ಹಣತೆ ಹಚ್ಚೋಣ ನಾವು ಇಂದಿನ
ಇರುಳು ಒಂಬತ್ತು ಗಂಟೆಗೆ
ಹಣತೆ ಹಚ್ಚೋಣ.
ಜಾತಿ ಮತ ಪಂಥಗಳ ಅಂತರವ ತೊರೆದೆಲ್ಲ
ದೇಶ ಹಿತವನು ಬಯಸಿ ಹಣತೆ ಹಚ್ಚೋಣ.
ಒಂಬತ್ತು ನಿಮಿಷಗಳ ತನಕವೂ ಎವೆಯಿಕ್ಕಿ ನೋಡೋಣ ನಾವು ಹಚ್ಚಿದ ಹಣತೆ ಹೇಗೆ ಉರಿಯುವುದೆಂದು.
ಜಿಪುಣತನ ಬೇಡ ಎರೆಯೋಣ ಹಣತೆ ತುಂಬ ತೈಲವ ಬೆಳಗೆ ಬಾಳ ಬೆಳಕು.
ಬೇಡ ಆರಿಸುವ ಯತ್ನ ಯಾರಿಗೂ.
ಸಮಯ ಕಳೆದ ಬಳಿಕ
ಇದ್ದರೆ ಇರಲಿ ಬೆಳಕು
ಮಿತಿ ಇರಲಿ ನಮಗೆ,ಬೆಳಕಿಗಲ್ಲ.
ಎಲ್ಲ ಒಳ ತುಡಿತಗಳು ಬಯಸುವುದು ಬೆಳಕನ್ನೇ ತಮವ ಯಾತಕೆ ನಾವು ತಬ್ಬಬೇಕು?
ಹಣತೆ ಹಚ್ಚೋಣ ಒಂಬತ್ತು
ಒಂಬತ್ತು ನಿಮಿಷ
ಮನದ ಬ್ರಾಂತಿಗಳನೆಲ್ಲ ನಿಕ್ಷೇಪಿಸಿ
ಸಲಿಸೋಣ ಹರಕೆ ಭಾರತಾಂಬೆಯ ಪದತಲದಲ್ಲಿ
ವಿಶ್ವಗುರು ಆಗೆಂದು ಸಂಕಲ್ಪಿಸಿ.
ರಚನೆ,ಚಿದಾನಂದ ಹರಿ ಭಂಡಾರಿ. ಕಾಗಾಲ.