿಲ್ಲ. ಬೇಸರ ಪಟ್ಟುಕೊಳ್ಳಬಹುದೆಂದು ಹತ್ತು ಮಾತನಾಡುವ ಕಡೆ ಒಂದೆರಡು ಮಾತುಗಳನ್ನು ಆಡಬಹುದು. 

ಮೊದಲಿಗೆ ಅವಿಭಕ್ತ ಕುಟುಂಬಗಳಿದ್ದು ಆ ಕುಟುಂಬಕ್ಕೆ ಹೊಸದಾಗಿ ಸೊಸೆ ಯಾರಾದರೂ ಬಂದರೆ ಅವರು ಆ ಕುಟುಂಬ ಸದಸ್ಯರ ಜೊತೆ ಹೊಂದಾಣಿಕೆ ಮಾಡಿಕೊಂಡು ಎಲ್ಲರ ಪ್ರೀತಿ ವಿಶ್ವಾಸವನ್ನು ಗಳಿಸಿ ಅವಿಭಕ್ತ ಕುಟುಂಬವನ್ನು ಮುನ್ನಡೆಸಿರುವ ಉದಾಹರಣೆಗಳು ಸಾಕಷ್ಟಿದೆ. ಈಗಿನ ಕಾಲದಲ್ಲಿ ಅಂತಹ ಅವಿಭಕ್ತ ಕುಟುಂಬ ಕಾಣಸಿಗುವುದು ಅಪರೂಪವಾಗಿದೆ. ನಾನಾ ಕಾರಣಗಳಿಂದ ಅವಿಭಕ್ತ ಕುಟುಂಬಗಳು ವಿಭಕ್ತ ಕುಟುಂಬಗಳಾಗಿ ಮಾರ್ಪಟ್ಟಿದೆ.

RELATED ARTICLES  ಘನ ಸರಕಾರದ ಬಳಿ ಘನತೆ ಕಳೆದುಕೊಂಡ ಬಿಪಿಎಲ್ ಹಾಗೂ ಅದರ ಪರಿವಾರದ ಅಳಲಿನ ಮನವಿ.

ಈಗಿನ ಕಾಲದಲ್ಲಿ ಒಂದು ಕುಟುಂಬವೆಂದರೆ ಅಪ್ಪ ಅಮ್ಮ ಮಗ ಅಥವಾ ಮಗಳು ಇವರ ಜೊತೆಗೆ ತಾತ ಅಜ್ಜಿ ಇರಬಹುದು. 

 ಆದರೆ ಹೆತ್ತವರು  ಮಕ್ಕಳ ಮೇಲಿನ ಪ್ರೀತಿಯಿಂದ ಬೆಂಬಲಕ್ಕೆ ನಿಲ್ಲುವಂತೆ ಮಕ್ಕಳು ಸಹ ಎಲ್ಲರೀತಿಯಲ್ಲೂ ಹೆತ್ತವರ ಬೆಂಬಲಕ್ಕೆ ನಿಲ್ಲಬೇಕು. ಬೇರೊಬ್ಬರ ಕಿವಿಮಾತು ಕೇಳಿ ಯಾರೂ ಯಾರನ್ನೂ ಉದಾಸೀನ ಮಾಡಬಾರದು. ಈ ಸನ್ನಿವೇಶ ಈಗ ಚಿಕ್ಕವರಿದ್ದು ದಿನಕಳೆದಂತೆ ವಯಸ್ಸಾಗುವ ಎಲ್ಲರಿಗೂ ಬಂದೊದಗಬಹುದು.

ಎನ್ ಮುರಳೀಧರ್ ವಕೀಲರು ಹಾಗೂ ಸಾಹಿತಿ ಲೇಖಕರು ನೆಲಮಂಗಲ (ಮುರಳಿಮಂಗಲಧರೆ)