ಕೊರೊನಾ,ಸಿ .ಎ.ಎ, ಎನ್. ಆರ್. ಸಿ,ಇವು ಮೂರು ಒಂದೇ ಹೆಸರಿನ ಕಾಯಿಲೆ ಎಂದು ಇಷ್ಟು ದಿನವಾದರೂ ಈ ದಡ್ಡ ತಲೆಗೆ ಹೊಳೆದಿರಲಿಲ್ಲ !ಇದರ ಅರಿವು ಮೂಡಿಸಿದ ಶ್ರೇಯಸ್ಸು  ಏನಾದರೂ ಸಲ್ಲಬೇಕು ಅಂತಿದ್ದರೆ ಅದು ಬೆಂಗಳೂರು ಮತ್ತು ಇಂದೋರಿನಲ್ಲಿರುವ ಆ ಮಹಾನುಭಾವರಿಗೇ ಸಲ್ಲಬೇಕು.
ಯಾಕಾದರೂ,ಸಾಯಲೇಬೇಕು ಎಂಬ ಹಠಹೊತ್ತವರನ್ನು ಬದುಕಿಸುವ ಛಲವೋ! ನನಗೆ ಅರ್ಥ ಆಗುತ್ತಿಲ್ಲ.

ಕೊರೊನಾ ಎಂದರೆ ಎಷ್ಟು ಕಠಿಣವಾದ ಸವಾಲು ಎಂದು ಇಂದಿಗೂ ಅನೇಕರಿಗೆ ಅರ್ಥವಾಗುವುದಿಲ್ಲ.ಇಟಲಿ, ಜರ್ಮನಿ ಚೀನಾ ಹೆಚ್ಚೇಕೆ ಅಮೆರಿಕಾದಂತಹ ವಿಶ್ವದ ಹಿರಿಯಣ್ಣ ಎನಿಸಿ ಅನ್ಯರ ಅರ್ಧ ಬಲವನ್ನೂ‌ ತಾನೇ ಕಬಳಿಸಿ ಅಟ್ಟಹಾಸ ಮೆರೆವ ವಾಲಿಯಂತಹ ಆ ರಾಷ್ಟ್ರವೂ ಕೂಡ ಕೊರೊನಾದ ಎದುರು ಶರಣಾಗತಿಯನ್ನು ಸೂಚಿಸಿದೆ.ಹೀಗಿರುವಾಗ ಬಹುತೇಕ ಅನಕ್ಷರತೆ,ಬಡತನ ಮೂಢನಂಬಿಕೆ, ಕೊಳುಕುತನ ಹುಳುಕುತನ,ದೇಶದ್ರೋಹದ ಚಟುವಟಿಕೆಗಳಂತಹ ಅಪಖ್ಯಾತಿಯನ್ನು ನಮ್ಮವರಿಂದಲೇ ಹೊಂದಿರುವ ಭಾರತದಲ್ಲಿ ನೂರಾ ಮೂವತ್ತೆಂಟು ಕೋಟಿ ಲೆಕ್ಕಕ್ಕೆ ಸಿಕ್ಕಿರುವ ಜನಸಂಖ್ಯೆ, ಕೇಂದ್ರಸರಕಾರದ ವಿರುದ್ಧವೇ ವಿಧಾನಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳುವ ಹುಂಬತನಗಳಿಗೆ ಸಾಕ್ಷಿಯಾದ ಕೇರಳದಂತ ರಾಜ್ಯಸರಕಾರಗಳನ್ನು ಹೊಂದಿದ ಈ ದೇಶದಲ್ಲಿ ಕೊರೊನಾದ ವಿರುದ್ಧ ಸಾಧಿಸಿರುವ ಹಿಡಿತವನ್ನು ನೋಡಿದರೆ ಸಮಾಧಾನ ಉಂಟಾಗುತ್ತದೆ. ಸ್ವತಃ ಕೂತರೆ ನಿಂತರೆ ಉಸಿರಾಡಿದರೆ ದೇಶದ ಪ್ರಧಾನಿಯ ತಪ್ಪನ್ನೇ ಎತ್ತಿ ಆಡುತ್ತಿರುವ ವಿರೋಧ ಪಕ್ಷಗಳೂ ಮೂಕವಾಗಿ ಸಹಕಾರದ ಮಾತುಗಳನ್ನು ಆಡುತ್ತಿರುವಾಗ ನರೇಂದ್ರ ಮೋದಿಯಂತಹ ದೇಶಭಕ್ತ,ಸಚ್ಚಾರಿತ್ರ್ಯವಂತ ವ್ಯಕ್ತಿಯ ಹೊರತಾಗಿ ಭಾರತಕ್ಕೆ ಇನ್ಯಾವ ಭರವಸೆ ಇರಲುಸಾಧ್ಯ?

