ರಾಜಗೋಪಾಲ ಕೈಪ್ಪಂಗಳ ಇವರು ನಮಗೆಲ್ಲಾ ಒಂದು ಸ್ಪೂರ್ತಿಯುಕ್ತ ಬಂಧು ಮಿತ್ರರು.
ಸಾಮಾಜಿಕ ಅಭಿವೃದ್ಧಿಯ ಕಾಳಜಿಯೂ ಕಳಕಳಿಯೂ ಇವರಲ್ಲಿ ಕಂಡುಬರುವ ವಿಶೇಷ ಗುಣ. ಈಗಾಗಲೇ ತಮ್ಮೂರಲ್ಲಿ ಇಂತಹ ಹಲವು ಸತ್ಕಾರ್ಯಗಳನ್ನು ಕಾರ್ಯಗತಗೊಳಿಸಿರುವ ವಿಚಾರ ಜನಜನಿತ.
ಇದೀಗ ಅವರ ಸಮಕಾಲೀನ ವಿಷಯದ ಸ್ಪಂದನದ ಪರಿಣಾಮ ಬಹಳ ಶ್ಲಾಘನೀಯ.
ಸದ್ಯದ ವಿಚಾರ ಕೊರೊನ ವಿಷಯದಲ್ಲಿ ಕಾಸರಗೋಡಿಗರು ಅನುಭವಿಸುತ್ತಾ ಇರುವ ದಾರುಣಾವಸ್ಥೆ.
ಇದರ ಪರಿಹಾರಕ್ಕಾಗಿ ರಾಜಗೋಪಾಲರು ತನ್ನ ಟ್ವಿಟ್ಟರಿನಲ್ಲಿ ಮಾರ್ಮಿಕವಾಗಿ ಟ್ವಿಟ್ಟಿಸುತ್ತಾರೆ. ತಮ್ಮ ಟ್ವೀಟನ್ನು @RNTata2000 ಮತ್ತು @anandmahindra ಇವರಿಗೆ ಟ್ಯಾಗ್ ಮಾಡಿದ್ದಾರೆ. ಇದು ತುಂಬಾ ಪರಿಣಾಮ ಬೀರಿತು ಮಾತ್ರವಲ್ಲಿ ಟಾಟಾ ಅವರೇ ಖುದ್ದಾಗಿ ನಮ್ಮ ಮುಖ್ಯರನ್ನು ಸಂಪರ್ಕಮಾಡಿ ಕಾಸರಗೋಡಿನಲ್ಲಿ ಒಂದು ಆಸ್ಪತ್ರೆಯ ತುರ್ತು ನಿರ್ಮಾಣ ಕಾರ್ಯದ ವಿಷಯ ಪ್ರಸ್ತಾಪವಾಗಿ ತಕ್ಷಣದಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಇದೀಗ ತೆಕ್ಕಿಲ್ ನಲ್ಲಿ ಜಿಲ್ಲಾಡಳಿತ ಒದಗಿಸಿದ ಸ್ಥಳದಲ್ಲಿ 540 ಹಾಸುಗೆಗಗಳನ್ನು ಹೊಂದಿರುವ ಅತ್ಯಾಧುನಿಕ ಆಸ್ಪತ್ರೆ ಟಾಟಾ ಸಮೂಹ ಸಂಸ್ಥೆಯ ವತಿಯಿಂದ ಶೀಘ್ರದಲ್ಲೇ ಸಜ್ಜುಗೊಳ್ಳುತ್ತಾಯಿದೆ.
ಮಹೀಂದ್ರ ಸಂಸ್ಥೆಯ ವತಿಯಿಂದ ವೈದ್ಯರುಗಳಿಗೆ ಚಿಕಿತ್ಸಾ ಸಂದರ್ಭದಲ್ಲಿ ಧರಿಸುವ ಮೆಡಿಕಲ್ ಗೌನ್ ಒದಗಿಸಲಾಗುತ್ತದೆ. ಜಾಲತಾಣಗಳನ್ನು ಸಮರ್ಥವಾಗಿ ಸದ್ವಿನಿಯೋಗ ಮಾಡಿಕೊಳ್ಳಬಹುದು ಎಂಬುದು ಇಲ್ಲಿ ವ್ಯಕ್ತವಾಗಿದೆ.
ರಾಜಗೋಪಾಲ ಕೈಪ್ಪಂಗಳ ಇವರು ಗುರುಸೇವಾ ಕಾರ್ಯಗಳ್ಲಲೂ ಸದಾ ಮುಂದು. ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಮುಳ್ಳೇರಿಯಾ ಹವ್ಯಕ ಮಂಡಲ ಚಂದ್ರಗಿರಿ ವಲಯದ ಉಪಾಧ್ಯಕ್ಷರಾಗಿ ಗುರುಸೇವೆಯನ್ನು ಮಾಡುತ್ತಾ ಇದ್ದಾರೆ.
ಮುಳ್ಳೇರಿಯಾದ ಕಾರ್ಲೆಯಲ್ಲಿ ಸಜ್ಜಾಗುತ್ತಾ ಇರುವ ಶ್ರೀ ರಾಮಚಂದ್ರಾಪುರಮಠದ ಸಮಾಜಮುಖೀ ವಿವಿಧ ಯೋಜನೆಗಳಲ್ಲೊಂದಾದ ಸಮರಸ ಯೋಜನೆಯಲ್ಲಿ ಸಂಚಾಲಕರಾಗಿದ್ದು, “ಸಮರಸಟ್ರಸ್ಟ್” ನ ಕಾರ್ಯದರ್ಶಿಯಾಗಿ ಸಕ್ರಿಯರಾಗಿ ಕಾರ್ಯನಿರ್ವಹಿಸುತ್ತಾ ಇದ್ದಾರೆ.
ಗುರುಸೇವೆಯನ್ನು ಮಾಡುತ್ತಾ ಸಾಮಾಜಿಕವಾಗಿಯೂ ಜನತಾ ಸೇವೆಯೇ ಜನಾರ್ಧನ ಸೇವೆಯಾಗಿ ಸ್ವೀಕರಿಸಿ ಸಮಾಜದ ಅಭಿವೃದ್ಧಿಯಲ್ಲಿ ತಮ್ಮನ್ನು ಸದಾ ಸಕ್ರಿಯರಾಗಿ ತೊಡಗಿಸಿಕೊಂಡ ರಾಜಗೋಪಾಲ ಕೈಪ್ಪಂಗಳ ಅವರಿಗೆ ಶ್ರೀರಾಮಾನುಗ್ರಹವಿರಲಿ ಶ್ರೀಗುರುಗಳ ಆಶೀರ್ವಾದವಿರಲಿ ಎಂಬುದಾಗಿ ಪ್ರಾರ್ಥನೆ.
ಗೋವಿಂದಬಳ್ಳಮೂಲೆ, ಶಿಷ್ಯಮಾಧ್ಯಮ
➖➖➖➖➖➖➖➖?