ಕಲ್ಪನೆ : ಗಣೇಶ ಜೋಶಿ, ಸಂಕೊಳ್ಳಿ
ಹೌದು ಹೀಗೊಂದು ಅನಿಸಿಕೆ ಎಲ್ಲರ ಮನದಲ್ಲಿ ಮೂಡಿರಲೇ ಬೇಕು? ಏಕೆಂದರೆ ಯಾರು ಅಥವಾ ಯಾವೊಂದು ಪ್ರಜಾ ಪರಿಪಾಲಕ ಗೋವನ್ನು ಉಳಿಸಬೇಕಾಗಿತ್ತೋ ಅವರು ಗೋವಧೆಗೆ ಮುಂದಾಗುತ್ತಿರುವ ಈ ದುಸ್ಥರ ಸ್ಥಿತಿಯಲ್ಲಿ ಗೋವಿನ ರಕ್ಷಣೆಗೆ ಮುಂದಾಗುತ್ತಿರುವ ಓರ್ವ ಸಂತ ಅಥವಾ ಒಂದು ಮಠ ಕರ್ನಾಟಕದಲ್ಲಿ ಪರ್ಯಾಯ ಸರ್ಕಾರವಾಗಿ ಅದೂ ಸಾತ್ವಿಕ ಗೋ ಸರ್ಕಾರವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರೆ ತಪ್ಪಲ್ಲ.

G3

ಬದುಕಬಹುದು ನಾನು
ಬದುಕ ಬಹುದು ನೀನು
ಬದುಕಬಾರದೇನೋ ಧೇನು?

ಹೆತ್ತ ತಂದೆ ತಾಯನ್ನೂ ಜೊತೆಗೆ ಇಟ್ಟು ಬದುಕು ನೀಡುವವರು ಈಗಿಲ್ಲ ಆದರೂ ಮಾತು ಬರದ ಹೊತ್ತು ಹೆರದ ಗೋ ಮಾತೆಯ ನೋವನ್ನು ಅರಿತು ಅದಕ್ಕಾಗಿ ಕೆಲಸಮಾಡುವವರಿದ್ದಾರೆ ಎಂಬುದೇ ನೈಜ ಸತ್ಯ. ಸಂತಕುಲ ತನ್ನ ಕುಲದ ಉಳಿವಿಗೇ ಚಿಂತಿಸುವ ಕಾಲ ಬಂದಿದೆ. ಅದಾವುದನ್ನೂ ಲೆಕ್ಕಿಸದೇ ನಿರಂತರ ಜೀವನ ನೀಡುವ ತಾಯೆಂದು ಗೋ ತಾಯಿಯ ಅಳಲು ಕೇಳಲು ಮುಂದಾದ ಎಲ್ಲ ಸಂತಕ್ಕೆ ಮೊದಲನೇದಾಗಿ ಕೋಟಿ ನಮನ ಸಲ್ಲಬೇಕು. ನಿರಂತರ ಸಂಗ್ರಾಮವೇ ಆಗಿ ನಡೆಯುತ್ತಿರುವ ಗೋವಿನ ರಕ್ಷಣೆಯ ಕಾರ್ಯಕ್ಕೆ ನಾವು ಕೊಡುತ್ತಿರುವ ಕಾಣಿಕೆ ಏನು ಎಂಬುದನ್ನು ಮಾತ್ರ ನಾವು ನಮ್ಮಲ್ಲಿಯೇ ಕೇಳಿಕೊಳ್ಳುವ ಸಮಯ ಇದು.

