ನೋವು ನೀಡುವ, ಹಂಗಿಸುವ, ಕಾಲೆಳೆಯುವ, ಹಿಂಸಿಸುವ, ಸಲ್ಲದ ಕಿರುಕುಳ ಕೊಟ್ಟು ಚಂದ ನೋಡುವ ಜನ ನಮ್ಮ ಬದುಕಿನ ಬಣ್ಣವನ್ನು ಕೆಡಿಸಿ ರಾಡಿ ಎಬ್ಬಿಸುತ್ತಾರಷ್ಟೇ….. ಆದರೆ ನಮ್ಮ ದಿನಗಳಿಗೆ ನಲಿವು ತುಂಬಿದ, ಕಾಳಜಿ ತೋರಿದ, ನಮ್ಮ ಅಭ್ಯುದಯವನ್ನೇ ಮನಸಾರೆ ಹಾರೈಸಿದ ಜನ ನಮ್ಮ ಕೊನೆಯುಸಿರು ಇರುವವರೆಗೂ ನಿತ್ಯ ಸ್ಮರಣೀಯರಾಗುತ್ತಾರೆ. ಅಂತಹ ನನ್ನ ಬಳಗದ ಅನೇಕರ ಪರಿಚಯವನ್ನು ನಾನು ಮಾಡುವದಕ್ಕಾಗಿಯೇ ಈ ಅಂಕಣದೊಂದಿಗೆ ನಿಮ್ಮ ಎದುರಾಗುತ್ತಿದ್ದೇನೆ. ನನ್ನ ಬದುಕಿಗೆ ಬಣ್ಣ ತುಂಬಿದವರು ಇವರು.
ಶ್ರೀ ಐ.ಎಸ್.ಹೆಗಡೆ ಕವಲಕ್ಕಿ
ಧನ್ಯತೆಗಾಗಿ ಬರೆಯಬೇಕು ನಾನು. ಅಭಿನಂದಿಸಿ ಮತ್ತೊಂದು ಹೃದಯಕ್ಕಾಗುವ ಸಂತೋಷಕ್ಕಾಗಿ ಬರೆಯಬೇಕು ನಾನು. ಬರೆದ ಬರಹದಿಂದ ಸ್ಫೂರ್ತಿಗೊಳ್ಳುವ ಅಭಿಮಾನದ ಸುಮನಸುಗಳಿಗಾಗಿ ಬರೆಯಬೇಕು ನಾನು. ಅವರೆಲ್ಲ ನನ್ನ ಬದುಕಿಗೆ ಬಣ್ಣ ತುಂಬಿದರು...ಅದರೆ ನಾನೇನು ಮಾಡಿದೆ ಅವರಿಗಾಗಿ?! ಎಂಬ ಕೊರಗನ್ನು ನೀಗಿಸಿಕೊಳ್ಳುವುದಕ್ಕಾದರೂ ನಾನು ಬರೆಯಬೇಕು. ಇಂದು ನಿಮ್ಮ ಮುಂದೆ ನನ್ನ ಪ್ರೀತಿಯ ಐ.ಎಸ್.ಹೆಗಡೆಯವರನ್ನು ಶಾರದಕ್ಕನನ್ನೂ ಜೊತೆಗೆ ಕರೆತಂದಿದ್ದೇನೆ. ನನ್ನನ್ನು ಮನದುಂಬಿ ಹಾರೈಸಿದ ಯೋಗ್ಯತಾವಂತರಿಗೆ ಕೈಜೋಡಿಸಿ ನನ್ನ ಅಕ್ಕರೆಯ ಅಕ್ಷರ ಕುಸುಮಗಳನ್ನು ಅರ್ಪಿಸುತ್ತಿದ್ದೇನೆ.
