ಚಿಂತನೆ ಬರಹ : ಆನಂದ ಸುಬ್ರಹ್ಮಣ್ಯ ನಾರಾವಿ.

ಪೌಷ್ಟಿಕ ಆಹಾರದ ಕೊರತೆ ಅಥವಾ ಸಮತೂಕದ ಆಹಾರ ಮನುಷ್ಯನಿಗೆ ಬರುವ ಎಲ್ಲಾ ರೋಗಗಳಿಗೂ ಮೂಲ.

ಗಂಟು ನೋವು ಇಲ್ಲದವರ ಲೆಕ್ಕ ಮಾಡುವುದು ಸುಲಭ ಆಗಿದೆ. ನೂರರಲ್ಲಿ 75 ಜನರಿಗೆ ಈ ಸಮಸ್ಯೆ ಇದೆ. ವೈದ್ಯರ ಬಳಿ ಹೋದರೆ ಕ್ಯಾಲ್ಸಿಯಂ ಮಾತ್ರೆ ತಿನ್ನಲು ಸಲಹೆ.

ಗರ್ಭಿಣಿ, ಬಾಣಂತಿ ಮತ್ತು ನವಜಾತ ಶಿಶುಗಳ ಪೌಷ್ಟಿಕಾಹಾರದ ಕೊರತೆ ಇದು ಬರೀ ಬಡ ಜನರ ಸಮಸ್ಯೆ ಅಲ್ಲ. ಶ್ರೀಮಂತರಲ್ಲೂ ಈ ಸಮಸ್ಯೆ ಇದೆ. ಶ್ರೀಮಂತ ಜನ ಆಗಾಗ ವೈದ್ಯರ ಬೇಟಿ ಮಾಡಿ ಸಲಹೆ ಪಡೆದು ಔಷಧ ಪಡೆಯುವ ಕಾರಣ ಸಮಸ್ಯೆ ಇಲ್ಲ ಎಂದು ಭಾವಿಸುತ್ತಾರೆ.

ಯಾವುದೇ ಗರ್ಭಿಣಿಯರು ವೈದ್ಯರ ಬಳಿ ಹೋದರೂ ಕ್ಯಾಲ್ಸಿಯಂ, ಐಯನ್, ಫೋಲಿಕ್ ಆಸಿಡ್ ಮಾತ್ರೆ ತಿನ್ನಲು ಸಲಹೆ ಮಾಡುತ್ತಾರೆ.
ಯಾಕೆ ಈ ಸಮಸ್ಯೆ? ಒಂದು ಐವತ್ತು ವರ್ಷಗಳ ಹಿಂದೆ ಈ ಸಮಸ್ಯೆ ಇರಲಿಲ್ಲ ಅನ್ನಿಸುತ್ತದೆ.

ಯಾವ ವೈದ್ಯರಿಗೂ ಈ ಸಮಸ್ಯೆ ಏಕೆ ಬರುತ್ತಿದೆ ಎಂಬುದರ ಬಗ್ಗೆ ಯೋಚಿಸುವ, ಇಲ್ಲವೇ ಗೊತ್ತಿದ್ದರೆ ತಿಳಿಹೇಳುವ ಗೋಜಿಗೆ ಹೋಗುವುದಿಲ್ಲ. ಅವರನ್ನು ಏನು ದೂರುವುದು. ಅವರು ಹೇಳಿದರೆ ಅದನ್ನು ಕೇಳುವ ಪಾಲಿಸುವ ಅನುಕೂಲತೆ ನಮ್ಮಲ್ಲಿಲ್ಲ. ಸುಮ್ಮನೇ ಯಾಕೆ ಕಾಲಹರಣ ಮಾಡಲು ಅವರಿಗೂ ಸಮಯವಿಲ್ಲ.

