ಓಡಿ ಬರುತಲಿಹೆ ನಿನ್ನೆಡೆಗೆ.
ನೀನೇ ನನಗಾಶ್ರಯ.
ಜಲಜಿನ ಕಾಗೆಗೆ ಜಲಧಿಯ ನಡುವೆ.
ಜಹಜೇ ನಿಜ ಆಶ್ರಯ- ಕಬೀರ.

ವಿಶ್ವವನ್ನೇ ನಿಯಂತ್ರಿಸುತ್ತಿರುವ ಅಗೋಚರ ಶಕ್ತಿಯೊಂದಿದೆ ಎಂಬುದನ್ನು ನಂಬಿರುವ ಭಕ್ತ ಆ ಶಕ್ತಿಯೊಂದೇ ತನಗೆ ಆಶ್ರಯ ಎಂದು ನಂಬಿ ಓಡಿ ಬರುತ್ತಿದ್ದಾನೆ. ಸಮುದ್ರ ಮಧ್ಯದಲ್ಲಿರುವ ಹಡಗಿನ ಮೇಲೆ ಕುಳಿತಿರುವ ಕಾಗೆಗೆ ಹೇಗೆ ಆ ಹಡಗೇ ಆಶ್ರಯವೋ ಹಾಗೆ ನನಗೆ ನೀನೇ ಆಶ್ರಯ ಎನ್ನುತ್ತಿದ್ದಾನೆ. ಎಂಬುದು ಸಂತ ಕಬೀರರ ಅಭಿಮತ .

RELATED ARTICLES  ನೀನು ಹಿಂದೆ ಬಂದಾಗ ನಿನಗೆ ಆಯುಷ್ಯ ಕೊಟ್ಟು ಕಳುಹಿಸಿದ್ದೆ! ಹೀಗೆಂದರು ಶ್ರೀಧರರು

ಇಲ್ಲಿ ಕಬೀರರು ಸಾಗರವನ್ನು ಈ ಸಂಸಾರಕ್ಕೂ ಜಹಜನ್ನು ಆ ಪರಮಾತ್ಮನಿಗೂ ಕಾಗೆಯನ್ನು ಮನುಷ್ಯನಿಗೂ ಹೋಲಿಸಿದ್ದಾರೆ. ಈ ವಿಶ್ವದಲ್ಲಿ ಅಥವಾ ಸಂಸಾರ ಸಾಗರದಲ್ಲಿ ನಮಗೆ ಆ ಪರಮಾತ್ಮನೊಂದೇ ಆಶ್ರಯ ಎಂಬುದನ್ನು ಈ ದೋಹೆಯಲ್ಲಿ ಅವರು ಅತ್ಯಂತ ಸುಂದರವಾಗಿ ಹೇಳಿದ್ದಾರೆ.

RELATED ARTICLES  ನಿನ್ನ ಬಿರುದಿಗೇ ಕುಂದು

ತೇನವಿನಾ ತೃಣಮಪಿ ನ ಚಲತಿ ಆತನ ಅಣತಿಯಿಲ್ಲದೇ ಒಂದು ಹುಲ್ಲು ಕಡ್ಡಿ ಕೂಡಾ ಅಲ್ಲಾಡಲಾರದು ಎಂಬ ಮಾತಿನಲ್ಲಿರುವ ನಂಬಿಕೆ ಇದೇ ಅಲ್ಲವೇ…?

ಡಾ.ರವೀಂದ್ರ ಭಟ್ಟ ಸೂರಿ