ಅದಾಗಲೇ ಕರ್ಕಿಯ ಸರಕಾರಿ ಪ್ರಾಥಮಿಕ ಹೆಣ್ಣುಮಕ್ಕಳ ಶಾಲೆಯಲ್ಲಿ 7ನೇ ತರಗತಿ ಪಾಸು ಮಾಡಿ ತುಂಗಮ್ಮ ಹೇಳುವಂತೆ ಹೈಸ್ಕೂಲ್ ಮೆಟ್ಲುಏರಿದ್ದೆನು.ಕನ್ನಡ ಶಾಲೆಯಿಂದ ಇಂಗ್ಲೀಷ್ ಶಾಲೆಗೆ ಪಾದಾರ್ಪಣ ಎಂಬುದು ಹೆಮ್ಮೆ.8 ನೆ ಕ್ಲಾಸಿಗೆ ಕಾಲಿಡುತ್ತಿದ್ದಂತೆ ಡೆಸ್ಕು ಬೆಂಚು ಆಕರ್ಷಣೆ.ಶಾಲೆಯಲ್ಲಿ K.M Hegde ಮಾಸ್ತರು ಮುಖ್ಯಾದ್ಯಾಪಕರು.ನನಗೆ ಅವರು ಗಣಿತ ಕಲಿಸುತ್ತಿದ್ದರು.

ಒಂದು ದಿನ ಪಾಠ ಮಾಡಿದ ನಮ್ಮ ಸರ್ ನನ್ನ ವಿದ್ಯಾರ್ಥಿಯ ಮಕ್ಕಳು ಇಲ್ಲಿ ಯಾರಿದ್ದಾರೆ ? ಎಂದರು.ನಾನು ನಿಂತು ನನ್ನ ಅಪ್ಪನ ಹೆಸರು ಹೇಳಿದೆ.

ನಾನು ಗಣಿತದಲ್ಲಿ ಹಿಂದೆ.ಅದರೂ ಸರ್ ಹೇಳಿಕೊಟ್ಟಿದ್ದ ಕಲಿತು ಈಗ ಇಷ್ಟರ ಮಟ್ಟಿಗೆ ಬೆಳೆದಿದ್ದೇನೆ.ಇನ್ನು ಪೈ ಮಾಸ್ತರು ಡ್ರಾಯಿಂಗ್

ಶಿಕ್ಷಕರು.ಅದರೆ ಅವರು ನಮ್ಮೊಟ್ಟಿಗೆ ಬಹಳ ಕಾಲ ಇರಲಿಲ್ಲ.ಅವರ ನಂತರ ಎಂಡಿ ಶೇಟ್ ಸರ್ ನಮಗೆ ಹೊಲಿಗೆ,ಡ್ರಾಯಿಂಗ್ ಕಲಿಸುತ್ತಿದ್ದರು.ಅವರು ಹೊಸದಾಗಿ ಬಂದಾಗ ನಾವು ಅದೆಷ್ಟು ಸಂಭ್ರಮ ಪಟ್ಟಿದ್ದೆವು.ಸರ್ ಹತ್ರ ಮಾತನಾಡುವದೇ ನಮಗೆ ಹೆಮ್ಮೆ ಎನಿಸುತ್ತಿತ್ತು.ಅವರು ತೀರಿಕೊಂಡ ವಿಷಯ ಕೇಳಿ ತುಂಬಾ ಬೇಸರ ವಾಯಿತು.ನನ್ನ ಮಾಸ್ತರು ನನಗೆ ಬಿ ಎಡ್ ಮಾಡುವಾಗ ಕಲಿಕೊಪಕರಣ ಮಾಡಿಕೊಟ್ಟ ಸಂದರ್ಭ ಅವರು‌ಕೊಟ್ಟ ಪ್ರೀತಿಯೊಂದಿಗೆ ಮರೆಯಲಾಗದು. ಚೌತಿಯಲ್ಲಿ ಗಣೇಶನನ್ನು ನೋಡಲು ಅವರ ಮನೆಗೆ ಹೋಗುತ್ತಿದ್ದ ದಿನಗಳ ನೆನಪು ಮಾಸಿಲ್ಲ.ಇನ್ನು ಕಾಳನ್ ಮಾಸ್ತರು ನನಗೆ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದರು.ಅವರು ನಾನು ಹತ್ತನೆ ತರಗತಿಯಲ್ಲಿ ಇರುವಾಗ ನಿವ್ರತ್ತರಾದರು.ಅವರೂ ನನಗೆ ಜಾಣೆ ಹೇಳೆ ಹೇಳಿದ್ದನ್ನು ಮರೆಯಲಿಲ್ಲ.ನಮಗೆ ಗಮಯನ ಕತೆ ಪಾಠ ಕಲಿಸಿದ್ದನ್ನೂ ಮರೆತಿಲ್ಲ.ಸರ್ ಪಂಚೆಯುಟ್ಟು ಬಿಳಿ ಅಂಗಿ ಹಾಕುತ್ತಿದ್ದರು.ಮೇಜಿನ ಮೇಲೆ ಕುಳಿತು ಪಾಠ ಅರಂಭಿಸಿದರೆ ಮುಗಿಯುತ್ತಲೇ ಇರಲಿಲ್ಲ.ಬಕಾಪ್ ಹೇಳಿ ಅವರು ಅಟಕ್ಕೆ ಮಕ್ಕಳನ್ನು ಉತ್ತೇಜಿಸುತ್ತಿದ್ದರು.

