ಇಂದಿನ ಬದುಕು ಯಾಂತ್ರಿಕವಾಗುತ್ತಿದೆ. ಕಂಪ್ಯುಟರ್. ಮೊಬೈಲ್ ಮಕ್ಕಳ ಮನಸ್ಸನ್ನು ಬದಲಾಯಿಸಿವೆ. ಪ್ರತಿಯೊಂದು ಮಗು ಇಂದು ಹಿರಿಯರ ಮಾತಿಗೆ ಬೆಲೆ ಕೊಡದೆ ಯಂತ್ರಗಳ ಜೊತೆ ಅಟ ಪಾಠ ದಲ್ಲಿ ತಲ್ಲೀನವಾಗುತ್ತಿದೆ. ಮೊಬೈಲ್ ಕೈಗೆ ಬಂದರೆಸಾಕು. ಮನೆಯಲ್ಲಿ ಯಾರ ಬಗ್ಗೂ ಗಮನವಿರುವದಿಲ್ಲ. ತಾಳ್ಮೆಯಂತೂ ಕೆಟ್ಟು ಸಿಡುಕು ದುಡುಕು ಬುದ್ದಿಯತ್ತ ಮನಸು
ಒಯ್ಯುತ್ತಿದೆ. ಕಾರಣ ಮಕ್ಕಳ ಮನಸ್ಸಿಗೆ ದೇಹಕ್ಕೆ ಹಿತವಾದ
ಶಿಕ್ಷಣಬೇಕು.
ಮಗು ಇಂದಿನ ಶಿಕ್ಷಣದಲ್ಲಿ ಸಹನೆ. ದಯೆ. ಪ್ರೀತಿ. ಗೌರವದ ಭಾವನೆ. ಹಿರಿಯರು ಗುರುಗಳಲ್ಲಿ ಭಕ್ತಿ ಇವೆಲ್ಲ ಉತ್ತಮ ಅಂಶಗಳನ್ನು ಕಂಡು ಅನುಸರಿಸಬೇಕು. ಯಾಂತ್ರಿಕತೆಯಿಂದ ಹೊರಬಂದು ಎಲ್ಲರಲ್ಲಿ ಬೆರೆಯುವ. ಸ್ನೇಹ ಸಂಪಾದಿಸಿ ಬೆಳೆಯುವ. ಸದ್ಬಾವನೆ. ಸಮಾದಾನದಿಂದ ಕಲಿಯುವ ಗುಣ ಬೆಳೆಸಿಕೊಳ್ಳಬೇಕು. ಸಮಾಜ ವ್ಯಕ್ತಿಗಳ ಗುಂಪು. ವ್ಯಕ್ತಿತ್ವ ನಿರ್ಮಾಣ ಸದುದ್ದೇಶ. ಸದ್ಗುಣಗಳ ಸಂಪತ್ತಿನಿಂದ ಕೂಡಿದ್ದರೆ ಸಮಾಜ ನಿರ್ಮಾಣಕ್ಕೆ ಅದು ಬುನಾದಿಯಾಗುತ್ತದೆ. ಮಗುವಿನ ಹಂತದಲ್ಲಿ ಇದು ಚಿಗುರೊಡೆದರೆ ಮರದ ಫಲ ಸವಿಯಾಗಿಯೇ ಇರುತ್ತದೆ.
ಕಾರಣ ನಾವೆಲ್ಲ ಹಿರಿಯರು ಗುರುಗಳು ನಮ್ಮ ನಮ್ಮ ಕರ್ತವ್ಯದ ಗಣನೆಯ ಕುರಿತು ಚಿಂತಿಸಿ ಮಕ್ಕಳಲ್ಲಿ ಮೌಲ್ಯ ವರ್ದಿಸುವ ಹಿನ್ನೆಲೆಯತ್ತ ಗಮನ ಹರಿಸೋಣ. ಅರಿವೇ ಗುರು. ನುಡಿಯೇ ಜ್ಯೋತಿರ್ಲಿಂಗ. ಅಂತರ್ಯ ಪರಿಪಕ್ವತೆಗೆ ಅನುಸರಣೀಯವಾಗಲಿ ಮನಸತರಂಗ!!
ಕಲ್ಪನಾಅರುಣ