ಸತ್ಯಕೆ ಸಮ ತಪವಿಲ್ಲ.
ಸುಳ್ಳಿನಂತ ಪಾಪ.
ಯಾರ ಹೃದಯದಿ ಸತ್ಯವಿಹುದೋ
ಶ್ರೀ ಗುರುವಿಹನಲ್ಲಿ -ಕಬೀರ.
ಸತ್ಯಕ್ಕೆ ಸಮನಾದ ತಪಸ್ಸಿಲ್ಲ ಸುಳ್ಳಿನಂತಹ ಪಾಪ ಇನ್ನೊಂದಿಲ್ಲ. ಯಾರು ಸತ್ಯ ವೃತವನ್ನು ಪಾಲಿಸುತ್ತಾರೋ ಅಲ್ಲಿ ಗುರುವಿನ ಸಾನ್ನಿಧ್ಯವಿರುತ್ತದೆ ಎಂಬುದು ಸಂತ ಕಬೀರರ ದೋಹೆಯ ಸಾರ.
ಸುಳ್ಳೇ ತುಂಬಿರುವ ಜಗತ್ತಿನಲ್ಲಿ ಸತ್ಯಕ್ಕೆ ಬೆಲೆ ಎಲ್ಲಿದೆ? ಎಂಬುದು ಬಹುತೇಕರ ಪ್ರಶ್ನೆ. ಆದರೆ ಸತ್ಯಕ್ಕೆ ಬೆಲೆ ಇದ್ದೇ ಇದೆ ಅದು ಪ್ರಕಟವಾಗುವಾಗ ಸ್ವಲ್ಪ ವಿಳಂಬವಾಗಬಹುದು ಅಷ್ಟೇ. ಸುಳ್ಳು ಕ್ಷಣಿಕ ಸುಖ ನೀಡಬಹುದು ಆದರೆ ಸುಳ್ಳಿನ ಬಣ್ಣ ಬಯಲಾದಾಗ ನಾವು ಜನರ ಮಧ್ಯೆ ಬೆತ್ತಲಾಗುತ್ತೇವೆ. ಸತ್ಯ ತಕ್ಷಣಕ್ಕೆ ಪರಿಣಾಮ ಬೀರದಿದ್ದರೂ ದೂರಗಾಮಿ ಪರಿಣಾಮ ಖಂಡಿತ ಇದ್ದೇ ಇರುತ್ತದೆ. ಕೊನೆಗೆ ನಿಲ್ಲುವುದು ಸತ್ಯವೊಂದೇ ಹಾಗಾಗಿ ನಾವು ಸತ್ಯ ವಂತರಾಗಬೇಕು ಎಂಬುದು ಕಬೀರರ ಅಭಿಮತ.
ಅದನ್ನೇ ನಮ್ಮ ಗಾದೆ ಮಾತು ಹೇಳಿದ್ದು ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ ಎಂದು.
ಡಾ.ರವೀಂದ್ರ ಭಟ್ಟ ಸೂರಿ