ನಾವೇ ಇದರ ಬಗ್ಗೆ ಚಿಂತನೆ ಮಾಡಬೇಕಿದೆ.
ಸುಮಾರು ಐವತ್ತು ವರ್ಷಗಳ ಹಿಂದಿನ ನಮ್ಮ ಮನೆಯ ವಿಚಾರವೇ ತೆಗೆದು ಕೊಳ್ಳುವ. ನಮ್ಮ ಅಮ್ಮನಿಗೆ ನಾವು ನಾಲ್ಕು ಜನ ಮಕ್ಕಳು. ಎಲ್ಲ ಎರಡು ವರ್ಷಗಳ ಅಂತರ. ನಮ್ಮ ಅಮ್ಮನ ಹತ್ತಿರ (ಈಗ 75-76 ವರ್ಷ) ಹೀಗೆ ಮಾತಾಡುವಾಗ ಕೇಳಿದೆ.. ನೀವು ಗರ್ಭಿಣಿ ಆಗಿದ್ದಾಗ ಈಗಿನವರು ತಿನ್ನುವ ಹಾಗೆ ಮದ್ದು ಮಾತ್ರೆ ಏನಾದರೂ ತಿಂದಿದ್ದೀರೋ? ಅವರ ಮಾತು “ಇಲ್ಲಪ್ಪ ನಮಗೆಲ್ಲ ಹಾಗೇನೂ ತೊಂದರೆ ಇರಲಿಲ್ಲ. ಗರ್ಭಿಣಿ ಅಗಿದ್ದಾಗ ವಿಶೇಷ ಅಂದರೆ ಹಾಲು ಕುಡಿಯಬೆಕಿತ್ತು. ಅದೂ ಸಣ್ಣ ಮಕ್ಕಳಿಗೆ ಆಗಿ ಉಳಿದ ಹಾಲು”

RELATED ARTICLES  ಕಟು ಮಾತು

ಐವತ್ತು ವರ್ಷಗಳ ಹಿಂದೆ ಅಂದರೆ ಆಗ ನಮ್ಮ ಹಳ್ಳಿಗಳಲ್ಲಿ ಇದ್ದದ್ದು ಬರೀ ದೇಶೀ ಹಸುಗಳು. ಆಗಿನ್ನೂ ಹಾಲಿನ ಡೈರಿಯ ಮಾತೇ ಇರಲಿಲ್ಲ. ಜನರು ಮನೆಯಲ್ಲಿ ಹಸು ಸಾಕುತ್ತಿದ್ದರು. ಹಟ್ಟಿ ಗೊಬ್ಬರ ಉಪಯೋಗಿಸಿ ತರಕಾರಿ, ಬೆಳೆ ಬೆಳೆಯುತ್ತಿದ್ದರು. ರಾಸಾಯನಿಕ ಗೊಬ್ಬರ ಇರಲಿಲ್ಲ. ಈಗಿನ ತಿನ್ನಲು ತಯಾರಾದ ಸಂಸ್ಕರಿದ (ready to eat) ಆಹಾರ ಇರಲಿಲ್ಲ. ಯಾರು ಹೊರಗೆ ಹೋಗಿ ತಿಂದರೂ ಒಳ್ಳೆಯ ಆಹಾರವೇ ಸಿಗುತ್ತಿತ್ತು.

ಅದಕ್ಕೆ ಜನರ ಆರೋಗ್ಯ ಗಟ್ಟಿ ಇತ್ತು. ಅದಕ್ಕೆ ವೈದ್ಯರ ಅಗತ್ಯ ಇರಲಿಲ್ಲ. ಸೂಲಗಿತ್ತಿ ಬಂದು ಪ್ರಸವ ಮಾಡಿಸುತ್ತಿದ್ದರು. ಈಗ ಯಾರನ್ನೇ ಕೇಳಿ ಆಪರೇಷನ್.

ನಾವು ಒಂದುಸಲ ಹಿಂತಿರುಗಿ ನೋಡಿದರೆ ನಮಗೆ ತಿಳಿಯುತ್ತದೆ ಏಕೆ ನಮ್ಮ ಆರೋಗ್ಯ ಹಾಳಾಯಿತು.

