ಗ್ರಾಮೀಣ ಬದುಕಿನ ಕಥೆ ವ್ಯಥೆಯಲ್ಲಿ ಯುವಕರ ಪಾತ್ರ – 8

ಬ್ಯಾಂಕಿಂಗ್, ಕೆಎಎಸ್, ಕೆಪಿಎಸ್ ಸಿ, ರೈಲ್ವೆ ಇತರೆ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳು ನಡೆದರೂ ಎಲ್ಲಾ ಪರೀಕ್ಷೆಗಳಿಗೂ ನಗರ ಪ್ರದೇಶಗಳವರಂತೆ ಗ್ರಾಮೀಣ ಯುವಕ ಯುವತಿಯರು ಭಾಗವಹಿಸುತ್ತಾರೆ. ಆದರೆ ಸರಿಯಾದ ತರಬೇತಿ ಹೊಂದದೆ ಇರುವುದರಿಂದ ಗ್ರಾಮೀಣ ಯುವಕ ಯುವತಿಯರು ಬೆರಳೆಣಿಕೆಯಷ್ಟು ಮಂದಿ ತೇರ್ಗಡೆ ಹೊಂದಬಹುದು. ಅದರಲ್ಲೂ ಗ್ರಾಮೀಣ ಭಾಗದವರು ಯಾವುದಾದರೂ ತಾತ್ಕಾಲಿಕವಾಗಿ ನಗರಗಳಲ್ಲಿ ಕೆಲಸಕ್ಕೆ ಹೋಗುತ್ತಿದ್ದು ಯಾವುದಾದರೂ ತರಬೇತಿ ಶಾಲೆಗಳಲ್ಲಿ ತರಬೇತಿ ಪಡೆದು ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬಹುದು. ಎಲ್ಲಾ ಪ್ರದೇಶಗಳಿಗೆ ಸಂಬಂಧಪಟ್ಟ ಪುಸ್ತಕಗಳು ದೊರೆಯಬಹುದು. ಆದರೆ ಪುಸ್ತಕಗಳನ್ನು ಮಾತ್ರ ಓದಿ ಉತ್ತೀರ್ಣರಾಗುವುದು ತರಬೇತಿ ಪಡೆದು ಉತ್ತೀರ್ಣರಾಗುವುದಕ್ಕಿಂತ ಕಷ್ಟವಿರುತ್ತದೆ.

RELATED ARTICLES  ಬಯಸಿದೆತ್ತರ ನೆಮ್ಮದಿ ಕೊಟ್ಟೀತೆ?

ಹತ್ತು ಸಲ ಓದುವುದಕ್ಕಿಂತ ಒಂದೆರಡು ಬಾರಿ ಪಾಠ ಹೇಳಿಸಿ ಕೊಂಡರೆ ಸುಲಭವಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರವೇಶ ಪಡೆಯಲು ನಿಗದಿತ ವಿಧ್ಯಾಭ್ಯಾಸ ಮಾಡಿರಬೇಕು ಎನ್ನುವುದು ತಿಳಿದ ವಿಷಯವೇ ಆಗಿದೆ. ಎಲ್ಲರೂ ನಿಗದಿತ ಪದವಿ ಅಥವಾ ಇನ್ನು ಯಾವುದಾದರೂ ನಿಗದಿತ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವುದು ವಿದ್ಯಾರ್ಥಿಗಳ ಮನೆಯ ವಾತಾವರಣ, ಪರಿಸರದ ಪ್ರಭಾವ, ಶಾಲಾ ಕಾಲೇಜುಗಳಲ್ಲಿನ ಭೋಧನಾ ಮಟ್ಟ ಹೀಗೆ ಹಲವಾರು ಕಾರಣಗಳಿಂದ ಒಂದು ಪದವಿ ಪಡೆಯುವುದು ಕೆಲವು ಸಲ ಬಹಳ ಕಠಿಣವೇ ಆಗಿರುತ್ತದೆ. ಒಂದೆರಡು ಪರೀಕ್ಷೆಗಳಲ್ಲಿ ಅನುತ್ತೀರ್ಣರಾದರೆ ಓದಿನ ಸಹವಾಸವೇ ಬೇಡವೆಂದು ಜಮೀನುಗಳಲ್ಲಿ ದುಡಿಯಲು ಅಥವಾ ಇತ್ತೀಚೆಗೆ ಗಾರ್ಮೆಂಟ್ ಕಾರ್ಖಾನೆಗಳು ಹೆಚ್ಚಾಗಿದ್ದು ಅದರಲ್ಲಿ ಕೆಲಸವನ್ನು ದೊರಕಿಸಿಕೊಂಡು ಜೀವನ ಸಾಗಿಸಲು ಮನಸ್ಸು ಮಾಡುತ್ತಾರೆ. ಯಾವ ವಿದ್ಯಾರ್ಥಿಯೂ ಮೂರ್ಖನಲ್ಲ. ವಿದ್ಯಾರ್ಥಿಗಳ ಅವರ ಪ್ರತಿಭೆಗೆ ತಕ್ಕಹಾಗೆ ಶಿಕ್ಷಣ, ತರಬೇತಿ ನೀಡಿದರೆ ಎಲ್ಲರೂ ಬುದ್ದಿವಂತರಾಗಿ ಹೊರಹೊಮ್ಮಬಹುದು. ಸರಿಯಾದ ತರಬೇತಿ ಮತ್ತು ಶಿಕ್ಷಣ ನೀಡಲು ಅನಿವಾರ್ಯ ಕಾರಣಗಳಿಂದ ಸಾಧ್ಯವಾಗದಿದ್ದರೆ ತನಗೆ ಅಥವಾ ತಮ್ಮ ಮಕ್ಕಳಿಗೆ ಅದೃಷ್ಟವಿಲ್ಲ ಎಂದು ಕೈ ಚೆಲ್ಲಬಹುದು. ಇದರಲ್ಲಿ ಹೆಚ್ಚಾಗಿ ಸ್ವಯಂಕೃತ ಅಪರಾದದಗಳೇ ಕಾರಣವಾಗಿವೆ ಎಂದರೆ ತಪ್ಪಾಗಲಾರದು

RELATED ARTICLES  ನಿಂದಕರು

ಮುರಳಿಮಂಗಲಧರೆ