*ಸಂಬಂಧಗಳಲ್ಲಿ ನಿಂತು ಹೋಗುವ ಮಾತು ಕತೆಗಳು – 27*

ಸ್ನೇಹದಲ್ಲಿ ಮಾತುಕತೆ ನಿಲ್ಲಲು ಮುಖ್ಯ ಕಾರಣ ಅಹಂಕಾರ ಮತ್ತು ಹಣದ ವ್ಯವಹಾರ. ಇದರಿಂದ ಲೇ ಎಷ್ಟೋ ಸ್ನೇಹಗಳು ದ್ವೇಷಕ್ಕೆ ತಿರುಗಿ ಕೆಲವೊಮ್ಮೆ ಹೊಡೆದಾಟಗಳು ನಡೆದು ಮಾತುಕತೆಗಳು ಸಂಪೂರ್ಣವಾಗಿ ನಿಂತು ಹೋಗುತ್ತದೆ. ಅದೇರೀತಿ ಒಂದು ಸಾಂತ್ವನದ ನುಡಿ ಒಳ್ಳೆಯ ಮಾತಿನಿಂದಲೇ ಅನೇಕ ಸ್ನೇಹಗಳು ಹುಟ್ಟಿಕೊಳ್ಳುತ್ತವೆ.

ಮೊದಲಿನಿಂದಲೂ ಇಬ್ಬರು ಸ್ನೇಹಿತರಾಗಿದ್ದು ಇದರಲ್ಲಿ ಒಬ್ಬರು ಯಾವುದಾದರೂ ಅವಕಾಶ ಹೊಂದಿ ಇದು ಸ್ವಯಂ ದುಡಿಮೆಯಿಂದ ಅಕಸ್ಮಾತ್ ಅನಿರೀಕ್ಷಿತವಾಗಿ ಒದಗಿ ಬಂದ ಐಶ್ವರ್ಯದಿಂದ(ಇದನ್ನು ಕೆಲವರು ಅದೃಷ್ಟ ಎನ್ನಬಹುದು) ದಿಢೀರೆಂದು ಶ್ರೀಮಂತರಾದರೆ ಆಗ  ಅವರುಗಳು ಅವರ ಮಟ್ಟಕ್ಕೆ ಇರುವವರನ್ನು ಅಂದರೆ ಶ್ರೀಮಂತರನ್ನೇ ಹುಡುಕಿಕೊಂಡು ಹೋಗಿ ಸ್ನೇಹಿತರಾಗುತ್ತಾರೆ. ಮೊದಲಿನಿಂದ ಇದ್ದ ಸ್ನೇಹ ಕಮರಿಹೋಗುತ್ತದೆ. ಮೊದಲಿನಿಂದಲೂ ಸಾಧಾರಣ ವ್ಯಕ್ತಿಯಾಗಿದ್ದು ದಿಢೀರನೆ ಶ್ರೀಮಂತರಾದರೆ ತಕ್ಷಣ ಹಳೆಯ ಜೀವನವನ್ನೆಲ್ಲಾ ಮರೆತು ಹೊಸ ಶ್ರೀಮಂತ ಜೀವನ ನಡೆಸಲು ಉತ್ಸುಕರಾಗುತ್ತಾರೆ. ಇದರಲ್ಲಿ ಯಾರನ್ನೂ ದೂಷಿಸುವಂತಿಲ್ಲ. *ಕಾಲಾಯ ತಸ್ಮೈ ನಮಹ ಎಂಬಂತೆ* ಕಾಲಕ್ಕೆ ತಕ್ಕಂತೆ ತನ್ನ ಐಶ್ವರ್ಯಕ್ಕೆ ತಕ್ಕಂತೆ ಜೀವನ ನಡೆಸುವುದು ಸ್ವಾಭಾವಿಕ. ಆದರೆ ಶ್ರೀಮಂತರಾಗುವ ಜೊತೆಗೆ ಅಹಂಕಾರವನ್ನು ಬೆಳೆಸಿಕೊಳ್ಳಬಾರದು. ತಾನು ಹಿಂದೆ ಕಷ್ಟಪಟ್ಟಿರುವುದನ್ನು ಮರೆತು ಹಳೆಯ ಸ್ನೇಹಿತರನ್ನು ಮರೆತು ಜೀವನ ನಡೆಸಿದರೆ ಅವರ *ಆಸ್ತಿ ಮೌಲ್ಯ ಹೆಚ್ಚಳವಾಗಿದ್ದರೂ ಜೀವನದ ಮೌಲ್ಯ ಕಡಿಮೆಯಾಗುತ್ತದೆ.*

RELATED ARTICLES  ಪ್ರೀತಿ ಕುರುಡಾದರೆ ದ್ವೇಷ ಕಿವುಡಲ್ಲವೇ?

