ಮಗುವಿನ ಸರ್ವಾಂಗೀಣ ಅಭಿವ್ರದ್ದಿಯಲ್ಲಿ ಅಟ ಮಹತ್ವದ ಪಾತ್ರ ವಹಿಸುತ್ತದೆ. ಅಟ ಅಡಿ ದಣಿದರೆನೇ ಅ ಮಗುವಿನ ದೇಹ ಮನಸ್ಸು ಹಗುರಾಗಿ ಉತ್ತೇಜನ ಸಿಗುತ್ತದೆ. ಅಂದು ಮಕ್ಕಳಿಗೆ
ಪರಿಸರದಲ್ಲಿ ಸಿಗುವ ವಸ್ತುಗಳೇ ಅಟದ ಸಾಮಾಗ್ರಿಗಳು. ಹಂಚಿನ ಗೊರಪೆಯಿಂದ ಬೆಟ್ಟೆ ಮಾಡಿ ಬೆಟ್ಟೆ ಅಟ ಅಡಿ ಖುಶಿಪಡುತ್ತಿದ್ದರು. ಚೆನ್ನೆ ಕಾಳುಗಳನ್ನು ಸಂಗ್ರಹಿಸಿ ಚೆನ್ನೆ ಮಣೆ ಅಡುತ್ತಿದ್ದರು. ಗದ್ನಕಾಯಿ(ಗಜ್ಜುಗ)ತಂದು ಅದರಿಂದ ಅಟ. ಹೀಗೆ ಪ್ರತಿಯೊಂದು ಅಟವು ನಿಸರ್ಗದ ಕಲ್ಪನೆಯೊಂದಿಗೆ
ಮಕ್ಕಳಲ್ಲಿ ಸಾಮರಸ್ಯ ಮೂಡಿಸುತ್ತಿದ್ದವು. ಅಕ್ಕ ಪಕ್ಕದ ಮನೆಯ ಮಕ್ಕಳು ಸೇರಿ ಅಟವಾಡುವಾಗ ಅವರಲ್ಲಿ ಸಹಜವಾಗಿ ಪೈಪೋಟಿ. ಒಗ್ಗಟ್ಟು . ಸ್ನೇಹ ಬೆಸೆಯುತ್ತಿತ್ತು.
ಜೊತೆಯಲ್ಲಿ ಸಾಮಾನ್ಯ ಜ್ಞಾನದ ಪರಿಚಯ ಅಗುತ್ತಿತ್ತು. ತೆಂಗಿನ ಮರದ ಹೆಡೆಪೆಂಟೆ ಇದ್ದರೆ ಅದನ್ನು ಕ್ರಿಕೆಟ್ ಬ್ಯಾಟ್ ಮಾಡಿ ಚೆಂಡು ಕಾಯಿ ಬಾಲ್ ಮಾಡಿ ಅಟ ಅಡುತ್ತಿದ್ದರು. ಅಟಕ್ಕೆ ಯಾವುದೇ ರೀತಿಯ ಖರ್ಚು ಇರುತ್ತಿರಲಿಲ್ಲ. ಅದರೆ ಇಂದು ಹಾಗಲ್ಲ. ಮಕ್ಕಳು ಹುಟ್ಟುತ್ತಲೇ
ಅಂಗಡಿಯಿಂದ ಪ್ಲಾಸ್ಟಿಕ್ ಅಟದ ಸಾಮಾನುಗಳು ಬರತೊಡಗುತ್ತವೆ. ಎಲ್ಲ ಅಟದವು ಈಗ ಕ್ರತಕವಾದವೇ.

RELATED ARTICLES  ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲಿಕೆ


ನಿಸರ್ಗದತ್ತವಾದ ಅಟ ಈಗ ಮಾಯವಾಗಿದೆ. ಮಕ್ಕಳು ಇಂದು ಹಿಂದಿನ ಅಟದ ಬಗ್ಗೆ ಹೇಳಿದರೆ ಅಶ್ಚರ್ಯ ಪಡುತ್ತಾರೆ. ಅವುಗಳ ಕಲ್ಪನೆ ಕೂಡ ಅವರಿಗೆ ನಿಲುಕುವದಿಲ್ಲ. ಈಗಂತೂ ಮೊಬೈಲ್ ಸಿಕ್ಕರೆ ವೇಳೆ ಕಳೆದುದೇ ಗೊತ್ತಿಲ್ಲ. ಮೊಬೈಲ್ ಗೇಮ್. ಕಂಪ್ಯುಟರ್ ಗೇಮ್. ಟೇಬ್ಸ . ಇವೆಲ್ಲ ಮಕ್ಕಳ ಅಟಕ್ಕೆ ಇರುವಂತದು. ಹೊರಗೆ ಹೋದರೆ ವಾಲಿಬಾಲ್. ಪುಟ್ಬಾಲ್. ಟೆನ್ನೀಸ್. ಎಲ್ಲ ಇವೆ.ಇವು ದೇಹಕ್ಕೆ ಬಲ ಕೊಡುತ್ತವೆ
ಅದರೆ ಮನೆಯಲ್ಲಿ ಅಕ್ಕ ಪಕ್ಕದವರೊಡನೆ ಸೇರಿ ಲೆಕ್ಕ ಕಲಿತು ಹಾಡು ಕಲಿತು ಕತೆ ಕಲಿತು ಅಡುವ ಜಾನಪದ ಅಟಗಳು ಈಗ ಕಾಣದಾಗಿದೆ. ಮಕ್ಕಳ ಮನಸ್ಸಿಗೆ ಹಿತನೀಡಿ. ಪರಿಸರದ ಬಗ್ಗೆ ಜ್ಞಾನ ನೀಡಿ ಅವರ ಬುದ್ದಿಶಕ್ತಿ ನೈತಿಕ ಶಕ್ತಿಯನ್ನು ಹೆಚ್ಚಿಸುವಂತಹ ಶಿಕ್ಷಣ ಈಗ ಕಣ್ಮರೆಯಾಗುತ್ತಿದೆ. ಕ್ರತಕ ಬದುಕು. ಕ್ರತಕ ಸಾಮಾಗ್ರಿಗಳ ಜೊತೆ ಬೆಸೆದುಕೊಂಡಿದೆ. ಮಕ್ಕಳಲ್ಲಿ ಕಲಿಕೆಯ ಉತ್ಸಾಹ ಕಡಿಮೆಯಾಗಿ ಜ್ಞಾನ ಸೀಮಿತವಾಗಿದೆ. ಅಟದಲ್ಲಿ ಪಾಠದಲ್ಲಿ ನಿರುತ್ಸಾಹಿಯಾಗಿ
ಮಗು ಬೇಸರದಲ್ಲಿ ಒತ್ತಾಯದಿಂದ ತೊಡಗಿಕೊಳ್ಳುತ್ತಿದೆ ಎಂದರೆ ಉತ್ಪ್ರೇಕ್ಷೆಯಲ್ಲ ಅಲ್ಲವೇ

RELATED ARTICLES  ಮನುಷ್ಯನ ವ್ಯಕ್ತಿತ್ವ ಗೋಪುರದಂತೆ ಕಂಗೊಳಿಸಿದರೆ? ಭಾಗ-2

ಕಲ್ಪನಾಅರುಣ
ಬೆಂಗಳೂರು