123 copy

ಇಂದು ದೇಶದಾದ್ಯಂತ ಸಂಭ್ರಮದ ದಿನ. ಈ ದಿನದಲ್ಲಿ ಆಗುವ ವಿಶೇಷತೆಗಳು ಹಲವಾರು ರೀತಿಯಲ್ಲಿ ನಾವು ಕಾಣುತ್ತೇವೆ. ಬಾನಂಗಳದಲ್ಲಿ ನಮ್ಮ ರಾಷ್ಟ್ರೀಯ ಧ್ವಜ ಹಾರಿಸಿ ಸಂತಸದಲಿ ದೇಶದ ಇತಿಹಾಸ ಪುಟಗಳನ್ನು ಪುಟ್ಟ ಮಕ್ಕಳಿಗೆ ವಿವರಿಸುತ್ತ. ದುಃಖದ ದಿನವನ್ನು ಮರೆತು ಸಂತೋಷದಿಂದ ಕುಣಿದು ಕುಪ್ಪಳಿಸುವ ದಿನ. 71 ನೇ ಸ್ವಾತಂತ್ರ್ಯವನ್ನು ಆಚರಿಸಿಕೊಳ್ಳುತ್ತಿರುವ ನಾವು ಯಾವ ವ್ಯವಸ್ಥೆಯಲ್ಲಿ ಇದ್ದೇವೆ ಅನ್ನುವುದು ಮುಖ್ಯ. ನಮಗೆ ಯಾರಿಂದ ಸ್ವತಂತ್ರ ಬಂದಿದೆ. ಬ್ರಿಟೀಷರಿಂದಲೋ ಅಥವಾ ಯಾವುದೋ ಒಂದು ವ್ಯವಸ್ಥೇಯಿಂದಲೋ ತಿಳಿಯದಷ್ಟರ ಮಟ್ಟಿಗೆ ನಾವು ನಿಂತಿದ್ದೇವೆ.

ಬ್ರಿಟೀಷರು ಹೋಗಿ 71 ವರ್ಷ ಕಳೆದರೂ ಸಹ ನಾವು ಬ್ರಿಟೀಷರು ಇದ್ದಾಗ ಇರುವಂಥಹದ್ದೇ ಮತ್ತೊಂದು ರೀತಿಯ ಭಯ ನಮ್ಮನ್ನು ನಮ್ಮ ನೆಲದಲ್ಲೆ ಕಾಡುತ್ತಿರುವುದು ಯಾಕೆ? ಹೆಣ್ಣು ಮಕ್ಕಳು ಹೊರಗೆ ಓಡಾಡಲು ಭಯ, ಮಕ್ಕಳಿಗೆ ಅಧ್ಯಯನ ಮಾಡಿಸಲು ಸರಿಯಾದ ವ್ಯವಸ್ಥೆ ಕೆಲವು ಕಡೆ ಇನ್ನು ಇಲ್ಲ, ಊಟದ ತತ್ವಾರ, ಸಾರ್ವಜನಿಕರಿಗೆ ಮೂಲ ಭೂತ ವ್ಯವಸ್ಥೆ ಸರಿಯಾಗಿ ಲಭ್ಯವಾಗುತ್ತಿಲ್ಲ ಇವುಗಳನ್ನು ನಿತ್ಯ ಕಾಣುತ್ತೇವೆ. ಇದಕ್ಕಿಂತ ಕೆಡುಕಾಗಿ ಕಾಣುತ್ತಿರುವುದು ಜಾತಿ ಎನ್ನುವ ಕೆಟ್ಟ ಶಬ್ಧ.

