ಅಕ್ಷರರೂಪ :ಮಾಲಿನಿ ಹೆಗಡೆ
ಸಂಜೀವಿನಿ ಅಂದರೆ immortality ಅಂದರೆ ” the ability to live forever , eternal life ” ಅಂದರೆ ಸಾವಿಲ್ಲದೆ ಇರೋದು ಅಂತ ಅರ್ಥ. deathlessness , everlasting life etc .
ಗೋ ಸಂಜೀವಿನಿ” ಅಂದರೆ ಗೋವಿನ ಸಾವನ್ನು ಇಲ್ಲವಾಗಿಸುವುದು ಅಂತ ಅರ್ಥ. ಅಥವಾ ಗೋವನ್ನು ಕಟುಕರ ಕೈ ಇಂದ ಪಾರು ಮಾಡುವುದು ಅಂತ ಆಗುತ್ತೆ.
ಈ ಗೋ ಸಂಜೀವಿನಿ” ಅಂದರೆ ಶ್ರೀ ರಾಮಾಚಂದ್ರಾಪುರ ಮಠದಿಂದ ಗೋವನ್ನು ಉಳಿಸಲು ತಂದ ಒಂದು ಉತ್ತಮ , ಪುಣ್ಯದ ಯೋಜನೆ.
ಇದು ಗುರು ವಾಕ್ಯ, ” ಗೋಹತ್ಯೆ ಅಂದರೆ, ಸ್ವ ಹತ್ಯೆ, ನಾವು ಕುಳಿತ ರೆಂಬೆಯನ್ನೇ ನಾವು ಕಡಿಯುವುದು ಅಂತ ಅರ್ಥ. ನಾವು ಕೆಳಗೆ ಬೀಳಲು ನಾವೇ ದಾರಿಯನ್ನು ಮಾಡಿ ಕೊಂಡಂತೆ.
ಹಾಗೆಯೆ ಗೋಹತ್ಯೆ ” . ಹಾಲು ಕೊಟ್ಟು ನಮ್ಮನ್ನು ಕಾಪಾಡಿದ , ಅದೇ ಹಾಲನ್ನು ಕುಡಿದು ಇಷ್ಟು ದೊಡ್ಡವರಾದ ನಾವು , ಈಗ ಅದೇ ತಾಯಿಯ ಪ್ರಾಣ ಉಳಿಸಲು ಅಸಹಾಯಕ ರಾಗಿದ್ದೇವೆ ಅನ್ನೋದು ದುಃಖದ ಸಂಗತಿ.
ನಮ್ಮ ಕಣ್ಣು ಮುಂದೇನೆ ಜಾತ್ರೆ ಅಂತ, ಫೆಸ್ತ್ ಅಂತ, ಅದೆಷ್ಟೋ ಗೋವುಗಳು ಕಸಾಯಿಖಾನೆ ಸೇರುತ್ತಾ ಇದೆ. ಹೆಸರು ಮಾತ್ರ ಬೇರೆ, ಆದರೆ ಹೋಗುವ ಸ್ಥಾನ ಮಾತ್ರ ಒಂದೇ….ಅದೇ ಕಟುಕರ ಮನೆ.
ಅಂತ ದಾರುಣವಾದ ಸಾವನ್ನು ತಪ್ಪಿಸಲು ಅಂತಾನೆ ಶ್ರೀ ಮಠ ತಂದಿರುವ ಯೋಜನೆ ” ಗೋ ಸಂಜೀವಿನಿ”
ನಮ್ಮ ಗಳಿಕೆಯ ಒಂದು ಪುಟ್ಟ ಪಾಲನ್ನು , ನಮ್ಮ luxrious ಜೀವನದ ಒಂದು ಭಾಗವನ್ನು ಗೋ ಸಂಜಿವೀನಿಗೆ ಕೊಟ್ಟರು, ಅದೆಷ್ಟೋ ಗೋವುಗಳು ಸಾವಿನ ದವಡೆ ಇಂದ ಈಚೆ ಬರುತ್ತೆ.
ಗೋವಿಗೆ ,ಈ ಗೋ ಸಂಜೀವಿನಿ ಮೂಲಕ ” ನಾವಿದ್ದೇವೆ ನಾವಿದ್ದೇವೆ ಎನ್ನುವ ಅಭಯ ದೀಕ್ಷೆ ನೀಡೋಣ.
ಸಮಾಜದಲ್ಲಿ ನಮ್ಮ ಮಠ ಇರುವ ತನಕ, ಮಠದಲ್ಲಿ ನಮ್ಮ ಪರಮ ಗುರುಗಳು ಇರುವ ತನಕ, ಗೋವನ್ನು ಕೊಲ್ಲಲು ಸಾಧ್ಯ ಇಲ್ಲ ಎನ್ನುವ ಭಾವನೆ ಜನ ಮಾನಸದಲ್ಲಿ ಬಲವಾಗಿ ಬರಬೇಕು, ಹಾಗೆ ಬರಲು ನಮ್ಮ ನಿಮ್ಮೆಲ್ಲರ ಜವಾಬ್ದಾರಿ ತುಂಬಾ ಇದೆ.
ನಾನೊಬ್ಬಳೇ ಅಥವಾ ನಾನೊಬ್ಬನೇ ಏನು ಮಾಡಬಲ್ಲೆ ಎನ್ನುವ ಉಪೇಕ್ಷೆ ಬೇಡ, ೧+೧+೧ ಸೇರಿದರೆ ತುಂಬಾ ಆಗುತ್ತೆ. ನೆನಪಿರಲಿ.
ಹಾಗೆ ಎಲ್ಲರು ಸೇರಿ, ನಮಗೆ ಹಾಲು ಕೊಟ್ಟು ಬೆಳೆಸಿದ ಗೋ ಮಾತೆಯನ್ನು ರಕ್ಷಿಸೋಣ, ಬನ್ನಿ.
ಇಂದೇ ಗೋ ಸಂಜಿವೀನಿಗೆ ನಿಮ್ಮ ಪುಟ್ಟ ಪಾಲು ಬರಲಿ.
ವಂದೇ ಗೋ ಮಾತರಂ”
ಹರೇ ರಾಮ.