ಗುರುವಿನ ಸೇವಕನೊಂದು ಶ್ವಾನ.
ಅದರ ಹೆಸರು ಮೋತಿ.
ಪ್ರೀತಿಯ ಹಗ್ಗವ ಕಟ್ಟಿಹನದಕೆ.
ಎತ್ತ ಎಳೆದರತ್ತ-ಕಬೀರ.
ಸಂತ ಕಬೀರರು ಗುರುವಿನ ಸೇವಕನನ್ನು ಈ ದೋಹೆಯಲ್ಲಿ ಶ್ವಾನಕ್ಕೆ ಹೋಲಿಸಿದ್ದಾರೆ. ಆ ಶ್ವಾನಕ್ಕೆ ಗುರುವು ಪ್ರೀತಿಯೆಂಬ ಹಗ್ಗ ಕಟ್ಟಿದ್ದಾನೆ. ಹಾಗಾಗಿ ಅದು ಎತ್ತ ಎಳೆದರೂ ಅತ್ತ ಬರುತ್ತದೆ. ಎನ್ನುತ್ತಾ ಗುರುವಿನ , ಸೇವಕನ ಪ್ರಾಮಾಣಿಕತನ. ಶಿಷ್ಯನ ಮೇಲೆ ಗುರುವಿಗಿರುವ ಅಪಾರ ಪ್ರೀತಿ. ಹಾಗೂ ಗುರು ಶಿಷ್ಯ ಸಂಬಂಧದ ವಿಶಿಷ್ಟ ಕಲ್ಪನೆಯನ್ನು ನಮ್ಮ ಮುಂದಿಟ್ಟಿದ್ದಾರೆ.
ಈ ದೋಹೆ ನಮ್ಮ ಭಾರತೀಯ ಪರಂಪರೆಯ ಗುರು-ಶಿಷ್ಯ ಸಂಬಂಧದ ವಿಶಿಷ್ಟತೆ , ಅಲ್ಲಿರುವ ಪ್ರಾಮಾಣಿಕತೆ, ಪ್ರೀತಿ, ಧನ್ಯತಾಭಾವವನ್ನು ಅತ್ಯಂತ ಮನೋಜ್ಞವಾಗಿ ಹೇಳಿದೆ.
ಅದನ್ನೇ ಕವಿವಾಣಿ ಹೇಳಿದ್ದು….
ಗುರುವಿನ ಗುಲಾಮನಾಗುವ ತನಕ. ದೊರೆಯದಣ್ಣ ಮುಕುತಿ. ಪರಿ-ಪರಿ ಶಾಸ್ತ್ರವ ಹೇಳಿದರೇನು. ವ್ಯರ್ಥವಾಯಿತು ಭಕುತಿ.
ಡಾ.ರವೀಂದ್ರ ಭಟ್ಟ ಸೂರಿ