ಸರಯು ನದಿ ತೀರದ ಮೇಲೆ ಇರುವ ಪವಿತ್ರ ಕ್ಷೇತ್ರವೇ ಅಯೋಧ್ಯೆ.ಇದು ಸೂರ್ಯವಂಶದ ರಾಜಧಾನಿ ಕೂಡ ಆಗಿತ್ತು.ಎಲ್ಲಕ್ಕೂ ಮಿಗಿಲಾಗಿ ಶ್ರೀರಾಮನ ಹುಟ್ಟೂರು ಅಯೋಧ್ಯೆ.ಗುರುನಾನಖ್ ಅವರು ಶ್ರೀರಾಮನನ್ನು ಸ್ಮರಿಸಿದ್ದರಿಂದ ಇಲ್ಲೊಂದು ಬ್ರಹ್ಮಕುಂಡ ಗುರುದ್ವಾರವಿದೆ.ನಿಸ್ಸಂಶಯವಾಗಿ ಅಯೋಧ್ಯ ಹಿಂದೂಗಳ ಅವಿಭಾಜ್ಯ ಅಂಗ ಎಂದು ಹೇಳಬಹುದು.

ವಾಲ್ಮೀಕಿ ರಾಮಯಣ ಬರೆದ ಜಾಗವಿದು ಎನ್ನುವ ನಂಬಿಕೆ ಇನ್ನೂ ಇದೆ.ಇಲ್ಲಿಯೆ ರಾಮ ಹುಟ್ಟಿ ಬೆಳೆದಿದ್ದು,ಅಧ್ಯಯನ ಮಾಡಿದ್ದು ಮತ್ತು ರಾಮನ ಪಟ್ಟಾಭಿಷೇಕಕ್ಕೆ ತಯಾರಿ ನಡೆದಿದ್ದು ಎಲ್ಲವೂ ಇಲ್ಲಿಯೇ.ಈ ಅಯೋಧ್ಯದಲ್ಲಿಯೆ ರಾಮನ ಅರಮನೆ ಇದ್ದಿದ್ದು ಮತ್ತು ರಾಮನ ಮಂದಿರ ಇದ್ದದ್ದು.
ಕಾಲ ಉರುಳಿತು,ಯುಗವೂ ಕಳೆಯಿತು ಆದರೆ ರಾಮನ ನೆನಪು ಮಾತ್ರ ಅಳಿಯಲಿಲ್ಲ ರಾಮ ಮಹಾಪುರುಷನಾದ,ಮರ್ಯಾದ ಪುರುಷನಾದ.ತದನಂತರ ವಿಕ್ರಮಾದಿತ್ಯನೇ ರಾಮನ ಭವ್ಯ ಮಂದಿರ ಕಟ್ಟಿಸಿ ಸಮಾಜಕ್ಕೆ ಅರ್ಪಿಸಿದ.ರಾಮನ ನೆನಪು ಶಾಶ್ವತವಾಗಿಸಿದ ಆದರೆ ಧಾಳಿಕೋರರ ಕೆಟ್ಟಕಣ್ಣು ಈ ಮಂದಿರದ ಮೇಲೆ ಬಿತ್ತು ಮೊಘಲ್ ದೊರೆ ಬಾಬರ್ ನ ಕಣ್ಣು ಈ ಮಂದಿರದ ಮೇಲೆ ಬಿತ್ತು.ಹಿಂದೂಗಳ ಆರಾಧ್ಯ ದೇವ ರಾಮನ ಮಂದಿರವನ್ನೇ ಕೆಡವಿದರೆ ಹಿಂದೂ ಧರ್ಮ ನಾಶವಾದಂತೆ ಎಂದೂ ಬಾಬರ್ ಭಾವಿಸಿದ.ಬಾಬರ್ ನ ಸೇನೆ ಮೀರ್ ಭಾಖಿಯ ನೇತ್ರತ್ವದಲ್ಲಿ ಬಂದು ಹಿಂದೂಗಳ ಪವಿತ್ರ ರಾಮನ ಮಂದಿರವನ್ನು ಕೆಡವಿ ಅದೇ ಜಾಗದಲ್ಲಿ ಮಂದಿರದ ಅವಷೇಶಗಳಿಂದ ಮಸೀದಿಯನ್ನು ಕಟ್ಟಿದ.ಮೀರ್ ಭಾಖಿ ಕಟ್ಟಿದ ಹೊಸ ಮಸೀದಿಯ ಹೆಸರೇ ಜನ್ಮಸ್ಥಾನ್ ಮಸೀದ್.