ಸ್ಮರಣೆಯಿಂದ ಸುಖವಹುದೋ
ದುಃಖವು ತೊಲಗುವುದು.
ಸತತವು ಸ್ಮರಣೆಯ ಮಾಡಿರಿ ನೀವು.
ದರ್ಶನ ದೊರೆಯುವುದು-ಕಬೀರ.

ನಮ್ಮೆಲ್ಲ ದುಃಖ ಸಂಕಟಗಳಿಗೆ ಪರಿಹಾರ ದೇವನ ಸ್ಮರಣೆಯಲ್ಲಿದೆ. ಜೀವನು ಜೀವನ ಪಾವನ ಮಾಡಿಕೊಳ್ಳಲು ದೇವನ ಸ್ಮರಣೆ ಮಾಡಬೇಕು ಅದನ್ನೇ ಕವಿವಾಣಿಯೊಂದು ಹೇಳುವುದು “ಸ್ಮರಣೆ ಮಾತ್ರದಲ್ಲಿ ಕ್ಲೇಶ ಕಳೆದು ಸದ್ಗತಿಯ ಕೊಡುವನಮ್ಮ” ಅಂತ. ಆತನ ನಾಮಸ್ಮರಣೆಯ ಪ್ರಭಾವವೇ ಅಂಥದ್ದು ಅದು ನಿತ್ಯ ನಿರಂತರ ಸುಖ ಕೊಡುವ ಸಾಧನ. ಅದರಿಂದ ಮೈಮನ ಪಾವನ . ಅವನ ದರ್ಶನ ಪಡೆಯಬೇಕೆಂದರೆ ಅದಕ್ಕಿರುವ ಒಂದೇ ದಾರಿ ಸತತ ನಾಮಸ್ಮರಣೆ ಎಂಬುದು ಸಂತ ಕಬೀರರ ಅಭಿಮತ. ಅದನ್ನೇ ಕವಿಮನ ಕಲ್ಪಿಸಿದ್ದು ಹೀಗೆ…………………………

RELATED ARTICLES  ಸಾಗರ ನಗರಸಭೆಯ ಮಾಜಿ ಅಧ್ಯಕ್ಷರ ಕಾರು ಅಪಘಾತ

ದೇವನೆಲ್ಲಿಹನೆಂದು ಯಾರು ಹೇಳಲು ಬಲ್ಲ.
ಕಲ್ಲಿನಲಿ ಕಾಷ್ಠದಲಿ ಮತ್ತೆಲ್ಲು ಇಲ್ಲ.
ದೇವ ನಿರುತಿಹನು ನೆನೆದವರ ಮನದಲ್ಲಿ .
ಎಲ್ಲಿ ಭಕ್ತಿಯ ಭಾವ ಅವನ ನೆಲೆ ಅಲ್ಲಿ.

RELATED ARTICLES  ಇರಿವೆಯಿಂದ ಇಂದ್ರನವರೆಗೆ ಎಲ್ಲರಿಗೂ ಬೇಕಾದದ್ದು ಆನಂದ!

ಡಾ.ರವೀಂದ್ರ ಭಟ್ಟ ಸೂರಿ