ಗ್ರಾಮೀಣ ಬದುಕಿನ ಕಥೆ ವ್ಯಥೆಯಲ್ಲಿ ಯುವಕರ ಪಾತ್ರ 13

ತುಂಬಾ ಮುಖ್ಯವಾದ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ವಿದ್ಯುತ್ ಸೌಲಭ್ಯ. ಈ ವಿದ್ಯುತ್ ಸೌಲಭ್ಯ ಹೆಸರಿಗೆ ಮಾತ್ರ ಇರುತ್ತದೆ. ಆದರೆ ಯಾವಾಗ ಬರುತ್ತದೋ ಯಾವಾಗ ಹೋಗುತ್ತದೋ ಯಾರಿಗೂ ತಿಳಿಯದು. ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ರೈತರು, ವಿದ್ಯಾರ್ಥಿಗಳು, ಕಾರ್ಮಿಕರು ಕಂಗಾಲಾಗಿದ್ದಾರೆ.

ಮೊದಲಿಗೆ ಎಲ್ಲಾ ಕೆಲಸಗಳನ್ನು ಮನುಷ್ಯ ತನ್ನ ಸ್ವಸಾಮರ್ಥ್ಯದಿಂದ ಮಾಡುತ್ತಿದ್ದ. ಈಗ ಪ್ರತಿಯೊಂದು ಕೆಲಸವನ್ನು ಮಾಡಲು ಯಂತ್ರವನ್ನು ಅವಲಂಬಿಸಬೇಕಾಗಿದೆ. ಯಂತ್ರ ಕಾರ್ಯ ನಿರ್ವಹಿಸಬೇಕಾದರೆ ವಿದ್ಯುತ್ ಅವಶ್ಯಕವಾಗಿ ಬೇಕು ಇದು ಎಲ್ಲರಿಗೂ ತಿಳಿದಿರುವ ವಿಚಾರ. ಇದನ್ನು ಹೇಳುವ ಅವಶ್ಯಕತೆ ಇಲ್ಲದಿದ್ದರೂ ಇದರಿಂದ ಯಾರಿಗೆ ಎಷ್ಟು ಅನುಕೂಲ ಮತ್ತು ಇನ್ಯಾರಿಗೆ ಅನಾನುಕೂಲವಿದೆ ಯಾರಿಗೆ ಲಾಭ ಯಾರಿಗೆ ನಷ್ಟ ಉಂಟಾಗುತ್ತದೆ ಎಂಬುದನ್ನು ಆಲೋಚಿಸಬೇಕಾಗಿದೆ.

RELATED ARTICLES  ಕಳೆದುಹೋದ ಎಳೆಯ ದಿನಗಳು (ಭಾಗ ೧೮)

ವಿದ್ಯುತ್ ಸರಬರಾಜು ಮತ್ತು ಅದರ ಉಪಯೋಗ ಯಾವರೀತಿ ಇದೆ ಎಂದರೆ ನಗರ ಪ್ರದೇಶಗಳಿಗೆ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ಶ್ರೀಮಂತ ಮತ್ತು ಬಡವನ ಸಂಬಂಧ ಇದ್ದಂತೆ ಇದೆ. ಇತ್ತ ಶ್ರೀಮಂತನು ವೈಭವ ಜೀವನ ನಡೆಸುತ್ತಿದ್ದರೆ ಅತ್ತ ಬಡವನು ಒಂದು ದಿನದ ಗಂಜಿಗಾಗಿ ಕಷ್ಟಪಟ್ಟು ದುಡಿಯುವಂತೆ ವಿದ್ಯುತ್ ಸರಬರಾಜು ಸಹ ಅದೇರೀತಿ ಇದೆ. ನಗರ ಪಟ್ಟಣ ಪ್ರದೇಶದ ಜನರು ವಿದ್ಯುತ್ ಪಡೆಯುವಲ್ಲಿ ಶ್ರೀಮಂತರಾಗಿದ್ದು ತಮ್ಮ ಇಚ್ಛಾನುಸಾರ ಅವಶ್ಯಕತೆ ಇಲ್ಲದಿದ್ದರೂ ಯಾವುದೇ ವಿದ್ಯುತ್ ಉಳಿತಾಯ ಮಾಡಬೇಕೆಂಬ ಮನೋಭಾವ ಇಲ್ಲದೆ ಮತ್ತು ಹಣವನ್ನು ನೀಡುತ್ತೇವೆ ವಿದ್ಯುತ್ ಉಪಯೋಗಿಸುತ್ತೇವೆ ಎಂಬ ಧೋರಣೆಯಿಂದ ಯಾವುದೇ ಇತಿಮಿತಿ ಇಲ್ಲದೆ ವಿದ್ಯುತ್ ಉಪಯೋಗಿಸುತ್ತ ಜೀವನ ನಡೆಸುವವರು ಒಂದು ಕಡೆಯಾದರೆ,

RELATED ARTICLES  ಬದುಕಿಗೆ ಬಣ್ಣ ತುಂಬಿದವರು

ಹನಿ ಹನಿ ನೀರಿಗಾಗಿ ವಿದ್ಯುತ್ ನಂಬಿಕೊಂಡಿರುವ ಜನಗಳು ಹಾಗೂ ಕೊಳವೆ ಬಾವಿಗಳನ್ನು ತೋಡಿ, ಕೊಳವೆಬಾವಿಗಳಿಂದ ನೀರು ಹೊರಕ್ಕೆ ತೆಗೆದು ಬೆಳೆಗಳಿಗೆ ನೀರುಣಿಸಲು ವಿದ್ಯುತ್ ಇಲ್ಲದೆ ಕೈಚೆಲ್ಲಿ ಕುಳಿತಿರುವ ರೈತ ಸಮೂಹ ಇನ್ನೊಂದು ಕಡೆ ಇರುವುದನ್ನು ನೋಡಿದ್ದೇವೆ.

ಎನ್ ಮುರಳೀಧರ್ ವಕೀಲರು ಹಾಗೂ ಸಾಹಿತಿ ಲೇಖಕರು ನೆಲಮಂಗಲ