Home Health ‘ಅಡುಗೆಮನೆಯಲ್ಲಿ ‘ಮಸಾಲೆ’ಯಾಗಿ, ಒಂದೇ ಅಲ್ಲ,ಔಷಧಿ’ಯಾಗಿಯೂ ಬಳಸಬಹುದು ಈ ಜಾಯಿಕಾಯಿ..!!

‘ಅಡುಗೆಮನೆಯಲ್ಲಿ ‘ಮಸಾಲೆ’ಯಾಗಿ, ಒಂದೇ ಅಲ್ಲ,ಔಷಧಿ’ಯಾಗಿಯೂ ಬಳಸಬಹುದು ಈ ಜಾಯಿಕಾಯಿ..!!

  ಶತಮಾನಗಳಿಂದ  ಜಾಯಿಕಾಯಿಯನ್ನು ನಮ್ಮ ಅಡುಗೆ ಮನೆಗಳಲ್ಲಿ ಮಸಾಲೆ ಪದಾರ್ಥಗಳಲ್ಲಿ ಬಳಕೆ ಮಾಡುವ ಪದ್ದತಿ ರೂಢಿಯಲ್ಲಿದೆ. ಅದರದೇ ಆದ ವಿಶೇಷವಾದ ಪರಿಮಳ ಮತ್ತು ಗುಣಗಳಿಂದಾಗಿ ಯಾವಾಗ್ಲೂ ಕೂಡ ಆಯುರ್ವೇದದಲ್ಲಿ ಮಹತ್ವವನ್ನು ನೀಡಲಾಗಿದೆ. ಇದು ಪ್ರಪಂಚದ ಎಲ್ಲಾ ಭಾಗಗಳಲ್ಲೂ ಬಳಸುವ ಮಸಾಲೆ ಪದಾರ್ಥ ಎನಿಸಿಕೊಂಡಿದೆ..

ಜಾಯಿಕಾಯಿಯಿಂದ ನಮ್ಮ ದೇಹಕ್ಕೆ ಹಲವು ನ್ಯೂಟ್ರಿಯಂಟ್ಸ್‌ಗಳು ದೊರಕುವುದರಿಂದಾಗಿ ಅದರ ಬಳಕೆ ಅಡುಗೆ ಮನೆಯಲ್ಲಿ ಯಾವಾಗ್ಲೂ ಚಾಲ್ತಿಯಲ್ಲಿರೋದು ಒಳಿತು.

ಜಾಯಿಕಾಯಿ ಹಸಿಯಾಗಿರುವಾಗ ಅದರ ಸಿಪ್ಪೆಯಿಂದಲೂ ತಂಬಳಿ, ಚಟ್ನಿಯಂತಹ ಖಾದ್ಯಗಳನ್ನು ತಯಾರಿಸಿಕೊಳ್ಳಬಹುದು. ಜಾಯಿಕಾಯಿ ಮಾತ್ರವಲ್ಲ, ಜಾಯಿಪತ್ರೆ ಮತ್ತು ಜಾಯಿಕಾಯಿಯ ಹೊರ ಭಾಗದ ಸಿಪ್ಪೆ ಕೂಡ ಈ ಎಲ್ಲಾ ಕೆಳಗಿನ ಗುಣಗಳನ್ನು ಹೊಂದಿರುತ್ತೆ. ಹಾಗಾಗಿ ಈ ಕಾಯಿಯ ತೃಣವೂ ಅಪ್ರಯೋಜಕವಲ್ಲ.ಬದಲಾಗಿ ಎಲ್ಲವೂ ಕೂಡ ಔಷಧೀಯ ಗುಣಗಳನ್ನು ಹೊಂದಿದೆ..

  • ನಮ್ಮ ಮನಸ್ಸನ್ನು ಸಾಂತ್ವನಗೊಳಿಸುವ ಶಕ್ತಿಯಿದೆ.
  • ಇದರ ‘ಬೀಜ’ ಹಾಗೂ ‘ಪ’ತ್ರೆ ವಿವಿಧ ಔಷಧಿಗಳಲ್ಲಿ ಉಪಯೋಗಿಸುತ್ತಾರೆ.
  • ‘ಹುರಿದ ಜಾಯಿಪುಡಿ’ನ್ನು ಬೆಲ್ಲದ ಜೊತೆ ಸೇರಿಸಿ ತಿಂದರೆ ಅಜೀರ್ಣದ ಭೇದಿ ನಿಲ್ಲುತ್ತದೆ.
  • ಇದರ ಚೂರ್ಣವನ್ನು ಬಾಳೆಹಣ್ಣಿನೊಂದಿಗೆ ತಿಂದರೂ ಭೇದಿ ಶಮನವಾಗುತ್ತದೆ.
  • ‘ಜಾಯಿಪತ್ರೆ’ಗಳನ್ನು ‘ಅಡಿಕೆಪುಡಿ’ಯೊಂದಿಗೆ ಸೇವಿಸಿದರೆ ಅಜೀರ್ಣ ನಿವಾರಣೆಯಾಗುತ್ತದೆ.
  • ನಿದ್ರಾಹೀನತೆಯ ಪರಿಹಾರಕ್ಕಾಗಿ,
  • ತಲೆಗೆ ಬಳಸುವ ಎಣ್ಣೆಗಾಗಿ
  • ಪುಡಿಯನ್ನು ಕುದಿಯುವ ನೀರಿಗೆ ಹಾಕಿಬಾಯಿಮುಕ್ಕಳಿಸಿದರೆ ಬಾಯಿಯ ದುರ್ಗಂಧ ನಿವಾರಣೆಯಾಗುತ್ತದೆ.
  • ‘ಜಾಯಿಪುಡಿ’ಯನ್ನು ಸೈಂಧವ ಲವಣದೊಡನೆ ಸೇರಿಸಿ ಹಲ್ಲುಜ್ಜುವುದರಿಂದ ವಸಡುಗಳ ರಕ್ತಸ್ರಾವ ನಿಲ್ಲುತ್ತದೆ.
  • ‘ಜಾಯಿಕಾಯಿ’ಯನ್ನು ಅತಿಯಾಗಿ ಬಳಸಿದರೆ ಅಮಲನ್ನು ತರುತ್ತದೆ. ಆದ್ದರಿಂದ ಇದನ್ನು ಅತಿಯಾಗಿ ಸೇವನೆಮಾಡುವುದು ಒಳ್ಳೆಯದಲ್ಲ.