ಅಂದು ಎಪ್ರಿಲ್ ೪ ಶನಿವಾರ, ಕರೋನಾ ನಿಮಿತ್ತ ಮನೆಯಲ್ಲಿ ಇದ್ದು ಪೇಪರ್ ಓದುತ್ತಿದ್ದರು ಯಜಮಾನ ಮಹೇಶ. ಛತ್ತೀಸಘಡದಲ್ಲಿ ದಂಪತಿಗಳಿಗೆ ಅವಳಿ ಮಕ್ಕಳಂತೆ. ಮಗನಿಗೆ ಕೋವಿಡ್ ಎಂದು ನಾಮಕರಣ ಮಾಡಿದರೆ ಮಗಳಿಗೆ ಕರೊನಾ ಎಂದು ನಾಮಕರಣ ಮಾಡಿದರಂತೆ. ಅಶ್ಚರ್ಯ ಮಾದವಿಗೆ. ಕರೋನಾ ಪದ ಭಯಾನಕವಾದದ್ದು. ಇಡೀ ವಿಶ್ವವನ್ನೇ ನಡುಗಿಸಿ ಅಲ್ಲೋಲ ಕಲ್ಲೋಲ ಮಾಡಿದೆ. ಅಬ್ಬಾ ಎಂತಹ ಮಹಾಮಾರಿ! ಚಿಕ್ಕ ವೈರಸ್ ತನ್ನ ಅಟವನ್ನು ಮಾನವ ಕುಲದ ಮೇಲೆ ಅಡಿ, ಈ ಜಗತ್ತನ್ನು ತಲ್ಲಣವನ್ನಾಗಿಸಿದೆ. ಬಾಂಬ್ ಇಲ್ಲ, ಜಗಳ ಇಲ್ಲ, ದೇಶವೆಲ್ಲ ಸ್ಥಬ್ದವಾಗಿದೆ. ಜನರೆಲ್ಲ ಮನಯೊಳಗೆ ಲಾಕ್ ಅಗಿ ಮಾಸ್ಕ ಅಡಿಗೆ ಶರಣಾಗಿದ್ದಾರೆ.
ತಮ್ಮ ಕೆಲಸ ಕಾರ್ಯಗಳು ಮನೆಯಿಂದಲೇ ನಡೆಯಲೆಂದು
ಕಂಪನಿಗಳು ಸರಕಾರಿ ಕಚೇರಿಗಳು ಮನವಿ ಮಾಡಿದ್ದಾರೆ. ಜನಸಂದಣಿ ನಗರಗಳು ನಿಶ್ಯಬ್ದವಾಗಿದೆ.
ಮಾದವಿಯ ಯೋಚನೆ ಸಾಗುತ್ತಿದ್ದಂತೆ ಗಂಡ ಮಹೇಶ ಬಂದು ಚಹ ಕುಡಿಯಬೇಕಂತೆ ಕಣೆ ಕೊವಿಡ್ ಗೆ ಪರಿಹಾರ ಔಷದ ಅದರಲ್ಲಿ ಇದೆಯಂತೆ ಅಂದರು. ಹೌದ್ರಿ ನಾನು ವಾಟ್ಸಪ್ ಲ್ಲಿ ನೋಡ್ದೆ