 ಮೊದಲು ಬಡತನದಲ್ಲಿದ್ದು ನಂತರ ಶ್ರೀಮಂತರಾದರೆ ಮೊದಲಿನಂತೆ ಜೀವನ ನಡೆಸಬೇಕೇ? ಎನ್ನಬಹುದು. ಆದರೆ ಆ ರೀತಿಯಲ್ಲದಲ್ಲ. ಮೊದಲಿನಂತೆ ಜೀವನ ನಡೆಸಬೇಕು ಎಂದು ಹೇಳುವುದಿಲ್ಲ. ಮೊದಲಿಗೆ ಇದ್ದ ಸ್ನೇಹ ಪ್ರೀತಿಯನ್ನು ಎಂದಿಗೂ ಮರೆಯಬಾರದು. ಹಳೆಯ ಸ್ನೇಹಿತರು ಬಡವರಾಗಿದ್ದು ಇವರು ಶ್ರೀಮಂತರಾದರೆ ಇನ್ನೆಲ್ಲಿ ತನ್ನ ಬಳಿ ಬಂದು ಹಣವನ್ನು ಕೇಳುತ್ತಾನೋ ಅಕಸ್ಮಾತ್ ಕೊಟ್ಟರೂ ಹಿಂದಿರುಗಿಸುವುದಿಲ್ಲವೆಂಬ ಭಯದಿಂದ ಮಾತನಾಡಿಸದೇ ದೂರ ಉಳಿಯಬಾರದು. ಯಾರೂ ಸಹ ತಮ್ಮ ಸ್ವಾಭಿಮಾನ ಬಿಟ್ಟು ಯಾರನ್ನೂ ಹಣ ನೀಡಿರೆಂದು ಕೇಳುವುದಿಲ್ಲ. ಇದಕ್ಕೆ ಅಪವಾದವಾಗಿ ಬೆರಳೆಣಿಕೆಯಷ್ಟು ಇರಬಹುದು.  ಯಾರೇ ಆಗಲಿ ಹಣವಿದೆಯೆಂದು ಯಾರನ್ನೂ ಕೇಳುವುದಿಲ್ಲ. ಅದೇಷ್ಟೇ ಹಳೆಯ ಸ್ನೇಹವಿದ್ದರೂ ಹಣವನ್ನು ಕೇಳಲು ಸಂಕೋಚ ಇದ್ದೇ ಇರುತ್ತದೆ. ಆಳೆದೂ ತೂಗಿಯೇ ಇನ್ನೊಬ್ಬರಲ್ಲಿ ಕೇಳುತ್ತಾರೆ. ಇದನ್ನು ಅರಿಯದೆ ಶ್ರೀಮಂತನಾದವನು ಅಹಂಕಾರ ಮತ್ತು ತಿರಸ್ಕಾರ ದಿಂದ ವರ್ತಿಸಿದರೆ ಸ್ನೇಹವನ್ನೇ ಕಳೆದುಕೊಳ್ಳಬೇಕಾಗುತ್ತದೆ. 

RELATED ARTICLES  ಬದುಕಿಗೆ ಬಣ್ಣ ತುಂಬಿದವರು

ಕೊಡುವ ಮನಸ್ಸಿಲ್ಲದಿದ್ದರೂ ಸಹ ತಿರಸ್ಕಾರ ಭಾವದಿಂದ ಮಾತನಾಡಬಾರದು. ಅಕಸ್ಮಾತ್ ಒಂದು ಸಾವಿರ ಕೇಳಿದರೆ ಐದನೂರು ಕೊಟ್ಟಾದರೂ ಸಮಾಧಾನ ಪಡಿಸಬಹುದು. ಒಂದು ಸಲ ಸಾಲ ನೀಡಿ ಅದನ್ನು ಹಿಂದಿರುಗಿಸಲೇಬೇಕೆಂಬ ಭಾವನೆ ಸಾಲ ಪಡೆದವರಿಗೆ ಇದ್ದು ಸಮಯಕ್ಕೆ ಸರಿಯಾಗಿ ನೀಡಿದರೆ ಮನ ಇಬ್ಬರಲ್ಲೂ ಮನಸ್ಥಾಪ ಬರುವುದಿಲ್ಲ. ಒಂದು ಸಲ ಸಾಲ ಪಡೆದು ಅದನ್ನು ವಾಪಸ್ ನೀಡದೆ ಪುನಃ ಕೇಳಲೇ ಬಾರದು. ಕೇಳಿದರೂ ಅವರು ಕೊಡುವ ಪರಿಸ್ಥಿತಿಯಲ್ಲಿರುವುದಿಲ್ಲ. 

ಎನ್ ಮುರಳೀಧರ್ ವಕೀಲರು ಹಾಗೂ ಸಾಹಿತಿ ಲೇಖಕರು ನೆಲಮಂಗಲ (ಮುರಳಿಮಂಗಲಧರೆ)