ಗ್ರಾಮೀಣ ಬದುಕಿನ ಕಥೆ ವ್ಯಥೆಯಲ್ಲಿ ಯುವಕರ ಪಾತ್ರ – 3

ಕೂಲಿ ಮಾಡುತ್ತಿದ್ದವರನ್ನು ಅಥವಾ ವಾರ ಗುತ್ತಿಗೆಗೆ ಮಾಡುತ್ತಿದ್ದವರು ಭೂ ಸುಧಾರಣಾ ಕಾನೂನಿನಿಂದ ಒಮ್ಮೆಲೇ ಜಮೀನಿನ ಮಾಲೀಕರಾಗಿ ತಮಗೆ ಇಷ್ಟವಾದ ಬೆಳೆಗಳನ್ನು ಬೆಳೆದು ಸುಖವಾಗಿರಲು ಆಗದೇ ಇರಲು ಮೊದಲಿಗೆ ಪ್ರಕೃತಿ ವಿಕೋಪ ಈ ಪ್ರಕೃತಿ ವಿಕೋಪದಿಂದ ಸರಿಯಾದ ಸಮಯಕ್ಕೆ ಮಳೆ ಬರದೆ ಅನಾವೃಷ್ಠಿಯಾಗಿ, ಅಕಸ್ಮಾತ್ ಬಂದರೂ ಒಂದೇ ಪ್ರದೇಶದಲ್ಲಿ ಸುರಿದು ಆ ಪ್ರದೇಶಗಳಲ್ಲಿ ಅತಿವೃಷ್ಠಿಯಾಗಿ ಬೆಳೆದಿರುವ ಫಸಲು ಕೈಗೆ ಸಿಗದಂತೆ ಆಗುತ್ತಿದೆ. ಕೊಳವೆ ಬಾವಿಗಳನ್ನು ತೋಡಿಸೋಣವೆಂದರೆ ಕೆಲವು ಕಡೆ 1000 ಅಡಿಗಳಷ್ಟು ಕೊರೆದರೂ ನೀರಿನ ಕುರುಹು ತಿಳಿಯುವುದೇ ಇಲ್ಲ. ಕೊಳವೆ ಬಾವಿ ತೋಡಿಸಿ ಹೊಲಸನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಗದೇ ಕೈ ಚೆಲ್ಲಿ ಕುಳಿತು ಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ. ಮಳೆಯ ಕಣ್ಣಾಮುಚ್ಚಾಲೆ ಆಟದಿಂದ ಯಾವುದಾದರೂ ನಿರ್ದಿಷ್ಟ ಬೆಳೆ ತೆಗೆಯಲು ಆಗದಂತಾಗಿದೆ. ಬಂದಿರುವ ಮಳೆಯಲ್ಲಿ ಸಾಧ್ಯವಾದಷ್ಟೂ ಬೆಳೆ ಬೆಳೆದರೂ ಬೆಳೆ ಕಟಾವು ವೇಳೆಗೆ ಚಂಡಮಾರುತ ಭೀತಿ ಎದುರಾಗಿರುವುದುಂಟು. ಇದರಿಂದಲೂ ಬೆಳೆದಿರುವ ಬೆಳೆ ಪೂರ್ಣವಾಗಿ ಕೈ ಸೇರುವುದು ಅನುಮಾನವಾಗಿರುತ್ತದೆ.

RELATED ARTICLES  ಒಂದೇ ದಿನ ಕೋಟಿ ಕೋಟಿ ಕೊರೋನಾ ಕೇಸ್‌‌..!

ಹಾಗೂ ಹೀಗೂ ಬೆಳೆ ಬೆಳೆದರೂ ಮಾರ್ಕೆಟ್ ಗೆ ಹಾಕಲು ಬಹಳ ದೊಡ್ಡ ಸಮಸ್ಯೆ ಬೆಲೆ ಕುಸಿತವಾಗುವುದು. ಇರುವ ಹಣವನ್ನೆಲ್ಲಾ ಖರ್ಚುಮಾಡಿ ಕಷ್ಟಪಟ್ಟು ಬೆಳೆ ಬೆಳೆದರೂ ಮಾರಲಾಗದಂತಹ ಸನ್ನಿವೇಶ ಎದುರಾಗುತ್ತದೆ. ಒಂದೊಂದು ಸಲ ಕಟಾವು ಮಾಡಿ ಮಾರ್ಕೆಟ್ ಗೆ ಹಾಕುವ ಖರ್ಚು ಸಹ ಬರುವುದಿಲ್ಲ. ಇನ್ನು ಬೆಳೆ ಬೆಳೆದಿರುವ ಖರ್ಚು ಕಳೆದು ಲಾಭ ಪಡೆಯುವುದು ಕನಸಿನ ಮಾತು. ಕೆಲವೊಮ್ಮೆ ಕಷ್ಟಪಟ್ಟು ಕಟಾವು ಮಾಡಿ ಮಾರ್ಕೆಟ್ ಗೆ ತಂದರೂ ಬೆಂಬಲ ಬೆಲೆ ಸಿಗದೆ ಮಾರ್ಕೆಟ್ ಗೆ ತಂದ ಬೆಳೆಯನ್ನು ರಸ್ತೆಯಲ್ಲಿ ಚೆಲ್ಲಿ ಬರಿಗೈಲಿ ವಾಪಸ್ಸಾಗಿರುವ ನಿದರ್ಶನಗಳುಂಟು.

RELATED ARTICLES  ಹಿಂದು ಮತ್ತು ಹಿಂದುಗಳ ಸ್ವಾಭಾವಿಕ ಗುಣ-ಧರ್ಮ (‘ಶ್ರೀಧರಾಮೃತ ವಚನಮಾಲೆ’).

ವರ್ಷವೆಲ್ಲಾ ಕಷ್ಟಪಟ್ಟು ದುಡಿದು ಕೈಯಲ್ಲಿದ್ದ ಹಣವನ್ನೆಲ್ಲಾ ಖರ್ಚು ಮಾಡಿ ಕಡೆಗೆ ಹಣ ದೊರೆಯದಿದ್ದರೆ ಎಂತಹ ಸನ್ನಿವೇಶ ಎದುರಾಗುತ್ತದೆ ಎಂದು ಊಹಿಸಲೂ ಅಸಾಧ್ಯ.

ಕಟಾವು ಮಾಡದೆ ಬೆಳೆಗಳು ಗಿಡದಲ್ಲಿದ್ದಾಗ ಸಂತಸಹೊಂದಿ ಬೆಳೆಗಳನ್ನು ಮಾರಾಟ ಮಾಡಿ ಬರುವ ಹಣದಲ್ಲಿ ತನ್ನೆಲ್ಲಾ ಯೋಜನೆಗೆ ಖರ್ಚು ಮಾಡಬೇಕೆಂದಿದ್ದವರಿಗೆ ತಾನು ನಿರೀಕ್ಷಿಸಿದಷ್ಟು ಹಣ ಬರದಿದ್ದರೆ ಎಲ್ಲಾ ಯೋಜನೆಗಳು ತಲೆಕೆಳಕಾಗುತ್ತದೆ.

ಎನ್ ಮುರಳೀಧರ್ ವಕೀಲರು
ಹಾಗೂ ಸಾಹಿತಿ ಲೇಖಕರು ನೆಲಮಂಗಲ (ಮುರಳಿಮಂಗಲಧರೆ)