ದಿನಾನೂ ಶುಂಠಿ ಟೀ ಕುಡಿಯೋಣ ಕಣೆ ಅಂದರು.
ಅಯ್ತೂರಿ ಅಂದಳು.
ಮಹೇಶ ನಿಗೆ ಕಾಲ್ ಬಂದು ಅತ ಹೊರ ನಡೆದ.
ಮಾಧವಿಗೆ ಹೊತ್ತು ಹೋಗಲಿಲ್ಲ.
ಅಚೆ ಮನೆಯ ನಂದಿನಿ ಹತ್ರ ಹರಟೆ ಹೊಡೆಯೋಣ ಅಂದ್ರೆ ಅವಳೂ ಈಚೆ ಬರುವದಿಲ್ಲ.
ಅಯ್ಯೋ ಇದೆಂತಾ ಕಾಲವಪ್ಪ
ಕರೋನಾ ಕಾಲ?
ನನ್ನ ಜೀವಮಾನದಲ್ಲೇ ಈ ತರಹ ನೋಡಿಲ್ಲ ಗೊಣಗಿಕೊಂಡಳು.
ಅಷ್ಟರಲ್ಲಿ ಬಂದ ಮಹೇಶ
ಮಾದವಿ ಏನ್ಮಾಡ್ತಾ ಇದ್ಯೆ
ಹೋಮ್ ಕ್ವಾರಂಟೈನ್ ಅಂದ್ರೂ ಅಚೆ ಈಚೆ ಹೋಗ್ತಾ ಇದ್ರೆ ಹೇಂಗೆ ಪೋಲಿಸರು ವದೆ ಕೊಡ್ತಾರೆ ಅಂತ ವಿಡಿಯೋ ನೋಡೆ ಪಾರ್ ವರ್ಡ ಮಾಡ್ದೆ
ಹೂಂ
ಈರಂಗನಾಥ ಪಬ್ಲಿಕ್ ಟಿವಿ ಯಲ್ಲಿ ಒಳ್ಳೆ ಚರ್ಚೆ ಮಾಡಿದ್ದಾರೆ ಕಣೆ ಟಿವಿ ಹಾಕು ನೋಡೊಣ
ನೀವು ಹಾಕೊಳ್ರಿ ನನಗೆ ಈಗ ಹಾಡು ಕೇಳ್ಬೇಕು ಅಂದಳು ಮಾದವಿ
ಇದೊಳ್ಳೆ ಕತೆ ಹೂಂ ನಾನೆ ಹಾಕ್ತಿನಿ ನೋಡ್ತಾ ಕುಳಿತ ಮಹೇಶ.
ವಾಟ್ಸಪ್ ಲ್ಲಿ ಹಾಡು ಮೆಸೆಜ್ ನೋಡ್ತಾ ಹೋದಂಗೆ ಹೊಸಾ ಹೊಸಾ ಕರೋನಾ ಬೆಳವಣಿಗೆ ಕಂಡ್ತು ಮಾಧವಿಗೆ.

RELATED ARTICLES  ಜೀವಿಯ ದೃಷ್ಟಿ ಯಾವಾಗ ಆ ಮಹಾನದಿ ಮಾಯೆಯ ಕಡೆಗೆ ಬೀಳುತ್ತದೆಯೋ, ಆವಾಗ ಪೂರ್ವಸ್ಥಿತಿಯ ವಿಸ್ಮೃತಿಯಾಗುತ್ತದೆ!

ದಿನಾನೂ ಬಿಜಿ ಬಿಜಿ ಹೇಳಿ ತಲೆ ಕೆರೀತಾ ಕಾಲ ಕಳೆತಿದ್ದ ಜನ ಈಗ ಕಾಲ್ ಮೇಲೆ ಕಾಲ್ ಹಾಕಿ
ಅರಾಮಾಗಿ ಟೀ ಕುಡೀತಾರೆ
ಮಕ್ಕಳ ಜೊತೆ ಕಾಲಾ ಕಳೀತಾರೆ
ಒಂದರೀತಿ ಮನೆ ಇದು ಅನ್ನೊ
ಬಾವನೆ ಬೆಳೆದಿದೆ
ಹೊಟೆಲ್ ಲ್ಲಿ ಮುಗಿಸುವ ಊಟ ಈಗ ಮನೆಯಲ್ಲಿ ತಯಾರಾಗ್ತ ಇದೆ
ಮನೆಯಲ್ಲಿ ಕೆಲಸದವರು ಇಲ್ಲ.
ಹೆಂಗಸರು ಪಕ್ಕಾ ಗ್ರಹಿಣಿಯರಾಗಿದ್ದಾರೆ.
ಮನೆ ಔಷದಗಳು ತಯಾರಾಗಿ
ಮನೆಮಂದಿಗೆ ಸೇರುತ್ತಿವೆ
ಹೀಗೆ ಒಂದು ರೀತಿ ಸಾಮಾಜಿಕ
ವ್ಯವಸ್ಥೆ ಸಂಪೂರ್ಣ ವಾಗಿ ಕೋವಿಡ್‌ನಿಂದ ಬದಲಾಗಿದೆ.
ನರೇಂದ್ರ ಮೋದಿ ಚಪ್ಪಾಳೆ ಅಂದೋಲನ ,ದೀಪ ಅಂದೋಲನ ಹೀಗೆ ಪುಟ್ಟ ಪುಟ್ಟ ಸೇವೆ ಅಶಿಸಿ ದೇಶ ಸೇವೆಯ ಎಡೆ ಜನರ ಒಯ್ಯುತ್ತಿದ್ದಾರೆ. ಜನರಲ್ಲಿ ಭಕ್ತಿ ಹೆಚ್ಚಾಗಿದೆ. ಕರೋನಾ ತಂದ
ಈ ಹೊಸ ಜಗತ್ತು ಮಾಧವಿಗೆ
ವಿಸ್ಮಯ ಅನ್ನಿಸಿತು
ಅಷ್ಟರಲ್ಲಿ ಬಂದ ಮಹೇಶ ಚಹ ಮಾಡಿದ್ದೀನಿ ಬಾರೆ ಕುಡಿಯೋಣ ಅಂದ
ಹೂಂ ಶುಂಠಿ ಹಾಕಿದ್ದೀರಾ ಅಂದಳು
ಇಲ್ಲ ಕಣೆ ನೀನು ನಾಳೆ ಹಾಕು ಅಂದ
ಕೆಲ್ಸಾ ಕೆಲ್ಸಾ ಕರೋನಾ ಬೇಗ ಹೋಗು ಅಂದಳು.