ಯಾವ ದೇಶದಲ್ಲಿ ಗೋವೆಂದರೆ ಚಲಿಸುವ ದೇವಾಲಯವೆಂದು ಭಾವಿಸಲಾಗುತ್ತಿತ್ತೋ? ಯಾವ ದೇಶದಲ್ಲಿ ಗೋವೆಂದರೆ ಜಗನ್ಮಾತೆಯೆಂದು ಪೂಜಿಸಲಾಗುತ್ತಿತ್ತೋ ಆ ದೇಶದಲ್ಲಿಯೇ ಗೋವಿಗೆ ಬದುಕುವ ಹಕ್ಕಿಲ್ಲ ಎಂಬಂತೆ ಜನ ವರ್ತಿಸುತ್ತಿದ್ದಾರೆಂಬುದೇ ವಿಪರ್ಯಾಸದ ಸಂಗತಿ. ಭಾರತೀಯ ಸನಾತನ ಧರ್ಮದಲ್ಲಿ ಗೋವೆಂಬುದು ಕೇವಲ ಒಂದು ಪ್ರಾಣಿಯಲ್ಲ. ಮುಕ್ಕೋಟಿ ದೇವತೆಗಳನ್ನು ತನ್ನಲ್ಲಿ ಒಳಗೊಂಡ ಚಲಿಸುವ ದೇವಾಲಯ ಗೋವು. ಇಂತಹ ಗೋವಿಗೆ ರಕ್ಷಣೆಗೆ ಕಂಕಣ ತೊಡುವ ಅನಿವಾರ್ಯತೆ ಬಂದಿರುವುದು ಕಾಲಮಾನದ ದುರಂತವೇ ಸರಿ. ಗೋವಿನ ಮೇಲೆ ಭಾರತೀಯರಿಗಿದ್ದ ಶ್ರದ್ಧೆ ಮತ್ತು ಗೌರವವನ್ನು ಕಂಡ ಬಹುತೇಕ ಮುಸಲ್ಮಾನಿ ಅರಸರು ಆರಂಭದಲ್ಲಿ ಭಾರತದಲ್ಲಿ ಗೋ ವಧೆಯನ್ನು ನಿಷೇಧಿಸಿದ್ದರಂತೆ ಇದಕ್ಕೆ ಉದಾಹರಣೆ ಎಂಬಂತೆ ದೆಹಲಿಯ ಸುಲ್ತಾನ ಬಹುದ್ದೂರ ಷಹಾ, ಅವಧ್‍ನ ಅರಸರುಗಳನ್ನು ನಾವು ಉಲ್ಲೇಖಿಸಬಹುದು. ಆದರೆ ಕಾಲ ಕಳೆದು ಬಂದಂತೆ ಗೋವಿನ ಮೇಲಿನ ಆ ಪ್ರೇಮ ಅದೆಲ್ಲ ಅಡಗಿಹೋಯೋ ಆ ದೇವರೇ ಬಲ್ಲ. ಆದರೀಗ ಗೋವಿನ ಬಗ್ಗೆ ಧ್ವನಿ ಎತ್ತುವ ಸಂತರ ಜೊತೆಗೆ ಸಾವಿರ ಕರಗಳ ಸಾವಿರ ಶಿರಗಳ ಸಂತ ಸಮೂಹದ ಜೊತೆಗೂಡಿಗೆ ಸ್ವಾತ್ರಂತ್ರ್ಯದ ಮಹಾ ಸಂಕಲ್ಪದೊಂದಿಗೆ ಮಂಗಲಪಾಂಡೆ ಗೋವಿನ ಪ್ರೇಮ ಮೆರೆದಂತೆ ಇಂದು ಪರಮ ಪೂಜ್ಯ ಶ್ರೀ ಶ್ರೀ ರಾಘವೇಶ್ವರರಿಗೆ ಮಂಗಲ ಪಾಂಡೆಯೇ ಪ್ರೇರಣೆಯಾಗಿ ಬಂದ. ಸಂತರಾದ ಪರಮ ಪೂಜ್ಯ ಶ್ರೀ ಶ್ರೀ ರಾಘವೇಶ್ವರರು 2003-04 ರಲ್ಲಿ ದತ್ತ ಶಂಕರ ಗೋಯಾತ್ರೆಯನ್ನು ಕೈಗೊಂಡರು. ಅನೇಕಾನೇಕ ಸ್ವಯಂ ಸೇವಕರು ಪಥಮೇಡದಿಂದ ಹೊಸನಗರಕ್ಕೆ ಕಾಂಕ್ರೀಜ್ ಗೋವುಗಳನ್ನು ತಂದರು. 2005 ರಲ್ಲಿ ಭಾರತೀಯ ಗೋ ಯಾತ್ರೆ 5830 ಕಿ.ಮೀ ಸಂಚರಿಸಿ 110 ಪ್ರಖ್ಯಾತ ಸ್ಥಳದಲ್ಲಿ ಸಭೆ ನಡೆಯಿತು. ಕರ್ನಾಟಕದ ಭಾರತೀಯ ಗೋ-ಸಂಸತ ನಡೆದರೆ ಕರ್ನಾಟಕದ ಇತಿಹಾಸದಲ್ಲಿ ಚಿರಸ್ಥಾಯಿಯಾದ 28,000 ಕಿ.ಮೀ ದೂರ ಸಂಚರಿಸಿ 5,59,400 ಹಳ್ಳಿಗಳನ್ನು ತಲುಪಿದ ಹಾಗೂ ಗೋ ಹತ್ಯೆ ನಿಷೇಧವನ್ನು ಜಾರಿಗೆ ತರುವಂತೆ 8,35,67,041 ಕ್ಕೂ ಹೆಚ್ಚು ಭಕ್ತರು ಸಹಿ ಮಾಡಿ ಒಕ್ಕೊರಲ ಮನವಿ ನೀಡಿದ ಎಂದೂ ಮರೆಯದ “ವಿಶ್ವ ಗೋ ಸಮ್ಮೇಳನ” ಅದೆಲ್ಲವೂ ಗೋವಿನ ಉಳಿವಿಗೆ ನಡೆದ ಶ್ರೀ ಮಠದ ಕಾರ್ಯಗಳು. ಅದಷ್ಟೇ ಅಲ್ಲದೇ “ಮಂಗಲ ಗೋ ಯಾತ್ರೆ” ಸಾಯುವ ಗೋವಿಗೆ ನೀಡಿದ ಜೀವನ ಹಾಗೂ ಗೋವಿಗಾಗಿ ಹರಿದ ಸಾವಿರಾರು ಟನ್ ಆಹಾರದ ಆ ಮಹತ್ತರ ಕಾರ್ಯ.

