ಗುಂಪೆ ವಲಯದ ಸ್ವಾಸ್ಥ್ಯ ಮಂಗಲ ಕಾರ್ಯಕ್ರಮ ತಾ 24-8-2017 ಗುರುವಾರ ಬೆಜಪ್ಪೆ ಶ್ರೀಯುತ ಸುಬ್ರಹ್ಮಣ್ಯ ಭಟ್ ಇವರ ಮನೆಯಲ್ಲಿ ನಡೆಯಿತು. ಅವರು ನೂತನವಾಗಿ ನಿರ್ಮಿಸಿದ ಗೋಶಾಲೆಯ ಪ್ರವೇಶೋತ್ಸವವನ್ನು ದೇಶೀ ತಳಿಯ ಗೋವಿನ ಪ್ರವೇಶೋತ್ಸವದೊಂದಿಗೆ ನಡೆಸಿದರು. ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರೀಯುತ ವೇದಮೂರ್ತಿ ಪಂಜರಿಕೆ ಗಣಪತಿ ಭಟ್ ನೆರವೇರಿಸಿದರು.

ಶ್ರೀಮದ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ದೇಶೀಯ ಗೋವಿನ ಸಂರಕ್ಷಣೆ, ಸಂವರ್ಧನೆಯ ಕಾರ್ಯದಿಂದ ಪ್ರೇರಣೆಗೊಂಡು ತಾವೂ ಈ ಕಾರ್ಯದಲ್ಲಿ ಭಾಗಿಗಳಾಗುವ ಉದ್ದೇಶವನ್ನಿರಿಸಿ ಗೋ ಸಂರಕ್ಷಣೆಯ ಕಾರ್ಯವನ್ನು ಕೈಗೊಂಡರು.

ಬಂದ ಅತಿಥಿಗಳನ್ನುಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಶ್ರೀಮತಿ ಸ್ನೇಹಾ ರವೀಶ್ ಈದಿನ ಶ್ರೀಗುರುಗಳು ನಿರ್ದೇಶಿಸಿದ ಸಪ್ತ ಮಂಗಲ ಕಾರ್ಯಕ್ರಮದಲ್ಲಿ ಒಂದಾದ ಸ್ವಾಸ್ಥ್ಯ ಮಂಗಲ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನಾವು ಬೆಳಗಿನ ಫಲಾಹಾರವಾಗಿ ಕೆಸುವಿನ ಪತ್ರೊಡೆ, ಮಧ್ಯಾಹ್ನದ ಭೋಜನಕ್ಕೆ ರಾಸಾಯನಿಕ ರಹಿತ ಆಹಾರಗಳಾದ ತಮ್ಮ ಹಿತ್ತಿಲಲ್ಲೇ ಬೆಳೆದ ಪುನರ್ಪುಳಿ ಸಾರು, ಮುಂಡಿ ಹಾಗೂ ಬಾಳೆ ಕೂಂಬೆ ಪಲ್ಯ, ಬ್ರಾಹ್ಮಿ (ಉರಗೆ) ತಂಬುಳಿ, ಸಾಂಬ್ರಾಣಿ ಚಟ್ನಿ, ಕೆಸುವಿನ ದಂಟಿನ ಗೊಜ್ಜು, ಉಪ್ಪಿನಲ್ಲಿ ಹಾಕಿರಿಸಿದ ಮಾವಿನಕಾಯಿ ಮೆಣಸುಕಾಯಿ, ಕೇನೆ ಮೇಲೋಗರ, ದೇಶೀ ಗೋವಿನ ಹಾಲಿನ ಹಾಲು ಪಾಯಸ, ಮಾವಿನಕಾಯಿ ಉಪ್ಪಿನಕಾಯಿ ಮುಂತಾದುವುಗಳಿಂದಲೇ ತಯಾರಾದ ಪದಾರ್ಥಗಳನ್ನು ಮಾಡಿದ್ದೇವೆ. ಬಾಯಾರಿಕೆ ವ್ಯವಸ್ಥೆಗೆ ಪುನರ್ಪುಳಿ ಸರಬತ್ತು ಮತ್ತು ಶಂಖಪುಷ್ಪ ಹೂವಿನ ಸರಬತ್ತು ತಯಾರಿಸಿದ್ದೇವೆ. ಪುನರ್ಪುಳಿ ಜೀರ್ಣ ಶಕ್ತಿ ಹೆಚ್ಚಿಸುತ್ತದೆ, ಬಾಳೆಕೂಂಬೆ – ಕೆಸುವಿನಲ್ಲಿ ನಾರಿನಂಶ ಸಾಕಷ್ಟಿದೆ, ಉರಗೆ ಬುದ್ಧಿಶಕ್ತಿ ವರ್ಧಿಸುತ್ತದೆ, ಶಂಖಪುಷ್ಪ ಮಹಿಳೆಯರ ಆರೋಗ್ಯ ಸಮಸ್ಯೆ ನಿವಾರಿಸುವಲ್ಲಿ ಸಹಕಾರಿಯಾಗಿದೆ ಎಂಬುದಾಗಿ ತಿಳಿಸಿದರು.