RELATED ARTICLES  ಗೋಮಾಂಸ ತಿಂದಿಲ್ಲ, ತಿನ್ನುತ್ತೇನೆ ಎನ್ನುವವರು ರೈತಪರವಂತೆ !

ಇತ್ತ ಮಹೇಶ ಯಾವ ಯಾವ ದೇಶದಲ್ಲಿ ಕರೋನಾ ಪರಿಣಾಮ ಎಷ್ಟೆಷ್ಟು ಎಂದು ನೋಡತೊಡಗಿದ.
ಭಾರತದಲ್ಲಿ ಉಳಿದ ದೇಶಗಳಿಗೆ ಹೋಲಿಸಿದರೆ ಪ್ರಮಾಣ ಕಡಿಮೆ.
ಅದರೆ ಯಾರಿಗೆ ಗೊತ್ತು!
ಲಾಕ್ ಡೌನ್ ಅಗದಿದ್ದರೆ
ಊಹಿಸಲು ಅಸಾದ್ಯ!
ಕರೋನಾ ಭಯ ಇನ್ನು ಯಾವಾಗ ಸಂಪೂರ್ಣ ತೊಲಗುವದೋ?
ಮಕ್ಕಳ ಪರೀಕ್ಷೆ ಯಾವಾಗಲೋ?
ಜನ ಜೀವನ ಸುಧಾರಣೆ ಎಲ್ಲ
ಈ ಲಾಕ್ ಡೌನ್ ಅವಧಿ ಮುಗಿದಮೇಲೆಯೇ!
ಜೀವ ಉಳಿದರೆ ತಾನೆ? ಮುಂದೆ
ಮಹೇಶ ತಲೆ ಕೊಡವಿದ.
ಕರೋನಾ ಜಗತ್ತನ್ನು ಎತ್ತ ಸಾಗಿಸುತ್ತಿದೆ ತಿಳಿದಿಲ್ಲ
ಅದರೆ ನಷ್ಟ ಮಾತ್ರ ಅಪಾರ!
ನಷ್ಟ ಭರಿಸಿ ಅರ್ಥಿಕ ವ್ಯವಸ್ಥೆಯನ್ನು ಸುಧಾರಿಸುವದು ಸಮಯ ತೆಗೆದುಕೊಳ್ಳತ್ತದೆ.
ಏನೇ ಅದರೂ ಕರೋನಾ ಭಯ ತೊಲಗಬೇಕು
ಸಂಕಷ್ಟದ ಪರಿಸ್ಥಿತಿಯಿಂದ ಹೊರಬಂದು ಲಾಕ್ ಡೌನ್
ಗೆ ಮುಕ್ತಿ ಸಿಗಬೇಕು
ಮಹೇಶ ಹೇಳಿಕೊಂಡ
ಕಾಯಿರಿ ಸುದಿನವ
ಭಯ ಮುಕ್ತ ಅನುದಿನವ
ಎಂದಿನಂತ ಜನಜೀವನವ
ಸಮಸ್ಯೆ ರಹಿತ ಭಾರತ ಭವಿತವ್ಯ ದಿನವ

ಕರೋನಾ ದೂರ ಹೋಗಲಿ
ಹೆಮ್ಮಾರಿಯ ಭೀತಿ ತೊಲಗಲಿ
ಹಸಿವು ನೀಗಿಸಿ ಬದುಕುವ ಕಾಲ ಮತ್ತೆ ಬರಲಿ

ಕಲ್ಪನಾ ಅರುಣ