ಆದರೆ ಅದು ಯಾರ ಜನ್ಮಸ್ಥಾನ ಎಂದು ಕರೆಯಬೇಕು ಎಂಬ ಗೊಂದಲದಲ್ಲಿದ್ದಾಗ ಆಗ ಕೆಲವು ಬುದ್ದಿಜೀವಿಗಳು ಅದನ್ನೆ ಬಾಬರಿ ಮಸೀದಿ ಎಂದರು.ಆದರೆ ಸರ್ಕಾರಿ ಕಡತಗಳಲ್ಲಿ ಇಂದಿಗೂ ಜನ್ಮಸ್ಥಾನ ಮಸೀದಿ ಎಂದೇ ಉಲ್ಲೇಖವಿದೆ.1528 ಇಂದ 1934ರ ವರೆಗೂ 76 ಬಾರಿ ರಾಮ ಮಂದಿರಕ್ಕೆ ಕದನಗಳು ನಡೆದವು ಸುಮಾರು 3 ಲಕ್ಷಕ್ಕೂ ಅಧಿಕ ಹಿಂದೂಗಳು ಭಾಗವಹಿಸಿದ್ದರು ಅನೇಕ ಬಾರಿ ಗೆಲುವು ಹಾಗೂ ಸೋಲು.1934 ರಲ್ಲಿ ಹಿಂದೂಗಳು ಆಕ್ರಮಣ ಮಾಡಿದಾಗ ಬಹುಪಾಲು ಮಸೀದಿ ಹಾಳಾಗಿ ಹೋಯಿತು.ಆಗ ಅಂದಿನ ಬ್ರಿಟೀಷ್ ಕಲೆಕ್ಟರ್ ಜೆ.ವಿ.ನಿಕಲ್ ಸನ್ ಪುನಃ ಮಸೀದಿಯನ್ನು ಪುನರ್ ನಿರ್ಮಿಸಿದ.1949 ರ ಡಿಸೆಂಬರ್ ಕೊನೆಯ ವೇಳೆಗೆ ಮಧ್ಯರಾತ್ರಿ ರಾಮನ ವಿಗ್ರಹ ವಿವಾದಿತ ಕಟ್ಟಡದ ಒಳಗೆ ಉದ್ಭವವಾಯಿತು.ಶ್ರೀ ರಾಮನ ಅನುಗ್ರಹದಿಂದ ಉದ್ಭವಗೊಂಡ ಈ ವಿಗ್ರಹವನ್ನು ನೋಡಲು ಲಕ್ಷಾಂತರ ಭಕ್ತರು ಆಗಮಿಸಿದರು.ಆದರೆ ವಿರೋಧಿಗಳಿಂದ ಆ ವಿಗ್ರಹವನ್ನು ಕೀಳುವ ಪ್ರಯತ್ನ ನಡೆಯಿತು ಆದರೆ ಅದು ಸಾಧ್ಯವಾಗಲಿಲ್ಲ.ತದನಂತರ ಸರ್ಕಾರವೇ ರಾಮನಿಗೆ ಪೂಜೆ ಸಲ್ಲಿಸಲು ಅರ್ಚಕರನ್ನು ನೇಮಿಸಿತು.ಅಲ್ಲಿ ಅರ್ಚಕರನ್ನು ಬಿಟ್ಟು ಉಳಿದವರಿಗೆ ಯಾರಿಗೂ ಕೂಡ ಪ್ರವೇಷವಿರಲಿಲ್ಲ.ಕಳೆದ 69 ವರ್ಷಗಳಿಂದ ಅಲ್ಲಿ ನಡೆಯುತ್ತಿರುವುದು ರಾಮನಿಗೆ ಪೂಜೆ ಹೊರತು ಅಲ್ಲಾನಿಗೆ ಅಲ್ಲ,ಅಂದಮೇಲೆ ಅದು ಮಸೀದಿ ಹೇಗಾಗುತ್ತದೆ ಅದು ಮಂದಿರ ತಾನೇ?ತದನಂತರ ಹಲವು ಹೋರಾಟದ ನಂತರ 1985 ರಲ್ಲಿ ಭಕ್ತರಿಗೆ ರಾಮನ ದರ್ಶನಕ್ಕೆ ಮುಕ್ತ ಅವಕಾಶ ದೊರೆಯಿತು.ಆದರೆ ಅದನ್ನು ಸಹಿಸದ ಮುಸ್ಲೀಂ ಸಮುದಾಯದವರು ಬಾಬರಿ ಮಸೀದಿ ಕ್ರೀಯಾ ಸಮಿತಿಯನ್ನು ಹುಟ್ಟುಹಾಕಿದರು.