ಮೂಲತಃ ಹೊನ್ನಾವರ ತಾಲ್ಲೂಕಿನ ಕಣ್ಣಿಮನೆಯವರಾದ ಶ್ರೀಯುತ ಐ.ಎಸ್.ಹೆಗಡೆ ಸರ್ ಇದೀಗ ಕವಲಕ್ಕಿಯಲ್ಲಿ ವಾಸವಾಗಿದ್ದಾರೆ. ನನಗೆ ಹೈಸ್ಕೂಲಿನಲ್ಲಿ ಇಂಗ್ಲೀಷ್ ಕಲಿಸಿದ ಗುರುಗಳಿವರು. ಐ ಎಸ್ ಹೆಗಡೆ ಸರ್ ಅಂದರೆ ಮೊದಲು ನನಗೆ ಅವರ Suzuki ಗಾಡಿ ನೆನಪಾಗುತ್ತದೆ.? ಶಾರದಕ್ಕ ಕೂಡ ಒಬ್ಬ ಕ್ರಿಯಾಶೀಲ, ಆದರ್ಶ ಶಿಕ್ಷಕಿ. ಒಬ್ಬ ಉತ್ತಮ ಸಂಗೀತಗಾರ್ತಿ.
ನಾನು ಹೈಸ್ಕೂಲ್ ಮೆಟ್ಟಿಲೇರುವ ಹೊತ್ತಿಗೆ ನನಗೆ ಉಳಿದೆಲ್ಲಾ ವಿಷಯಗಳೂ ಅಷ್ಟೇನೂ ಕಠಿಣವೆನಿಸಲಿಲ್ಲ. ಆದರೆ ಇಂಗ್ಲೀಷ್ ಮಾತ್ರ....?? ಯಪ್ಪಾ......ಓಡಿ ಹೋಗಿ ಬಿಡೋಣ ಎನಿಸುತ್ತಿತ್ತು. ಅದರಲ್ಲೂ ನಮ್ಮ ಐ.ಎಸ್.ಹೆಗಡೆ ಸರ್ ಬಹಳ strict. ಸಂದೀಪ್ ಭಟ್ spelling ಹೇಳೊ ಎಂದರೆ ನಡುಕ ಹುಟ್ಟುತ್ತಿತ್ತು. ಯಾರೋ ಹೇಳಿದ್ದರು....ಇಂಗ್ಲೀಷ್ ಭಾಷೆ ಕನ್ನಡಕ್ಕಿಂತ ಸುಲಭ ಅದರಲ್ಲಿ 26 ಅಕ್ಷರಗಳಿವೆ ಅಂತ...?? ನನಗೆ ಅದೂ ಸರಿಯಾಗಿ ಬರದ ಪರಿಸ್ಥಿತಿ ಆವಾಗ. ಆದರೂ ಅತ್ಯಂತ ಶೃದ್ಧೆಯಿಂದ ಅದನ್ನು ಕಲಿಯಲೇ ಬೇಕೆಂದು ಹಟ ತೊಟ್ಟಿದ್ದೆ. ಆದರೂ ಎಲ್ಲ ವಿಷಯಕ್ಕಿಂತ ನನಗೆ ಕಡಿಮೆ ಅಂಕ ಬೀಳುತ್ತಿದ್ದುದೇ ಇಂಗ್ಲೀಷಿನಲ್ಲಿ. ಒಮ್ಮೆ 16/25 ಅಂಕ ಬಿದ್ದಾಗ ಕಣ್ಣೀರು ಹಾಕಿದ್ದೆ. ನಮ್ಮ ಐ.ಎಸ್.ಹೆಗಡೆ ಸರ್ ಮಕ್ಕಳನ್ನು ತುಂಬಾ ಹತ್ತಿರ ಬಿಟ್ಟುಕೊಳ್ಳದ ಮನುಷ್ಯರು. ಎನ್ನೊ.........(ಏನೋ).....ಅಂದರೆ ಸಾಕು.....ನನಗೆ ಬರುತ್ತಿದ್ದ ಟುಸ್ಸು ಪುಸ್ಸು ಇಂಗ್ಲೀಷೂ ಮತ್ತೆ ಬುಸ್ಸೆಂದು ಹೆಡೆ ಎತ್ತುತ್ತಲೇ ಇರಲಿಲ್ಲ.?? ಸಮಗ್ರ ಇಂಗ್ಲಿಷ್ ಪುಸ್ತಕವನ್ನೇ ಕಂಠಪಾಠ ಮಾಡಿಬಿಡೋಣ ಎಂಬ ತೀರ್ಮಾನಕ್ಕೆ ನಾನು ಬಂದಿದ್ದೆ.