RELATED ARTICLES  ಮಗುವಿನ ಚಿಂತನೆ..

FB IMG 1503065131001

ಇದಿಷ್ಟೆಲ್ಲಾ ಕಾರ್ಯಗಳ ನಂತರದಲ್ಲಿ ಶ್ರೀಗಳು ಕೈಗೊಂಡ ಮತ್ತೊಂದು ಯೋಜನೆ ಅದುವೇ “ಗೋ ಸಂಜೀವಿನಿ” ಗೋವನ್ನು ಕಟುಕರಿಂದ ಕಸಿದುಕೊಳ್ಳಲು ಇದೊಂದು ಸಾತ್ವಿಕ ಮಾರ್ಗ .ಅಷ್ಟೇ ಅಲ್ಲ ಗೋವಿನ ಜೀವ ರಕ್ಷಣೆಗೆ ಇದು ತೀರಾ ಅಗತ್ಯ ವ್ಯವಸ್ಥೆಯೂ ಹೌದು. ಕಟುಕರಿಂದ ಗೋವನ್ನು ಖರೀದಿಸುವ ವ್ಯವಸ್ಥೆ ಹಾಗೂ ಅವುಗಳನ್ನು ಸಾಕಿ ಸಲಹುವ ವ್ಯವಸ್ಥೆಯ ಬ್ರಹತ್ ಯೋಜನೆಯೇ ಇದು. ಹೀಗಿರುವಾಗ ಈ ಎಲ್ಲಾ ಕಾರ್ಯಗಳ ಜೊತೆಗೆ ಶ್ರೀಗಳು ರೂಪಿಸಿರುವ ಈ ವ್ಯವಸ್ಥೆ ಪರ್ಯಾಯ ಗೋ ಸರ್ಕಾರ ಎಂಬುದರಲ್ಲಿ ಮಾತಿಲ್ಲ ಎಂಬುದು ಹಲವರ ಹಾಗೂ ಅರಿತವರ ಮಾತು.

RELATED ARTICLES  ತಾತ್ವಿಕ ದೃಷ್ಟಿಗೆ ಮಹತ್ವ ನೀಡಿ ಶ್ರೀಧರರು ಹೀಗೊಂದು ಪತ್ರ ಬರೆದಿದ್ದರು.