ಇಂದು ಸಮಾಜದ ನೀತಿ ನಿಯಮಗಳು ಬದಲಾಗಿವೆ. ಒಂದು ಮಗು ಸಾಕು ಎಂಬ ಧೋರಣೆಯಲ್ಲಿ ಹಲವರು ಇದ್ದಾರೆ. ಕಾರಣ ಪ್ರತಿ ಕುಟುಂಬವು ಚಿಕ್ಕದಾಗುತ್ತಿದೆ.
ಹಳೆಯ ಜೀವನ ಪದ್ದತಿ ಈಗ ಇಲ್ಲ. ೫_೬ ಮಕ್ಕಳು . ಅವಿಭಕ್ತ ಕುಟುಂಬ.ಇವೆಲ್ಲ ಕಾಣಸಿಗುವದು ತೀರ ಅಪರೂಪ. ಹೀಗಿರುವಾಗ ಮಕ್ಕಳಿಗೆ ಬೆರೆಯಲು. ಅಟ ಅಡಲು ಯಾರೂ ಸಿಗುವದಿಲ್ಲ.
ಮನೆಯಲ್ಲಿ ಅಪ್ಪ ಅಮ್ಮ ಜೊತೆಗಾರರು. ಕಾರು ಬೈಕ್ ಲ್ಲಿ
ಓಡಾಟ. ಶಾಲೆಗೆ ಶಾಲಾ ವಾಹನದಲ್ಲಿ ಹೋಗಿ ಬಂದರಾಯಿತು. ಕಾರಣ ಮಕ್ಕಳ ಮನಸ್ಸು ಇಂದು ಮುಗ್ದತೆಯಿಂದ ಪ್ರಬುದ್ದ ಚಿಂತನೆಯತ್ತ ಸಾಗಿದೆ. ಮಕ್ಕಳು ಮಕ್ಕಳಲ್ಲಿದ್ದ ಅ ಭಾವನೆ ಪ್ರೀತಿ ಇಲ್ಲದಾಗಿದೆ ನಮ್ಮ ಮನೆ ಮಗುವನ್ನು ಅಟ ಅಡಲು ಮಕ್ಕಳಿದ್ದ ಮನೆಗೆ ಕರೆದುಕೊಂಡು ಹೋಗಿ ಅಟ ಅಡಿಸಿಕೊಂಡು ಬರುವದು ಇಂದಿನ ಅಪ್ಪ ಅಮ್ಮರಿಗೊಂದು ಕೆಲಸ. ಪ್ರತಿಯೊಂದು ವಿಚಾರದಲ್ಲೂ ಅಪ್ಪ ಅಮ್ಮ ತಲೆತೂರಿಸಬೇಕು. ನಮ್ಮ ಕಾಲದಲ್ಲಿ ಹಾಗಲ್ಲ. ಮಕ್ಕಳು ಮಕ್ಕಳು ಸೇರಿ ಅಟ ಅಡುತ್ತಿದ್ದೆವು. ಅಪ್ಪ ಅಮ್ಮ ಯಾವ ತಲೆಬಿಸಿ ಇಲ್ಲದೆ ತಮ್ಮ ಮಕ್ಕಳಿಗೆ ಊಟ ತಿಂಡಿ ತಿನ್ನಿಸಿ ಕಳುಹಿಸುತ್ತಿದ್ದರು. ಅಗಿನ ಪರಿಸ್ತಿತಿ ಮಕ್ಕಳಿಗೆ ತನ್ನಿಂದ ತಾನೆ ಬದುಕಿನ ಪಾಠ ಹೇಳುತ್ತಿತ್ತು. ಅದರೆ ಈಗ ಮಗು ಎಲ್ಲ ಸೌಲತ್ತಿನಲ್ಲಿ ಕಲಿಯುತ್ತದೆ.
ಮನಸ್ಸು ಮಾತ್ರ ಒಂಟಿತನದಲ್ಲಿ ಬೇಸರ ಪಟ್ಟುಕೊಳ್ಳುತ್ತದೆ. ಸ್ನೇಹಿತರ ಸಹವಾಸ ಕೆಟ್ಟ ಚಟ ಇವುಗಳೆಡೆ
ಎಳೆಯುತ್ತಿದೆ. ಕಾರಣ ಮಗುವಿಗೆ ಪರಿಸರದ ಜೊತೆ ಬೆರೆಯಬಿಡಿ. ಮಕ್ಕಳು ಮಕ್ಕಳೊಂದಿಗೆ ಸೇರಿ ಅಟವಾಡಿ ಮಾತನಾಡಿ ಮುಗ್ದ ಹ್ರದಯವನ್ನು ತೆರೆದು ಸ್ಪಂದಿಸಿಕೊಳ್ಳಲಿ.
ಸಂಸಾರ ಚಿಕ್ಕದಾಗಿರುವದು ಇಂದಿನ ಪರಿಸ್ತಿತಿಗೆ ಒಳ್ಳೆಯದಾದರೂ ಮಕ್ಕಳಿಗೆ ವಾತಾವರಣ ಅವರ
ಮನಸ ವಿಕಸನಕ್ಕೆ ಪೂರಕವಾಗಿರಲಿ. ಒಂಟಿತನದ ವಿಶಾದ ಮೂಡದಂತೆ ಚಟುವಟಿಕೆಗಳತ್ತ ಲಕ್ಷ್ಯ ವಹಿಸಲಿ. ಸ್ನೇಹಿತರ ಹಿತೈಷಿಗಳ ನೆರವಿನಲ್ಲಿ ಪರಸ್ಪರ ಒಡನಾಟ. ವಿನಿಮಯ. ಮುಂತಾದ ಅವಶ್ಯಕ ವಿಷಯಗಳನ್ನು ಅರಿತು ಅದಕ್ಕೆ ತಕ್ಕ ಸೌಲಭ್ಯ ಕಲ್ಪಿಸಬೇಕು. ಮಗುವಿನ ಸರ್ವಾಂಗೀಣ ಅಭಿವ್ರದ್ದಿ ತಂದೆ ತಾಯಿಯರ ಹೊಣೆ.
ಕಲ್ಪನಾಅರುಣ