ಆದರೂ ನಮ್ಮ ಐ.ಎಸ್ ಹೆಗಡೆ ಸರ್ ಕೃಪಾ ಕಟಾಕ್ಷದಿಂದ English Major ನಲ್ಲೇ ಪದವಿ ಮುಗಿಸಿ, English M.A. ಯನ್ನೂ complete ಮಾಡಿ English subject teacher ಆಗಿಯೆ work ಮಾಡುತ್ತಿರುವುದಕ್ಕೆ ಆ English ಗೂ ನಮ್ಮ ಸರ್ ಗೂ ಕೋಟಿ ನಮಸ್ಕಾರ ಸಲ್ಲಿಸಬೇಕು.??
ಐ.ಎಸ್ ಹೆಗಡೆ ಸರ್ ಒಮ್ಮೆ ನಮ್ಮ class ಗೆ ಬಂದವರು ಯಾವುದೋ ವಿಷಯಕ್ಕಾಗಿ Do you know Dickey Bird?! ಎಂದು ನನ್ನ ಪಕ್ಕದ ವಿದ್ಯಾರ್ಥಿಯೋರ್ವನನ್ನು ಪ್ರಶ್ನಿಸಿದರು. ಅವನು ಹೆದರಿ ನಡುಗುತ್ತಾ ಸುಮ್ಮನೆ ನಿಂತ. ಈ ಪ್ರಶ್ನೆಗೆ ನನಗೆ ಸಮರ್ಪಕವಾದ ಉತ್ತರ ಗೊತ್ತಿತ್ತು. ನಾನೊಬ್ಬನೇ ಮೊದಲು ಕೈ ಎತ್ತಿದ್ದೆ. ಇಡೀ ತರಗತಿಯಲ್ಲಿ English period ನಲ್ಲಿ ಹೀಗೆ ತಕ್ಷಣ ಕೈ ಎತ್ತಿದ್ದು ಇದೇ ಮೊದಲು ಮತ್ತು ಇದೇ ಕೊನೆ.? ಆದರೆ ಅವರು ನನ್ನನ್ನು ಕೇಳದೆ ಮತ್ತೊಬ್ಬನನ್ನು ಪ್ರಶ್ನಿಸಿದರು. ಅವನು Its one type of bird ಅಂದ.....? ಹೆಣ್ಣುಮಕ್ಕಳಿಗಂತೂ ಇದು boundary line ke baaahar. ಕ್ರಿಕೆಟ್ ಗ್ರೌಂಡಿನಲ್ಲೇ ಬಿದ್ದು ಬೆಳಗುತ್ತಿದ್ದ ನನಗೆ ಅವರೊಬ್ಬ Great Umpire ಎಂಬುದು ಗೊತ್ತಿದ್ದರಿಂದ ಅದನ್ನು ಹೇಳಿ ಒಂದೇ ಒಂದು ಸಲ ಶಭಾಶ್ ಪಡೆದಿದ್ದೆ. ಅದು ನನಗೆ ಇಂದಿಗೂ ಖುಷಿ ಕೊಡುತ್ತದೆ.
ಐ.ಎಸ್.ಹೆಗಡೆ ಸರ್ ಬರೆಸಿಕೊಟ್ಟ ಪ್ರಶ್ನೋತ್ತರಗಳನ್ನು 10-15 ಬಾರಿ ಓದಿ ಕಂಠಸ್ಥಗೊಳಿಸಿ ಯಥಾವತ್ತಾಗಿ ಬರೆದು ಒಪ್ಪಿಸುವ ಪ್ರಯತ್ನ ನನ್ನದಾಗಿತ್ತು. spelling ನಂತೂ ದೇವರ ಸಹಸ್ರನಾಮ ಓದಿದ ಹಾಗೆ ಇಡೀ ದಿನ ಜಪಿಸುತ್ತಿದ್ದೆ. ದೇವರೇ ನನ್ನನ್ನು ಇವತ್ತೊಂದು ಬಚಾವ್ ಮಾಡು ಅಂತಲೇ ದಿನಾಲೂ ಬೇಡಿಕೊಳ್ಳುತ್ತಿದ್ದೆ. ಐ.ಎಸ್.ಹೆಗಡೆ ಸರ್ ನನ್ನ ಅಜ್ಜನ ಮನೆ ಊರಿನವರು. ನಮ್ಮ ತಂದೆ, ತಾಯಿಯರಿಗೆ ಬಹಳ ಚಿರಪರಿಚಿತರು. ಆದರೂ ಈ influence workout ಆಗುತ್ತಿರಲಿಲ್ಲ.? ಎಸ್.ಎಸ್.ಎಲ್.ಸಿ ಯಲ್ಲಿ ಬಾಕಿ ಎಲ್ಲಾ ವಿಷಯಕ್ಕೆ 100/100 ಬಿದ್ದು ಇದರೊಳಗೊಂದು ಡುಮಕಿ ಹೊಡೆದರೆ ಅಂತ ಇಡೀ ದಿನ English ನದ್ದೇ ಪಾರಾಯಣ.
