ಜೀವ ಆತ್ಮ ದೇಹಗಳಲ್ಲಿ
ಎಂತಹ ತಾದಾತ್ಮ.
ಆಯುವು ಮುಗಿಯೆ ಆತ್ಮನು ಹೊರಟ.
ದೂಳು ಕೊಡವಿಕೊಂಡು-ಕಬೀರ.
ಜೀವ, ಆತ್ಮ ,ದೇಹಗಳಲ್ಲಿ ಅವಿನಾಭಾವ ಸಂಬಂಧವಿದೆ. ಅವು ಅನೇಕದಲ್ಲಿ ಏಕದಂತೆ ಇವೆ. ಎಲ್ಲಿಯವರೆಗೆ ಆಯಸ್ಸು ಇರುತ್ತದೆಯೋ ಅಲ್ಲಿಯವರೆಗೆ ಈ ದೇಹದಲ್ಲಿ ಆತ್ಮ ವಿರುತ್ತದೆ. ಆಯಸ್ಸು ಮುಗಿದ ಕೂಡಲೇ ಆತ್ಮವು ಈ ದೇಹದಿಂದ ಧೂಳು ಕೊಡವಿಕೊಂಡು ಹೊರಟು ಬಿಡುತ್ತದೆ. ಎಂಬುದು ಕಬೀರರ ನುಡಿ.
ನಾವು ದೇಹವನ್ನು ಪಾಲಿಸುತ್ತೇವೆ ಪೋಷಿಸುತ್ತೇವೆ. ಶಾಶ್ವತ ಎಂಬಂತೆ ಭಾವಿಸುತ್ತೇವೆ. ಆದರೆ ಆತ್ಮ ಒಂದಿದೆ ಎಂಬುದನ್ನು ಮರೆತುಬಿಡುತ್ತೇವೆ. ಬಹಿರಂಗಕ್ಕೆ ಕೊಡುವ ಮಹತ್ವವನ್ನು ಅಂತರಂಗಕ್ಕೆ ಕೊಡುವುದಿಲ್ಲ ಯಾರು ಅಂತರ್ಮುಖಿಯಾಗಿ ಅಂತರಂಗದ ಬಾಗಿಲು ತೆರೆಯುತ್ತಾನೋ ಅವನಿಗೆ ಆತ್ಮದ ದರ್ಶನವಾಗುತ್ತದೆ. ಆತ್ಮಾನುಸಂಧಾನವಾಗುತ್ತದೆ. ಹಾಗಾಗಿ ದೇಹದ ಮೇಲೆ ಮೋಹ ಬೇಡ ಅಂತರ್ಮುಖಿಯಾಗಿ ಎಂಬುದು ಕಬೀರರ ಸಂದೇಶ.
ಅದನ್ನೇ ಕವಿ ಹೇಳಿದ್ದು ಹೀಗೆ ಮಾನವ ದೇಹವು ಮೂಳೆ ಮಾಂಸದ ತಡಿಕೆ ಅದರ ಮೇಲಿದೆ ತೊಗಲಿನ ಹೊದಿಕೆ ತುಂಬಿದೆ ಒಳಗೆ ಕಾಮಾದಿ ಬಯಕೆ ಎಂದು . ದೇಹ ಶುದ್ಧಿ ಗಿಂತ ಮೊದಲು ಆತ್ಮ ಶುದ್ಧಿ ಮಾಡಿಕೊಳ್ಳೋಣ.
ಡಾ.ರವೀಂದ್ರ ಭಟ್ಟ ಸೂರಿ