ಇಂದು ಕೊರೊನಾ ವಿರುದ್ಧ ಭಾರತದಲ್ಲಿ ಜೀವವನ್ನು ಪಣಕ್ಕಿಟ್ಟು ಅನೇಕ ವೈದ್ಯರು ,ದಾದಿಯರು ಹೋರಾಟ ನಡೆಸುತ್ತಿದ್ದಾರೆ.ಅವರ ಕುಟುಂಬದಲ್ಲಿ ದಿನನಿತ್ಯ ಆತಂಕದ ಕಾರ್ಮೋಡ ಕವಿಯುತ್ತಿದೆ.
ಅಧಿಕಾರಿ ವರ್ಗಗಳೂ ರಜೆಯನ್ನು ತೊರೆದು ಸಂಸಾರ ಸುಖಮರೆತು ಪ್ರತಿನಿತ್ಯ ಹರಸಾಹಸ ಪಡುತ್ತಿದ್ದಾರೆ.ಕೊರೊನಾ ತಡೆಗಟ್ಟಲು ಲಾಕ್ ಡೌನ್ ಯಶಸ್ವಿಯಾಗಿಸಿ ಎಂದಾಗ ನಾವು ಇದನ್ನು ನಾವು ಪಾಲಿಸುವುದಿಲ್ಲ ಎಂದು ಉದ್ಧಟತನ ಮೆರೆಯುವವರನ್ನು ಸರಕಾರ ವಿನಂತಿಸಿದರೂ ಕೇಳದ ಪರಿಸ್ಥಿತಿ ಅಲ್ಲಲ್ಲಿ ಕಂಡು ಬಂದಿದೆ. ಈ ದೇಶದ ನೆಲಜಲದ ಮೇಲೆ ಗೌರವ ಕೊಡದೇ ಸರಕಾರದ ಮಾತನ್ನು ಮೀರಿ ವರ್ತಿಸಿರುವವರ ವಿರುದ್ಧ ರಕ್ಷಣೆಯ ಹೊಣೆಹೊತ್ತ ಆರಕ್ಷಕರು ಲಾಟಿಬೀಸಿ ನಿಯಂತ್ರಿಸಿದರೆ ಇದಕ್ಕೂ ಪೋಲಿಸರ ದೌರ್ಜನ್ಯ ಎಂಬ ಆರೋಪ ಕೇಳಿಬರುತ್ತಿವೆ.ಇದೆಂಥ ನ್ಯಾಯ ?
ಯಾರೇ ಆದರೂ ಇಂಥಹ ಸಂಕಷ್ಟದ ಸಂದರ್ಭದಲ್ಲಿ ದೇಶಕ್ಕೆ ದ್ರೋಹವೆಸಗುವ ಮಾತಾಡಿದರೆ ಅಂತವರ ವಿರುದ್ಧ  ಪುರಾವೆಗಳಿದ್ದ ಸಂದರ್ಭದಲ್ಲಿ ಕಂಡಲ್ಲಿ ಗುಂಡು ಯಾಕೆ ಹಾರಿಸಬಾರದು ?