ಆದರೆ ಈಗ ನನ್ನನ್ನೊಬ್ಬ ಸ್ನೇಹಿತನಿಗಿಂತ ಹೆಚ್ಚಾಗಿ ನೋಡಿಕೊಳ್ಳುವ ಸರ್ ನನ್ನ ಎಲ್ಲಾ ಪುಸ್ತಕಗಳನ್ನು ಕೊಂಡು ಓದಿದ್ದಾರೆ. ಖುಷಿ ಪಟ್ಟು ಬೆನ್ನು ತಟ್ಟಿದ್ದಾರೆ. ಶಾರದಕ್ಕನಂತೂ ನನ್ನನ್ನು ಶಾಲೆಯ ಮಕ್ಕಳ ಮೇಳಕ್ಕೆ ಕರೆಸಿಕೊಂಡು ಸಾರ್ವಜನಿಕವಾಗಿ ಸನ್ಮಾನಿಸಿದಳು. ನನ್ನನ್ನು ಅಪಾರವಾಗಿ ಪ್ರೀತಿಸುವ ಗುರುದಂಪತಿಗಳಿಗೆ ನಾನು ನೀಡುತ್ತಿರುವ ಗುರುಕಾಣಿಕೆಯಿದು.
ಐ.ಎಸ್.ಹೆಗಡೆ ಸರ್ ಇದೀಗ ಶ್ರೀ ಕರಿಕಾನ ಪರಮೇಶ್ವರಿ ವಿದ್ಯಾ ಸಂಸ್ಥೆಯಲ್ಲಿ ಪಿ.ಯು ಕಾಲೇಜಿನಲ್ಲಿ English lecturer. ಶಾರದಕ್ಕ ಹಡಿನಬಾಳದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಾರೆ. ನಮ್ಮ ಸರ್ ಭಾಮಿನಿ ಷಟ್ಪದಿಯಲ್ಲಿ ಕವಿತೆಗಳನ್ನು ರಚಿಸುವಷ್ಟು ಪ್ರತಿಭಾವಂತರು. ಸಾಹಿತ್ಯ ಪ್ರೇಮಿಗಳು. ಎಲ್ಲಕ್ಕಿಂತ ಹೆಚ್ಚಾಗಿ ತನ್ನನ್ನು ತಾನು ಗುರುತಿಸಿಕೊಳ್ಳದ, ಹೆಸರು ಬಯಸದ ಕೊಡುಗೈ ದಾನಿಗಳು. ಕಲಾರಾಧಕರು. ದಿನ ಬೆಳಗಾದರೆ ಹೆಸರು, ಹಣಗಳ ಹಿಂದೇ ಓಡುವ ಜಮಾನಾದಲ್ಲಿ ನಮ್ಮ ಸರ್ ನನಗೆ ನಿಜವಾದ ಸ್ಫೂರ್ತಿ. ಶಾರದಕ್ಕ ಮನೆಯಲ್ಲೇ ಸಂಗೀತ ತರಗತಿ ನಡೆಸುತ್ತಾ ಮಕ್ಕಳಿಗೆ ವಿದ್ಯಾದಾನ ಮಾಡುತ್ತಾಳೆ. ಜಿಲ್ಲಾ ಹಂತದ ಸ್ಕೌಟ ಗೈಡ್ ಅಧಿಕಾರಿಯೂ ಆಗಿರುವ ಶಾರದಕ್ಕ ಮಮತೆ, ವಾತ್ಸಲ್ಯಗಳೇ ತುಂಬಿದ ತುಂಬಿದಕೊಡ. ಮಕ್ಕಳಂತೂ ಅಪಾರ ಪ್ರತಿಭಾವಂತರು. ಖುಷೀ ಕುಟುಂಬ ಅದು.