RELATED ARTICLES  ಇಂದು ಲೈಪ್ ಲೈನ್ ಎಕ್ಸ್‌ಪ್ರೆಸ್‌ ನಲ್ಲಿ ಕಿವಿ ತಪಾಸಣೆಗೆ ಜನಸಂದಣಿ

ಆರೋಗ್ಯ ಸಂರಕ್ಷಣೆಯ ಕುರಿತು ಡಾ| ಶ್ರೀಮತಿ ಮಾಲತಿ ಪ್ರಕಾಶ ಮಾತನಾಡುತ್ತಾ ನಮ್ಮ ಆರೋಗ್ಯ ನಾವು ಸೇವಿಸುವ ಆಹಾರದೊಳಗೇ ಇದೆ.ದೇಶೀ ಹಸುವಿನ ಹಾಲು,ಮಜ್ಜಿಗೆ,ತುಪ್ಪಗಳು ಸರ್ವೋತ್ಕೃಷ್ಟ.ನಮ್ಮ ಊಟದ ಮೊದಲ ತುತ್ತಿಗೆ ಒಂದು ಚಮಚ ತುಪ್ಪ ಸೇರಿದರೆ; ಕೆಲವಾರು ವಿಷಯುಕ್ತವಾದುದನ್ನೂ ಜೀರ್ಣಿಸುವ ಶಕ್ತಿ ದೇಶೀ ದನದ ತುಪ್ಪಕ್ಕೆ ಇದೆ.
ಇದು ನಮ್ಮ ಆರೋಗ್ಯದ ರಕ್ಷಕನಾದರೆ; ವಿದೇಶೀ ದನದ ಹಾಲು ಆರೋಗ್ಯ ಭಕ್ಷಕ. ಹಾಗೆಯೇ ವಿಷವುಣಿಸಿ ಬೆಳೆಸುವ ಹಣ್ಣು, ತರಕಾರಿಗಳು. ಕೆಡದಂತೆ ವಿಷ ಸಿಂಪಡಿಸಿ ಶೇಖರಿಸಿಡುವ ಧಾನ್ಯಗಳು. ಪೇಟೆ- ಪಟ್ಟಣಗಳಲ್ಲಿ ಸಿಗುವ ಬಣ್ಣದ ತಂಪು ಪಾನೀಯಗಳನ್ನು ಸೇವಿಸದಂತೆ ಎಚ್ಚರವಹಿಸಿ, ಆ ಬಗ್ಗೆ ಮಕ್ಕಳಿಗೆ ತಿಳಿಹೇಳಿ.
ಇಂದಿನ ಬಹುತೇಕ ಮಾರಕ ರೋಗಗಳಿಗೂ ಇವೇ ಕಾರಣರು. ಬಿಳಿ ವಿಷಗಳಾದ ಸಕ್ಕರೆ ಹಾಗೂ ಮೈದಾಗಳು ನಮ್ಮ ಆರೋಗ್ಯವನ್ನು ಹದಗೆಡಿಸುವ ಮೂಲಗಳು.
ಕೆಲವು ರೋಗಗಳನ್ನು ಆಹ್ವಾನಿಸುವ ಆಗಂತುಕರು.
ಬೇಕರಿಯ ಎಲ್ಲಾ ತಿಂಡಿಗಳಲ್ಲೂ ಮೈದಾ ಹಾಗೂ ಸಕ್ಕರೆ ಇದ್ದೇ ಇದೆ.
ಇವುಗಳೆರಡೂ ಕ್ರಮೇಣ ನಮ್ಮನ್ನು ರೋಗಿಗಳನ್ನಾಗಿ ಮಾಡುವ ರಾಕ್ಷಸರು.
ಆದಷ್ಟು ನಿಮ್ಮ ನೆಲದಲ್ಲಿ ಸಾವಯವ ತರಕಾರಿಗಳನ್ನು ಬೆಳೆಸಿ .
ಈ ರೀತಿಯಿಂದ ಮಕ್ಕಳಿಗೆ ವಿಷ ಮುಕ್ತ ಆಹಾರ ರೀತಿಯಲ್ಲಿ ಬೆಳೆಸಿ ತಿಳಿಹೇಳಬೇಕೆಂದರು. ಹಾಗೆಯೇ ಆದಷ್ಟೂ ಜೀನಸು ಹಾಲು, ಮಜ್ಜಿಗೆಗೆ ಪ್ಲಾಸ್ಟಿಕ್ ಬಳಸಬೇಡಿ.ಉಪ್ಪು,ಹುಳಿ ಮಿಶ್ರಿತ ಪದಾರ್ಥಗಳನ್ನು ವರ್ಜಿಸಿ, ಉಪ್ಪಿನಕಾಯಿ, ಹುಳಿ ಇತ್ಯಾದಿಗಳನ್ನು ಭರಣಿ, ಕುಪ್ಪಿಗಳಲ್ಲಿ ತುಂಬಿಡಿ ಎಂಬುದಾಗಿ ಕಿವಿಮಾತು ಹೇಳಿದರು.

