ಜಪತಪ ಸಾಧನೆಗಳ ಸಾರ
ಸ್ಮರಣೆಯಲ್ಲಿ ಇಹುದು.
ಸ್ಮರಣೆಗೆ ಸಮನಾವುದು ಇಲ್ಲೆಂದು .
ಭಕ್ತನಿಗೇ ಗೊತ್ತು -ಕಬೀರ.
ನಾವು ಮಾಡುವ ಜಪ, ತಪ, ಸಾಧನೆಗಳ ಸಾರವಿರುವುದು ಆ ಭಗವಂತನ ಸ್ಮರಣೆಯಲ್ಲಿ. ಸ್ಮರಣೆಗೆ ಸಮನಾದುದು ಯಾವುದೂ ಇಲ್ಲ. ಆದರೆ ಅದರ ಅರಿವಿರುವುದು ಭಕ್ತನಿಗೆ ಮಾತ್ರ ಎಂದು ಕಬೀರರು ಈ ದೋಹೆಯಲ್ಲಿ ಹೇಳುತ್ತಾರೆ.
ನಾಸ್ತಿಕ ನಾದವಗೆ ಸ್ಮರಿಸುವ ಭಕ್ತಿ ,ಸ್ಮರಣೆಯ ಶಕ್ತಿ ಎರಡೂ ಅರಿವಿರುವುದಿಲ್ಲ. ಆದರೆ ಆಸ್ತಿಕ ನಾದವನಿಗೆ ಅದರ ಅನುಭವ, ಅರಿವು ಎರಡೂ ಇರುತ್ತದೆ. ಭಕ್ತಿ ಗೊಲಿಯದ ಶಕ್ತಿ ಯಾವುದೂ ಇಲ್ಲ. ಎಂಬ ಸತ್ಯವನ್ನು ಅರಿತಿದ್ದರಿಂದಲೇ ಆತ ಭಕ್ತ ನಾಗುತ್ತಾನೆ .
ಅದಕ್ಕೆ ದಾಸ ಶ್ರೇಷ್ಠರು ಹೇಳಿದ್ದು ಕಲಿಯುಗದೊಳು ಹರಿನಾಮವ ನೆನೆದರೆ ಕುಲ ಕೋಟಿಗಳು ಉದ್ಧರಿಸುವವೋ ಅಂತ.
ಡಾ.ರವೀಂದ್ರ ಭಟ್ಟ ಸೂರಿ.