 
ಆಳುವವರು ಜಾತಿ ಒಡೆದು ತಮ್ಮ ಲಾಭ ಗಳಿಸಲು ನೋಡುತ್ತಾರೆ. ಒಲಿಕೆಯ ಪ್ರಯತ್ನ ಶುರುವಾಗಿ ಮೀಸಲಾತಿಗಳು ದಿನ ದಿನ ಹೆಚ್ಚಾಗಿದೆ. ಸಂವಿಧಾನದಲ್ಲಿ ಹತ್ತುವರ್ಷಗಳ ಕಾಲ ಮೀಸಲಾತಿ ಎಂದು ನಮೂದಿಸಿದ್ದೇನೋ ಹೌದು. ಆದರೆ ಅದನ್ನು ಇಷ್ಟರವರೆಗೆ ಅದೆಷ್ಟು ಬಾರಿ ತಿದ್ದಿದ್ದಾರೋ ತಿಳಿಯದು. ನಾವೆಲ್ಲ ಭಾರತೀಯರು. ನಾವೆಲ್ಲ ಒಂದು. ಇದು ನಮ್ಮ ದೇಶ ಎಲ್ಲರೂ ಸಮಾನರು ಅಣ್ಣ ತಮ್ಮಂದಿರು ಎನ್ನುವ ಮಾತು ಕೇವಲ ಇಂದಿನ ಭಾಷಣಕ್ಕೆ ಮಾತ್ರವೇ!
ಮೀಸಲಾತಿಯಾದರೂ ಪ್ರಯೋಜನಕ್ಕೆ ಬರುತ್ತಿದೆಯೇ. ಮೀಸಲಾತಿ ಫಲಾನುಭವಿಗಳು ವರ್ಷದಿಂದ ವರ್ಷಕ್ಕೆ ಮೇಲೆರಿದರೇ ಎನ್ನುವ ಸಮೀಕ್ಷೆಯನ್ನು ನಡೆಸಿದ್ದಾರೆಯೇ. ಹಾಗೆ ಮೇಲೆರಿದ್ದಾರೆ ಎಂದಾಗ ಮೀಸಲಾತಿ ಫಲಾನುಭವಿಗಳು ಕಡಿಮೆಯಾಗಲೇ ಬೇಕು. ಹಾಗಾಗಿಲ್ಲ. ಹಾಗಾದರೆ ಅವರಿಗೆ ಬೇಕಾದ ಉದ್ಯೋಗ ಯಾಕೆ ಕೊಡಬಾರದು? ಇತ್ತ ಉದ್ಯೋಗವಿಲ್ಲ. ಬದುಕಿರುವವರೆಗೂ ಸರ್ಕಾರ ಮೀಸಲಾತಿ ಕೊಟ್ಟು ಸಾಕಲು ಸಾಧ್ಯವೇ? ಅದೇನೇ ಇರಲಿ. ಆದರೆ ಈ ಜಾತಿ ಹೆಸರಿನಲ್ಲಿ ದಿನಕ್ಕೊಂದು ವಾದ ವಿವಾದ, ಸ್ಟ್ರೈಕ್‍ಗಳು, ತಾನು ಕೆಳಜಾತಿ ಎಂದು ನಮೂದಿಸಿ ಎನ್ನುವ ಕೂಗು, ತನ್ನ ಧರ್ಮ ಬೇರೆ ಮಾಡಿ ಎಂದು ಹೇಳದಿದ್ದರೂ ಮಾಡುತ್ತೇವೆ ಎಂದು ಸಾರುವ ಪರಿ ನೋಡಿದಾಗ ನಾವು ಎಲ್ಲಿದ್ದೇವೆ ಎಂದು ಒಮ್ಮೆ ಆಕಾಶ ನೋಡಬೇಕಾಗುತ್ತದೆ.

RELATED ARTICLES  ಸ್ವಧರ್ಮ- ಪರಧರ್ಮಸಹಿಷ್ಣುತೆ

 
ಹಾಗಾದರೆ ಸ್ವತಂತ್ರ ಬಂದಿದೆಯೇ? ಸರಿ ತಪ್ಪು ಚರ್ಚಿಸದೇ ಒಬ್ಬರ ಮೇಲೆ ಬತ್ತೊಬ್ಬರ ಆರೋಪ ಮಾಡುತ್ತ, ಕತ್ತಿ ಮಸೆಯುತ್ತ, ನಿಂತಿದ್ದರೆ ಗಡಿ ಪ್ರದೇಶದಲ್ಲಿ ಇದನ್ನೆ ಕಾಯುತ್ತ ಯಾವ ಹೊತ್ತಿನಲ್ಲಿ ಒಳಗೆ ನುಸುಳಲಿ, ನಮಗೆ ಈ ದೇಶದ ಯಾವ ಜನ ಸಹಾಯಕ್ಕೆ ಸಿಕ್ಕಾರು ಎನ್ನುವ ಕೆಟ್ಟ ಕಣ್ಣು ಕಾದು ನಿಂತಿದೆ. ಒಗ್ಗಟ್ಟಿನ ಜಪ ಮಂತ್ರಿಸುವ ಹಾಗೆ ಅಷ್ಟೇ ಒಳ್ಳೆ ಮನಸ್ಸಿನಿಂದ ಸ್ವಾಸ್ತ್ಯ ಸಮಾಜಕಟ್ಟಲು ಮನಸ್ಸು ಮಾಡಿದ್ದರೆ ಅಮೇರಿಕಾದಂತ ದೇಶ ಹಿಮ್ಮೆಟ್ಟಿ ಮುಂದೆ ಹೋಗಿರುತ್ತಿದ್ದೇವು ಎನ್ನುವುದರಲ್ಲಿ ಸಂಶಯವಿಲ್ಲ.