RELATED ARTICLES  ಮೃತ್ಯುವಿನ ಭಯವೇಕೆ….?

ತದನಂತರ ಅದು ವಿವಾದಿತ ಬಾಬರಿ ಮಸೀದಿಯಾಗಿ ನಾಮಕರಣವಾಯಿತು.ತದನಂತರ ಹಿಂದೂಗಳ ಉಗ್ರ ಹೋರಾಟದ ಫಲವಾಗಿ 1989 ರ ನವೆಂಬರ 9 ರ ಮಧ್ಯಾಹ್ನ 1.55 ಕ್ಕೆ ರಾಮ ಮಂದಿರಕ್ಕೆ ಶಿಲಾನ್ಯಾಸವಾಯಿತು,ಆದರೆ ಕೆಲವು ಕುತಂತ್ರಿ ರಾಜಕಾರಣಿಗಳಿಂದ ಮಂದಿರ ಕಾರ್ಯಗಳು ಮುಂದುವರಿಯಲು ಸಾಧ್ಯವಾಗಲಿಲ್ಲ.ತದನಂತರ 1992 ರಲ್ಲಿ ಕರ ಸೇವಕರ ಪ್ರಚಂಡ ಅಲೆ ವಿವಾದಿತ ಕಟ್ಟಡದ ಕಡೆ ನುಗ್ಗಿತು ಗುಂಬಜ್ ಮೇಲೆ ಏರಿ ಕಟ್ಟಡವನ್ನು ಧ್ವಂಸ ಮಾಡಿದರು ಅಲ್ಲಿಗೆ ಹಿಂದೂ ಸಮಾಜಕ್ಕೆ ತಗುಲಿದ್ದ ನೂರಾರು ವರ್ಷಗಳ ಕಳಂಕ ಅಳಿಸಿ ಹೋಯಿತು.480 ವರ್ಷಗಳ ಹಿಂದೆ ಪವಿತ್ರ ಹಿಂದೂಗಳ ಮಂದಿರವನ್ನು ಕೆಡವಿ ಬಾಬರ್ ಕಟ್ಟಿಸಿದ್ದ ಮಸೀದಿಯ 3 ಗುಂಬಜ್ ಅನ್ನು ನೆಲಸಮಗೊಳಿಸಿದ್ದರು.

RELATED ARTICLES  ಶ್ರೀಧರರು ತಮ್ಮ ಪತ್ರದ ಮೂಲಕ ಜನತೆಗೆ ನೀಡಿದ ಸಂದೇಶ ಯಾವುದು ಗೊತ್ತಾ?


ಪವಿತ್ರ ಅಯೋಧ್ಯ ರಾಮ ಮಂದಿರ ಬಾಬರ್ ನ ದಾಳಿಯಿಂದ ಬಾಬರಿ ಮಸೀದಿ ಆಗಿದೆ ಹೋರತು,ಆದರೆ ಅದು ಎಂದಿಗೂ ಹಿಂದೂಗಳ ಪವಿತ್ರ ಕ್ಷೇತ್ರ ಎಂಬುದಕ್ಕೆ ಈ ಮೇಲಿನ ಘಟನೆಗಳೇ ಸಾಕ್ಷಿ.

✍ ಪ್ರೀತಮ್ ಹೆಬ್ಬಾರ್.