ಎಲ್ಲಿವರೆಗೆ ಮನೆಯಲ್ಲಿ ಹಸು ಇತ್ತೋ ಅಲ್ಲಿವರೆಗೆ ಎಲ್ಲ ಸುಸೂತ್ರವಾಗಿ ನಡೆಯುತ್ತಿತ್ತು.
ಹಸು ಇದ್ದಷ್ಟು ದಿನ ಒಳ್ಳೆಯ ಹಾಲು ಸಿಗುತ್ತಿತ್ತು. ಹಟ್ಟಿ ಗೊಬ್ಬರ ಉಪಯೋಗಿಸಿ ಒಳ್ಳೆಯ ಬೆಳೆ ಬೆಳೆಯುತ್ತಿದ್ದರು. ಹಸಿರು ಹುಲ್ಲು, ಬೆಳದ ಬೆಳೆಯಲ್ಲಿ ಉಳಿದ ಕಳೆಯಲ್ಲಿ ಹಸುಗಳ ಹೊಟ್ಟೆ ತುಂಬುತ್ತಿತ್ತು. ಇಂದೊಂದು ಪೂರ್ಣ ಆಹಾರ ಚಕ್ರ ತರಹ ಇತ್ತು. ಆರೋಗ್ಯ ಚೆನ್ನಾಗಿತ್ತು , ಪೌಷ್ಟಿಕಾಂಶ ಕೊರತೆ ಇರಲಿಲ್ಲ.

ನಮ್ಮ ವಿದ್ಯಾಭ್ಯಾಸ ಮತ್ತು ಈಗಿನ ಶಿಕ್ಷಣ ಪದ್ದತಿ ನಮ್ಮನ್ನು ಹಣಗಳಿಸು ಮಾರ್ಗಕ್ಕೆ ತಳ್ಳುತ್ತಿರುವುದು ಒಂದು ದುರಂತ. ಒಳ್ಳೆಯ ದಾರಿಯೇ ಇರಬಹುದು. “ಒಬ್ಬ ಮನುಷ್ಯ ಅಗತ್ಯಕ್ಕಿಂತ ಹೆಚ್ಚು ಹಣ ಕೂಡಿಟ್ಟರೆ ಅದು ಒಂದು ಮಾನಸಿಕ ವ್ಯಾದಿ”. ನಮ್ಮ ಶಿಕ್ಷಣ ನಮ್ಮನ್ನು ಈ ರೋಗಕ್ಕೆ ತಳ್ಳುತ್ತಿದೆ.

ಈ ಹಣದ ಹಿಂದೆ ಬಿದ್ದ ನಾವು ನಗರ ಸೇರಿದೆವು. ಇಲ್ಲಿಗೆ ನಮ್ಮ ಜೀವನ ಕ್ರಮ ಬದಲಾಯಿತು. ಹಾಲಿಗೆ ಪೆಕೆಟ್, ಆಹಾರ ಪದಾರ್ಥಗಳಿಗೆ ಸೂಪರ್ ಮಾರ್ಕೆಟ್ ಮೊರೆ ಹೋಗಲು ಕಲಿತೆವು.