RELATED ARTICLES  ಆನ್‌ಲೈನ್ ಗೇಮಿಂಗ್‌ಗಾಗಿ ಹೊಸ ನಿಯಮ : ಕೆಲವು ಗೇಂಮ್ ಗಳು ಬಂದ್..!

 
ಭಾರತ ರಾಮರಾಜ್ಯ ಆಗಬೇಕು. ರಾತ್ರಿಯಾದರೂ ಹೆಣ್ಣುಮಗಳೋಬ್ಬಳು ನಡು ರಸ್ತೆಯಲ್ಲಿ ನಡೆದು ಹೋಗಬೇಕು ಎಂದು ಕನಸು ಹೆಣೆದಿದ್ದ ಗಾಂಧಿಜಿಯ ಕನಸು ನನಸಾಗುವುದಿರಲಿ, ನಿತ್ಯ ಹತ್ತಾರು ಪ್ರಕರಣಗಳು ಕಣ್ಣಿಗೆ ರಾಚುತ್ತ ಮನಸ್ಸನ್ನು ರೋಸುವಂತೆ ಮಾಡುತ್ತಿದೆ. ಯಾಕೆ? ಕಾನೂನಿನಲ್ಲಿ ಎಲ್ಲಿ ದೋಷವಿದೆ ಎನ್ನುವುದು ಯಾಕೆ ಗೊತ್ತಾಗುತ್ತಿಲ್ಲ. ಎಲ್ಲಿ ತಪ್ಪಾಗುತ್ತಿರುವುದು. ಭ್ರಷ್ಟಾಚಾರದ ಜೊತೆ ಬೇಲಿಯೇ ಎದ್ದು ಹೊಲ ಮೆಂದಂತೆ ರಕ್ಷಕರೆ ತಪ್ಪಾಗಿ ನಡೆದುಕೊಳ್ಳುವುದು ಮುಜುಗರದ ಲಜ್ಜೆಯ ಸಂಗತಿ.
ಗಡಿ ಪ್ರದೇಸದಲ್ಲಿ ಮಳೆ ಗಾಳಿ ಚಳಿ ಬಿಸಿಲು ಲೆಕ್ಕಿಸದೇ ಹೋರಾಡುವ ಸೈನಿಕರ ಬಗ್ಗೆ ಇಲ್ಲೆಲ್ಲೋ ವಿದ್ಯಾಲಯದಲ್ಲಿ ಅತ್ಯಾಚಾರ ಎನ್ನುವ ಶಬ್ಧ ಪ್ರಯೋಗ ಆಗಿದೆ ಅಂತಾದರೆ ನಾವು ಯಾವ ಮಟ್ಟಕ್ಕೆ ಯೋಚಿಸುತ್ತಿದ್ದೇವೆ ಎಂದು ಹೇಳುವುದು ಬೇಕಾಗಿಲ್ಲ. ಇದು ಸ್ವತಂತ್ರ ಭಾರತದ ಹಿರಿಮೆಯ ಸಾಲಿಗೆ ಸೇರಿಸುವುದಾ? ಉತ್ತಮ ಕೆಲಸ ಎಷ್ಟೇ ಮಾಡಿದರೂ ಇಂತಹ ತಪ್ಪು ಒಂದು ಬಿಳಿ ಹಾಳೆಯಲ್ಲಿ ಬೀಳುವ ಕಪ್ಪು ಮಸಿಯಂತೆ.

 

ಭಾರತ ನಮ್ಮ ದೇಶ. ನಾವೆಲ್ಲ ಒಂದು ಎನ್ನುವುದು ಕೇವಲ ಗಂಟಲ ಕೂಗಾಗದೆ ಮನದಾಳದಿಂದ ದೇಶ ಭಕ್ತಿ ಹೊಮ್ಮಿದಾಗ ಜಾತಿ, ದ್ವೇಶ, ಸ್ವಲಾಭ, ರಾಜಕೀಯ ಬದಿಗಿಟ್ಟು ನಡೆದರೆ ನಮಗೆ ಬೇಕಾದ ನೈಜ ಸ್ವಾತಂತ್ರ್ಯ ನಮ್ಮದಾಗಿಸಿಕೊಳ್ಳಬಹುದು.