RELATED ARTICLES  ಬಿಸಿಯೂಟದಲ್ಲಿ ಹಾವು ಬಿದ್ದು 30 ಕ್ಕೂ ಹೆಚ್ಚು ಮಕ್ಕಳನ್ನು ಆಸ್ಪತ್ರೆಗೆ


ಬರುವ ದಿನಗಳಲ್ಲಿ ದೇಶವಾಸಿಗಳೇ ಇಂಥದೊಂದು ಆಗ್ರಹವನ್ನು  ಸರಕಾರದ ಮುಂದೆ ಇಡಬೇಕಾದ ಸಮಯ  ಎದುರಾಗುತ್ತಿದೆ.ಇದಲ್ಲದೇ ಹೋದರೆ ಬೆಂಗಳೂರಿನಲ್ಲಿ ಕೊರಾನಾದ ಬಗ್ಗೆ ಮಾಹಿತಿ ಸಂಗ್ರಹಿಸಲು ಹೋದ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆನಡೆಸುವುದೆಂದರೇನು?ಯಾರ ಉಪಕಾರಕ್ಕಾಗಿ ಆ ತಾಯಿ ಜೀವಕೈಯಲ್ಲಿ ಹಿಡಿದು ಅವರುಗಳ ಮನೆಯ ಮುಂದೆ ಹೋಗಬೇಕು? ಒಂದುವೇಳೆ ಆಕೆಯ ಜೀವಕ್ಕೆ ಏನಾದರೂ ಹಾನಿ ಉಂಟಾದರೆ ಯಾರು ಜವಾಬ್ದಾರರು? ಮನೆಯ ಬಾಗಿಲಿಗೆ ಬಂದ ಹೆಣ್ಣುಮಗಳು ಯಾಕೆ ಬಂದಿದ್ದಾರೆ ಎನ್ನುವುದನ್ನೂ ಕೇಳುವಷ್ಟು ತಾಳ್ಮೆ ಇಲ್ಲದೇ ಎನ್. ಆರ್ .ಸಿ,ಸಿ. ಎ .ಎ ಮಾಹಿತಿ ಸಂಗ್ರಹಕ್ಕೆ ಬಂದರೆಂದು ಹಲ್ಲೆ ಮಾಡಲು ಮುಂದಾದರು ಎಂಬ ಕಾರಣ ನೀಡುವ ಪ್ರಯತ್ನಕ್ಕೆ ಏನೆನ್ನಬೇಕು ? ಪುಣ್ಯಕ್ಕೆ ಈ ವಿಷಯವನ್ನು ಪಕ್ಷಾತೀತವಾಗಿ ಖಂಡಿಸಲಾಗಿದೆ ಎನ್ನುವುದೊಂದು ಸಮಾಧಾನದ ವಿಷಯ.ಅದೇ ರೀತಿ ಮಧ್ಯಪ್ರದೇಶದಲ್ಲಿ ಮನೆಯ ಬಾಗಿಲಿಗೆ ಬಂದ ವೈದ್ಯರುಗಳನ್ನು ಅಟ್ಟಾಡಿಕೊಂಡು ದೊಣ್ಣೆ ಕಲ್ಲುಗಳಿಂದ ಹೊಡೆದು ಹಲ್ಲೆ ಮಾಡುತ್ತಿರುವುದನ್ನು ಗಮನಿಸಿದರೆ ಇದೇನು ಪ್ರಜಾಪ್ರಭುತ್ವದ ಅಣಕ ಎನಿಸುತ್ತಿದೆ.
ತಿಂಗಳುಗಟ್ಟಲೆ ಮನೆ ಮಾರು ತೊರೆದು ಅಕ್ಷರಶಃ ಅಬ್ಬೆಪಾರಿಗಳ ಹಾಗೆ ಕೊರೊನಾ ಪೀಡಿತರ ಉಪಚಾರಕ್ಕಾಗಿ ಅಲೆಯುತ್ತಿರುವ ಈ ದೇವಮಾನವರನ್ನು ಈ ರೀತಿಯಾಗಿ ನೆಡೆಸಿಕೊಳ್ಳುತ್ತಾರೆ ಅಂತಾದರೆ ಅಂಥವರಿಗೆ ಬದುಕಿಗಿಂತ ಸಾವೇ ಪ್ರೀತಿ ಅಂತಾಯಿತಲ್ಲವೇ?
ಹಾಗಾದರೆ ಅವರನ್ನು ಬದುಕಿಸುವ ದರ್ದಾದರೂ ಏನಿದೆ?ಇಂಥವರನ್ನು ಬದುಕಿಸಲು ದೇಶದ ಜನತೆ ತಮ್ಮ ಬೆವರಿನ ಹಣವನ್ನು ದಾನಮಾಡಬೇಕೇನು? ಬದಲಿಗೆ
ಅಂಥವರಿಂದ ಇನ್ನೊಬ್ಬರ ಸಾವು ಆಗದ ರೀತಿಯಲ್ಲಿ ರಕ್ಷಣೆಮಾಡುವ ಕುರಿತಾಗಿ ವಿಚಾರಮಾಡುವುದು ಒಳ್ಳೆಯದಲ್ಲವೇ?
ಕೊರೊನಾ ಎಂಬ ಮಹಾ ಮಾರಿಗೆ ಜಾತಿ,ಲಿಂಗ ದೇಶ ಧರ್ಮಗಳೆಂಬ ಭೇದಗಳಿಲ್ಲ . ಅದು ತನಗಂಟಿದ ಎಲ್ಲರನ್ನೂ ಸಮಾನವಾಗಿ ಆಪೋಶನ ತೆಗೆದುಕೊಳ್ಳ ಹತ್ತಿದೆ.ಇದರ ವಿರುದ್ಧ ಜಾಗ್ರತವಾಗಿದ್ದು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಜೀವನ ನೆಡೆಸಬೇಕಾದದ್ದು ಇಂದಿನ ಅವಶ್ಯಕತೆ ಆಗಿದೆ.ಕೊರೊನಾದ ವಿರುದ್ಧದ ಸಮರದಲ್ಲಿ ಹಗಲಿರುಳು ಹೋರಾಡುವವರ ಕುರಿತಾಗಿ ನಮಗೊಂದು ಕನಿಷ್ಠ  ಸಹಾನೂಭೂತಿಯೂ ಇಲ್ಲದೇ ಹೋದರೆ ನಮ್ಮ ಬಾಳೊಂದು ಬಾಳೇ?ಆಲೋಚನೆಗಿದು ಸಮಯವಾಗಿದೆ.

RELATED ARTICLES  ತನ್ನ ಜೀವನ ಏಕೆ ಇದೆ? ಎಂಬುದಕ್ಕೆ ಭಗವಾನ್ ಶ್ರೀಧರರ ಉತ್ತರ..

ಲೇಖಕರು : ಚಿದಾನಂದ ಭಂಡಾರಿ ಕಾಗಾಲ.