ಈಗ ಕೆಲವು ದಿನಗಳ ಹಿಂದೆ ಕುಮಟಾದಲ್ಲಿ ನಮ್ಮ ಸರ್ ಎದುರಿಗೆ ನಾಲ್ಕು ಮಾತನಾಡುವ ಯೋಗ ಒದಗಿ ಬಂತು. ನೂರಾರು ಜನ ಸೇರಿದ್ದ ಸಭೆಯಲ್ಲಿ ನಮ್ಮ ಐ.ಎಸ್.ಹೆಗಡೆ ಸರ್ ಎದುರಿಗೆ ಮಾತನಾಡುತ್ತಿದ್ದೇನೆ ಎಂಬ ಸಂತೋಷ ಮನಸ್ಸಿನಲ್ಲಿತ್ತಾದರೂ ಅವರ ಎದುರಿಗೆ ಎಲ್ಲಿ ತಪ್ಪಿ ಹೋದರೆ ಎನ್ನುವ ಭಯವೂ ನನ್ನಲ್ಲಿತ್ತು. ತುಂಬಾ English Quotation ಬಳಸಲೇ ಇಲ್ಲ ಎಲ್ಲಾದರೂ grammatical mistakes ಆದರೆ ಅಂತ. ??
ನನಗಿಂತ ನನ್ನ ಮಡದಿ ಸರಸ್ವತಿ....ನಮ್ಮ ಐ.ಎಸ್ ಹೆಗಡೆ ಸರ್ ಹತ್ತಿರ ಹೆಚ್ಚು English ಕಲಿತವಳು. ಅವಳಿಗೂ ನಮ್ಮ ಸರ್ ಬಗ್ಗೆ ಅಪಾರ ಅಭಿಮಾನ. ನಮ್ಮ ಅಕ್ಕ ಸಂಧ್ಯಾ ಕೂಡ ಐ.ಎಸ್.ಹೆಗಡೆ ಸರ್ ರ ಭಕ್ತೆ. ಹೀಗಾಗಿ ನಮ್ಮದೊಂದು ಅಭಿಮಾನಿ ಸಂಘ ಅವರ ಬಗೆಗಾಗಿ ಇದೆ. ಹೃದಯವಂತ ಐ.ಎಸ್ ಹೆಗಡೆ ಸರ್ ಅವರಿಂದ ಬದುಕು ಕಂಡುಕೊಂಡಿರುವ ಸಾವಿರಾರು ವಿದ್ಯಾರ್ಥಿಗಳು ಇಂದು ದೇಶ ವಿದೇಶಗಳಲ್ಲಿ ನೆಲೆ ಕಂಡು ಕೊಂಡಿದ್ದಾರೆ. ಅವರೆಲ್ಲರೂ ನನ್ನ ಬರಹದಿಂದ ಸಂತಸ ಪಡುತ್ತಾರೆ ಎನ್ನುವ ಆಶಾವಾದ ನನ್ನದು.
ನನ್ನ ಇಷ್ಟದೈವ ಇಡಗುಂಜಿ ಮಹಾಗಣಪತಿಯು ಐ.ಎಸ್.ಹೆಗಡೆ ಸರ್, ಶಾರದಕ್ಕ ಹಾಗೂ ಅವರ ಕುಟುಂಬಕ್ಕೆ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ ನೆಮ್ಮದಿಯನ್ನಿತ್ತು ಹರಸಲೆಂದು ಪ್ರಾರ್ಥಿಸುತ್ತೇನೆ.
ಸರ್ ನಿಮಗೆ ಸಂದೀಪನ ಸಾಷ್ಟಾಂಗ ಪ್ರಣಾಮಗಳು
✍ಸಂದೀಪ ಎಸ್ ಭಟ್ಟ