ಮಗು ಎಂದಾಕ್ಷಣ ನಮ್ಮ ಮನಸಿನಲ್ಲಿ ಎತ್ತಿ ಮುದ್ದಾಡಿ
ಮುದ್ದು ಮುದ್ದು ಮಾತು ಕೇಳುವ ಅಸೆ. ಮಗು ಹುಟ್ಟಿದಾಗ ಸಂಭ್ರಮದಲ್ಲಿ ನಾವು ಭಾವುಕರಾಗಿ ಬಿಡುತ್ತೇವೆ. ತಾಯ ಹ್ರದಯ ನಲಿದಾಡಿ ಮಗುವಿಗೆ ಅರೈಕೆಯಲ್ಲಿ ಕಾಳಜಿವಹಿಸಿ
ಕಾರ್ಯನಿರತಳಾಗುತ್ತಾಳೆ. ಈ ಮಗು ಹುಟ್ಟಿದ ಮೇಲೆ ತಂದೆತಾಯಿಯರಿಗೆ ಜವಾಬ್ದಾರಿ ಜಾಸ್ತಿ. ಮಗುವಿಗಾಗಿ ಅದರ ಪ್ರಗತಿಗಾಗಿ ಎಲ್ಲವನ್ನೂ ಮಾಡುವ ಹೊಣೆ ಪೋಷಕರದ್ದು.


ಮಗು ದೇವರ ಸಮಾನ ಎಂಬ ಮಾತಿದೆ. ಶಿಶುವು ನಗುವದು ದೇವರ ಬಳಿ ಎಂದು ತಿಳಿದಿದ್ದಾರೆ. ದೇವರಂತೆ ನಿಷ್ಕಲ್ಮಶ ಮನಸು ಮಗುವಿನದು. ಈ ಮನಸಿನ ಮೇಲೆ ಪರಿಸರದ ಪ್ರಭಾವ ಸದಾ ಇದ್ದೇ ಇರುತ್ತದೆ. ಪರಿಸರದ ನಡವಳಿಕೆ ಮಾತುಕತೆ ಮಗುವಿನ ಮನಸ್ಸನ್ನು ತಿದ್ದಿ. ಅದರಲ್ಲಿ ಅನೇಕ ಅಂಶಗಳನ್ನು ತುಂಬಿಸುತ್ತದೆ. ಮಗುವಿನ ಅಂತರ್ಯದಲ್ಲಿ ಗುಣಗಳ ಮಿಲನವಾಗಿ ಅದು ಅಭಿವ್ಯಕ್ತಿಗೊಳ್ಳಲು ಅರಂಭವಾಗುತ್ತದೆ. ಮಗುವಿನ ಬೆಳವಣಿಗೆಯ ಹಂತದಲ್ಲಿ ಅದರ ಮನಸು ವಿಕಸಿಸಬೇಕು.
ಅಲ್ಲಿ ಪ್ರಕ್ರತಿ ಪರಿಚಯ. ಸೌಂದರ್ಯ ಅಸ್ವಾದನೆ. ಸಂತಸಕರ ವಾತಾವರಣ‌ಮೂಡಬೇಕು. ಮಗು ಪ್ರಕ್ರತಿಯಲ್ಲಿ ಕಲೆತು ಬದುಕುವ . ವ್ಯವಹರಿಸುವ ಕಲೆ ಅರಿಯಬೇಕು. ಸುಳ್ಳು.ಕಪಟದಂತಹ ಗುಣಗಳನ್ನು ಮಗು ಬೇಗ ಕಲಿಯಬಹುದು.ಅದರೆ ಅವುಗಳಿಗೆ ಅಸ್ಪದವೀಯದೆ
ಸ್ಪಷ್ಟವಾದ ನಿರ್ದಿಷ್ಟ ಗುಣಗಳೆಡೆ ಅದರ ಮನ ಒಲಿಸಬೇಕು.

RELATED ARTICLES  ಶ್ರೀಧರ ಪತ್ರ ಸಂದೇಶದಲ್ಲಿ ಶ್ರೀಧರರು ಹೇಳಿದ್ದೇನು ಗೊತ್ತಾ?

ಮಗುವಿನ ಮನಸು ಚಂಚಲವಾಗಬಹುದು.
ಕಾರಣ ಅದಕ್ಕೆ ಸಾಮಾಜಿಕ ಭದ್ರತೆ ಅವಶ್ಯ. ಸಂಭದಿಕರ ಒಡನಾಟ. ಹಿರಿಯರ ಅಕ್ಕರೆ ಕಿರಿಯರ ಪ್ರೀತಿ ಇವೆಲ್ಲ ದೊರೆತು ಸಕಾಲದಲ್ಲಿ ವಿದ್ಯೆ ನೀಡಿದರೆ ಮಗು ಸಹಜವಾಗಿ
ಉತ್ತಮ ಮಾನಸಿಕ ಅರೋಗ್ಯ ಹೊಂದುತ್ತದೆ. ಮಗುವಿನ ಮನಸು ಪ್ರಕ್ರತಿಗೆ ಸ್ಪಂದಿಸಿ ಹೊರ ಜಗತ್ತಿನ ಅರಿವು ಬೆಳೆಸಿಕೊಳ್ಳುತ್ತದೆ. ಹಾಲಿನಂತಹ ಮನಸು ಅದರದಾಗುತ್ತದೆ. ಸಧ್ರಢ ಬಲಿಷ್ಟ ಬುನಾದಿಯಾಗಿ ಮಗು ಮುಂದೆ ಉತ್ತಮ ಸಮಾಜ ನಿರ್ಮಾಣಕ್ಕೆ ತಯಾರಾಗುತ್ತದೆ.

RELATED ARTICLES  ಬದುಕಿಗೆ ಬಣ್ಣ ತುಂಬಿದವರು

ಕಲ್ಪನಾ ಅರುಣ