ಅದೇ ಸಮಯದಲ್ಲಿ ವಿದ್ಯೆ ಕಲಿತ ರೈತ ಹಣಗಳಿಸಲು ಗೋವು, ಹಟ್ಟಿ ಗೊಬ್ಬರ ಮರೆತು ತುಂಬ ಬೆಳೆ ತೆಗೆಯಲು ರಾಸಾಯನಿಕ ಗೊಬ್ಬರ ಕೀಟನಾಶಕ ಬಳಸಿದ, ಹಾಲು ಜಾಸ್ತಿ ಗಳಿಸಲು ವಿದೇಶೀ ತಳಿ ಹಸು ಬಳಸಿದ, ತಳಿ ಸಂಕರ ಮಾಡಿದ… ಪರಿಣಾಮ ಹಾಲಿನ ಬದಲು ಬಿಳಿ ದ್ರವ, ತರಕಾರಿಯ ಜೊತೆಗೆ ರಾಸಾಯನಿಕ ನಮ್ಮ ಹೊಟ್ಟೆ ಸೇರಿದವು. ಇನ್ನೆಲ್ಲಿ ನಮಗೆ ಪೌಷ್ಟಿಕ ಆಹಾರ ? ದುಡ್ಡು ಕೊಟ್ಟರೂ ಸಿಗುವುದು ವಿಷ ಆಗಿ ಹೋಯಿತು. ಮತ್ತೆ ಪೌಷ್ಟಿಕ ಆಹಾರ ಮಾಯ ಆಯಿತು.
ಈ ವಿಷಯ ನಾನು ಬರೆಯಲೇ ಬೇಕು.
ಇತ್ತೀಚೆಗೆ ನಮ್ಮ ಕಚೇರಿಯಲ್ಲಿ ನಮ್ಮೊಂದಿಗೆ ಕೆಲಸದಲ್ಲಿರುವ ಒಬ್ಬ ಗೆಳೆಯನ ಮನೆ ವಿಷಯ. ಇವ ರೈತನ ಮಗ. ಇಡೀ ಅವರ ಕುಟುಂಬದಲ್ಲಿ ಇವನೊಬ್ಬನೇ ಪೇಟೆ ಸೇರಿದವ. ಬಾಕಿ ಅಪ್ಪ ಅಮ್ಮ ಎಲ್ಲರೂ ಹೆಸರು ಬರೆಯುವಷ್ಟು ಮಾತ್ರ ಅಕ್ಷರಸ್ತರು. ಅವನ ಅಕ್ಕನಿಗೆ ಮದುವೆ ಆಗಿ ಆಕೆ ಚೊಚ್ಚಲ ಹೆರಿಗೆ ಬಾಣಂತನಕ್ಕೆ ತವರಿಗೆ ಬಂದಾಗ ಅವರು ಒಂದು ದೇಶೀಹಸು ಖರೀದಿಸಿ ಅದರ ಹಾಲನ್ನೇ ಆ ತಾಯಿ ಮಗುವಿಗೆ ಬಳಸಿದರು. ಯಾವುದೇ ವಿಟಮಿನ್ ಕ್ಯಾಲ್ಸಿಯಂ ಗುಳಿಗೆಗಳನ್ನು ತೆಗೆದು ಕೊಂಡಿಲ್ಲ. ನಾರ್ಮಲ್ ಡೆಲಿವರಿ ಆಗಿ ಆರೋಗ್ಯವಂತ ಮಗು ಆಯಿತು. ಬಾಕಿ ಸಣ್ಣ ಮಕ್ಕಳಿಗೆ ಬರುವ ಶೀತ ಇತ್ಯಾದಿ ತಾಪತ್ರಯಗಳೂ ಈ ಮಗುವಿಗೆ ಇಲ್ಲ. ಅಂದರೆ ಇದು ದೇಶಿ ಗೋ ಅಮೃತ ಬಳಕೆಯ ಫಲ.

RELATED ARTICLES  ಬದುಕಿಗೆ ಬಣ್ಣ ತುಂಬಿದವರು

ಅವಿದ್ಯಾವಂತರಿಗೆ ಇದು ಅವರ ಹಿರಿಯರಿಂದ ತಿಳಿದಿದೆ. ಅಂದರೆ ನಮ್ಮ ದೇಶದಲ್ಲಿ ಕಾಡುವ ಪೌಷ್ಟಿಕಾಂಶದ ಕೊರತೆಯ ಸಮಸ್ಯೆಯ ಪರಿಹಾರ ದೇಶೀ ಗೋವಿನಿಂದ ಎಂದಾಯಿತು.

ವಿದ್ಯಾವಂತರಾದ ನಾವು ನಮಗೆ ತಿಳಿದಿರುವ ಒಳ್ಳೆಯದನ್ನು ಮರೆತು ಜಾಸ್ತಿ ಹಣ ಗಳಿಸಲು ಏನೋ ಮಾಡುತ್ತೇವೆ. (ಇದು ಈಗಿನ ವಿಧ್ಯಾಭ್ಯಾಸ ಶಿಕ್ಷಣ ಕ್ರಮದ ಫಲ).

ದೇಶೀಗೋರಕ್ಷಣೆಯ ಹೊಸ ಜಾಗೃತಿಯಿಂದ ಜನ ಎಚ್ಚೆತ್ತು ಜನರಲ್ಲಿ ಆರೋಗ್ಯ ಮತ್ತು ಪೌಷ್ಟಿಕ ಆಹಾರದ ಅರಿವು ಬೆಳೆಯಲಿ, ಜನ ಹಣದ ಹಿಂದೆ ಹೋಗೋದು ಬಿಟ್ಟು ನಮ್ಮ ಹಿರಿಯರಿಂದ ಬಂದ ಜ್ಞಾನವನ್ನು ಬೆಳೆಸೋಣ ಎಂದು ಒಂದು ಚಿಂತನೆ.

ಏನಂತೀರ?