ಮಾನವೀಯತೆ ಎಂದರೆ ಮನುಷ್ಯತ್ವ. ತೊಂದರೆಯಲ್ಲಿರುವವರಿಗೆ ಸಹಾಯ ಸಹಕಾರ ನೀಡಿ ಸಾಂತ್ವನಗೊಳಿಸುವದು. ಇಂದು
ಸಮಾಜದಲ್ಲಿ ಮಾನವೀಯತೆ ಕೆಲವರಲ್ಲಿ ಕಂಡುಬಂದರೂ ಇನ್ನೂ ಅನೇಕ ಜನ ಮನುಷ್ಯತ್ವದ ಬೆಲೆಯನ್ನು ಮರೆತಿದ್ದಾರೆ.ಸ್ವಂತ ಅಪ್ಪ ಅಮ್ಮರನ್ನು ನೋಡಿಕೊಳ್ಳುತ್ತಿಲ್ಲ. ಸಂಸಾರದ ವಿಷಯದಲ್ಲಿ ಜಗಳ ಕಿರಿಕಿರಿ.
ಹೀಗೆ ಮಾನವೀಯತೆಗೆ ಬೆಲೆ ಕಳೆದುಕೊಂಡು ನೆಮ್ಮದಿಯನ್ನು
ಕೆಡಿಸಿಕೊಂಡಿದ್ದಾರೆ. ಕೇವಲ ಅಸ್ತಿ ಪಾಸ್ತಿಯ ಹಕ್ಕು ಇವರದಾಗುವದೇ ಹೊರತು ಜವಾಬ್ದಾರಿಯ ಅರಿವು ಅಲ್ಲಿ ಇಲ್ಲ. ಅತ್ತೆ ಸೊಸೆ ಜಗಳ. ವ್ರದ್ದಾಶ್ರಮದ ವಾಸ. ಇವೆಲ್ಲ
ಮಾನವೀಯತೆ ಮರೆತ ಜನರ ವರ್ತನೆ. ಮಕ್ಕಳು ಅನಾಥರಾಗದಂತೆ ತಂದೆ ತಾಯಿ ಮುತುವರ್ಜಿಯಿಂದ ಬೆಳೆಸಿರುತ್ತಾರೆ. ಅದರೆ ಮಕ್ಕಳ ಸುಖಕ್ಕೆ ತಂದೆ ತಾಯಿ ಅಡ್ಡವಾಗುತ್ತಾರೆ ಎಂದೆನಿಸುವದು ಕರ್ತವ್ಯ ಲೋಪವಲ್ಲವೇ? ಮಗ ಅಥವಾ ಮಗಳು ಜವಾಬ್ದಾರಿ ಕಲಿತಾಗ ತಾಯಿ ತಂದೆಯರು ಅವರಿಗೆ ನೆರವಾಗಿ ಅವರ ಸುಖ ಸಂತೋಷದಲ್ಲಿ ತಾವು ಭಾಗಿಗಳಾಗಬೇಕು. ಅದು ಬಿಟ್ಟು ಹಳೆಯ ಪುರಾಣದಲ್ಲಿ ಇದ್ದರೆ ಅವರಿಗೂ ಬೇಸಾರವಾಗುತ್ತದೆ.ಇಲ್ಲಿ ಮಾನವೀಯತೆ ಸಂಸಾರದ ಸುಖದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಸೊಸೆಗೆ ಮೂಗುಮುರಿಯುವ ಪ್ರವ್ರತ್ತಿ ಬಿಟ್ಟು. ಅತ್ತೆ ಸೊಸೆಯರು ಸಂಸಾರವನ್ನು ಒಕ್ಕಟ್ಟಿಂದ ನಿಭಾಯಿಸಬೇಕು. ಮನೆಯಲ್ಲಿ
ಒಬ್ಬೊಬ್ಬರ ನಡುವೆ ಮಾನವೀಯತೆ ಬೆಳೆದರೆ ಅದು ಮುಂದೆ ಸಮಾಜಮುಖಿಯಾಗಿ ನಿಲ್ಲುತ್ತದೆ. ತಾಯಿ ಮೊದಲ ಗುರು.ಮಾನವೀಯತೆಯ ಸೆಲೆ ತಾಯಿ ಹ್ರದಯದಿಂದ ಹೊರಬಂದರೆ ಅದು ಮಕ್ಕಳ ಹ್ರದಯವನ್ನು ತಟ್ಟುತ್ತದೆ. ಮಾನವೀಯ ಮೌಲ್ಯ ನಿಜಕ್ಕೂ ದೈವತ್ವ ಪೂರ್ಣ.ಮಾನವೀಯತೆ ಕಷ್ಟದಲ್ಲಿ ಇರುವವರಿಗೆ ದೇವರಂತವರೆಂಬ ಬಾವನೆ ಹೊರಹೊಮ್ಮಿಸುತ್ತದೆ. ನಮ್ಮ
ಹ್ರದಯದಲ್ಲಿ ದೇವರಿದ್ದಾನೆ ಅ ದೈವತ್ವದ ಶಕ್ತಿ ಮಾನವೀಯತೆ ಎನ್ನುವದನ್ನು ಅರಿತು ನಮ್ಮನ್ನು ನಾವು ತಿದ್ದಿಕೊಳ್ಳೋಣ. ಮಾನವೀಯತೆ ಬೆಳೆದು ಮಮತೆಯ ಸಾಕ್ಷಾತ್ಕಾರ ಮಾಡಿಸೋಣ
ಕಲ್ಪನಾಅರುಣ