RELATED ARTICLES  ಅಗ್ನಿ ದುರಂತದ ಸ್ಥಳಕ್ಕೆ ಭೇಟಿ ನೊಂದವರಿಗೆ ಸಾಂತ್ವನ ಹೇಳಿದ ನಾಗರಾಜ ನಾಯ್ಕ ತೊರ್ಕೆ

ಶಂಖನಾದ ಗುರುವಂದನೆಯೊಂದಿಗೆ ಆರಂಭವಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಲಯ ಅಧ್ಯಕ್ಷರಾದ ಶ್ರೀಯುತ ಅಮ್ಮಂಕಲ್ಲು ರಾಮಭಟ್ಟರು ವಹಿಸಿದ್ದರು. ಅವರು ಮಾತನಾಡುತ್ತಾ ಗೋ ಸಾಕಾಣಿಕೆ ವಿರಳವಾಗಿರುವ ಈ ಸಂದರ್ಭದಲ್ಲಿ ಪತ್ನಿ ಮಕ್ಕಳು ಹಾಗೂ ಸೊಸೆಯಂದಿರ ಅಪೇಕ್ಷೆ ಶ್ರೀಗುರುಗಳ ದೇಶೀ ಗೋಸಂರಕ್ಷಣಾ ಕಾರ್ಯದಿಂದ ಪ್ರೇರಣೆಗೊಂಡು ಇವರು ಕೈಗೊಂಡ ಕಾರ್ಯ ಬಹಳ ಉತ್ತಮವಾಗಿದೆ ಎಂದು ಅಭಿಪ್ರಾಯಪಟ್ಟರು. ಮನೆಯವರ ಪರವಾಗಿ ಶ್ರೀಯುತ ಸುಬ್ರಹ್ಮಣ್ಯ ಭಟ್ ಇವರು ಗೋಸಂಜೀವಿನಿಗೆ ರೂ 5005/- ನ್ನು ವಲಯ ಅಧ್ಯಕ್ಷರಲ್ಲಿ, ವಿದ್ಯಾ ಸಹಾಯ ನಿಧಿಗೆ ರೂ 2005/- ನ್ನು ಮುಳ್ಳೇರಿಯಾ ಮಂಡಲ ವಿದ್ಯಾರ್ಥಿವಾಹಿನಿಯ ಪ್ರಧಾನರಲ್ಲಿ ಸಮರ್ಪಣೆ ಮಾಡಿದರು. ಮಂಡಲ ವಿದ್ಯಾರ್ಥಿವಾಹಿನಿ ಪ್ರಧಾನ ಶ್ರೀಯುತ ಕೇಶವ ಪ್ರಸಾದ ಎಡಕ್ಕಾನ, ಕುಂಬಳೆ ವಲಯ ಮಾತೃ ಪ್ರಧಾನೆ ಶ್ರೀಮತಿ ಶಿವಕುಮಾರಿ, ಕುಂಬಳೆ ಉಲ್ಲೇಖ ಪ್ರಧಾನೆ ಶ್ರೀಮತಿ ವಿಜಯಾ ಸುಬ್ರಹ್ಮಣ್ಯ, ವಲಯದ ಗುರಿಕ್ಕಾರರು, ಪದಾಧಿಕಾರಿಗಳು ಹಾಗೂ ಬಂಧುಬಳಗದವರು ಉಪಸ್ಥಿತರಿದ್ದರು. ವಲಯ ಮಾತೃಪ್ರಧಾನೆ ಶ್ರೀಮತಿ ಕಾವೇರಿಯಮ್ಮ ಧನ್ಯವಾದವಿತ್ತರು. ರಾಮತಾರಕ ಜಪ ಶಾಂತಿಮಂತ್ರ ಶಂಖನಾದ ಧ್ವಜಾವತರಣದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.