ಪುಸ್ತಕ ಜ್ಞಾನಿಯು ಮೂಲವ ಮರೆತು
ನಾನು ನಾನು ಎನ್ನುವನು.
ಇವನಿಗಿಂತ ಸಂಸಾರಿಯೆ ಮೇಲು
ಅವ ಭಯದಿಂದಿಹನು- ಕಬೀರ.

ಜ್ಞಾನಿ ಎನ್ನುವವರ ಅಜ್ಞಾನವನ್ನು ಕುರಿತು ಕಬೀರರು ಈ ದೋಹೆಯಲ್ಲಿ ಹೇಳಿದ್ದಾರೆ. ಪುಸ್ತಕವನ್ನು ಓದಿ ತನ್ನನ್ನು ತಾನೇ ಜ್ಞಾನಿ ಎಂದು ಭಾವಿಸಿ ನಾನು ಎನ್ನುವ ಅಹಂಕಾರವನ್ನು ತಲೆಯಲ್ಲಿ ತುಂಬಿಕೊಂಡು ನಾನೇ ಶ್ರೇಷ್ಠ ಉಳಿದುದೆಲ್ಲವೂ ಕನಿಷ್ಠ ಎಂಬ ಅಹಂಕಾರ ತುಂಬಿಕೊಂಡವರಿಗೆ ಜಗದ ಸತ್ಯದ ಅರಿವಾಗಲಾರದು. ಈ ಜಗತ್ತನ್ನು ನಡೆಸುವ ಅಗೋಚರ ಶಕ್ತಿಯೊಂದಿದೆ ಅದರ ನಿಯಂತ್ರಣದಲ್ಲಿ ನಾನಿದ್ದೇನೆ.

RELATED ARTICLES  ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲಿಕೆ -


ಅಲ್ಲಿಂದ ನಿಮಂತ್ರಣ ಬಂದ ಕೂಡಲೇ ನಾನಲ್ಲಿಗೆ ತೆರಳಲೇಬೇಕು ಎಂಬ ಸತ್ಯ ಇಂಥವರ ನಾನು ಎಂಬ ಮಿಥ್ಯೆಯಡಿಯಲ್ಲಿ ಮರೆಯಾಗಿ ಹೋಗುತ್ತದೆ. ಇಂಥವರಿಗಿಂತ ಸಂಸಾರಿಗಳೇ ಮೇಲು. ಅವರಿಗೆ ಆ ಶಕ್ತಿಯ ಭಯವಾದರೂ ಇದೆ. ಎಂಬುದನ್ನು ಈ ದೋಹೆ ಹೇಳುತ್ತದೆ. ಅದಕ್ಕೇ ದಾಸ ಶ್ರೇಷ್ಠರು ಹೇಳಿದ್ದು ನಾನು ನಾನು ಎನ್ನದಿರು ಹೀನ ಮಾನವ. ಜ್ಞಾನದಿಂದ ನಿನ್ನ ನೀನು ತಿಳಿದು ನೋಡೆಲೋ. ಅಂತ.

RELATED ARTICLES  ಗೋವೆಂದರೆ ಬರಿಯ ದೇವರಲ್ಲ ಭಾರತೀಯರ ಪಾಲಿಗೆ ಎಲ್ಲವೂ..

ಡಾ.ರವೀಂದ್ರ ಭಟ್ಟ ಸೂರಿ