ನಾಗರಹಾವು, ಚೇಳು,ಲಕ್ಷ್ಮಿ ಚೇಳು, ಹುಲಿಸಾಲಿಂಗ ಇತ್ಯಾದಿ ವಿಷ ಪ್ರಾಣಿಗಳು ಕಡಿದಾಗ ಶೀಘ್ರವಾಗಿ ವಿಷ ತಗ್ಗಿಸಲು ಅಂಟುವಾಳ (ಅಟ್ಟಲ) ಕಾಯನ್ನು ತಳೆದು ಬಿಸಿನೀರಿನಲ್ಲಿ ಹಾಕಿ ಅದನ್ನು ಕೈಯಲ್ಲೇ ಕಿವುಚಿ ಒಂದು ಅಂಶ (30ML) ಅಳತೆಯ ರಸವನ್ನು ಕೂಡಲೇ ಕುಡಿಸುತಿದ್ದರು. ವಿಷ ಪ್ರಾಶನ ಮಾಡಿದವರಿಗೂ ಇದನ್ನು ವಾಂತಿಯಾಗುವ ಪ್ರಮಾಣದಲ್ಲಿ ಕುಡಿಸುತ್ತಿದ್ದರು. ಚರ್ಮವ್ಯಾದಿಗಳಿಗೆ ಇದು ಔಷಧವಾಗಿತ್ತು. ಇದು ಬ್ಯಾಕ್ಟೀರಿಯಾ ಹಾಗೂ ಕ್ರಿಮಿಗಳನ್ನು ಇದು ನಾಶ ಮಾಡುತ್ತಿತ್ತು. ಈ ಔಷಧ ಈಗಿನ ಸಮಸ್ಯೆಗಳಿಗೂ ಪರಿಹಾರವಾಗಬಹುದು.
ಸರ್ವರಿಗೂ ಹಿತಕಾರಿಯಾದ ನಾಮತ್ರಯ ಮಹಾ ಮಂತ್ರ ಪಠಿಸುವುದರಿಂದ ಸರ್ವ ರೋಗ ನಿವಾರಣೆಯಾಗುತ್ತದೆ ಎಂದಿದ್ದಾರೆ. ಆ ಮಹಾಮಂತ್ರವು “ಅಚ್ಯತಾಯ ನಮಃ , ಅನಂತಾಯ ನಮಃ ಗೋವಿಂದಾಯ ನಮಃ ” ಎಂದಾಗಿದ್ದು “ಅಚ್ಯತಾನಂತಗೋವಿಂದನಾಮೋಚ್ಛಾರಣಭೇಷಜಾತ್ ನ ಶ್ಯಂತಿ ಸಕಲಾರೋಗಾಃಸತ್ಯಂ ಸತ್ಯಂವದಾಮ್ಯಹಂ” ಅದನ್ನು ಸುರಾಸುರರಿಂದ ವಂದಿತ ಪಂಡಿತನಾದ ಧನ್ವಂತರಿ ಮಹಾವಿಷ್ಣುವೇ ಹೇಳಿದುದು. ಇದು ‘ಪಾಂಡವ ಗೀತಾ’ ಎಂಬ ಸ್ತೋತ್ರ ಗ್ರಂಥದಲ್ಲಿ ಹೇಳಲ್ಪಟ್ಟಿದೆ.
ಲೇಖನ : ವಿದ್ವಾನ್ ಕೃಷ್ಣ ಭಟ್ ಕಡತೋಕಾ (ಮೈಸೂರು). ವಿಶ ವೈದ್ಯ ಮನೆತನದವರು ಹಾಗೂ ಮಂತ್ರೌಷಧ ಚಿಕಿತ್ಸಕ