RELATED ARTICLES  ಶ್ವಾಸ ಪ್ರಕ್ರಿಯೆಯ ಬಗ್ಗೆ ಶ್ರೀಧರರು ಪತ್ರದ ಮೂಲಕ ಹೇಳಿದ್ದೇನು ಗೊತ್ತಾ?

ಇನ್ನು ಜಿಎಂ ಹೆಗಡೆ ಮಾಸ್ತರು ನಗ್ತಾ ಮೂಗನ್ನು ತಿಕ್ಕುತ್ತ ತಮಾಷೆಯಾಗಿದ್ದರು.ಅವರದು ಜೀವಶಾಸ್ತ್ರ ಪಾಠ.ನಾಟಕ ಹಾಡು ಅಭಿನಯ ಇವುಗಳಲ್ಲಿ ಕೂಡ ಅಸಕ್ತರು.ಅದರೆ ಬಹುಬೇಗ ಅವರು ಎಲ್ಲರನ್ನೂ ಅಗಲಿದರು.ಇನ್ನು ಅರ್ ಎಂ ಹೆಗಡೆ ಮಾಸ್ತರು ಶಿಸ್ತಿನಿಂದ ಇಂಗ್ಲೀಷ ಕಲಿಸಿದರು.ನನಗೆ ಕೆ ಎಸ್ ಭಟ್ಟ ಹೇಳಿ ಅವರು ಕರೆಯುತ್ತಿದ್ದರು.ಅತ್ಮೀಯತೆಯ ಬಾವ ಅವರದು .ಅವರೂ ಈಗ ಇಲ್ಲ.ಅರ್ ಎಸ್ ಹೆಗಡೆ ಮಾಸ್ತರರು ರಸಾಯನ ಶಾಸ್ತ್ರ ಭೌತಶಾಸ್ತ್ರ ಪ್ರಯೋಗ ಮಾಡುತ್ತಿದ್ದರು.ಅವರಿಗೆ ಕೋಪ ಬಂದಾಗ ನಿನ್ನನ್ನು ಕಿಟಕಿಯಿಂದ ಅಚೆ ತೂರಿಬಿಡುತ್ತೆನೆ.ಎನ್ನುತ್ತಿದ್ದರು.
ಕಿವಿಗೆಂಡೆ ಹಿಡಿದು ನೇತಹಾಕ್ತೆ ಹೀಗೆ ನಮಗೆ ಅವರ ಮೇಲೆ ಭಯವಿತ್ತು.ಗುಂಡಗಾಗಿ ಇದ್ದ ಅವರು ಪಾಠವನ್ನೂ ಚೆನ್ನಾಗಿ ಮಾಡುತ್ತಿದ್ದರು.ಅವರೂ ಕೂಡ ನಮ್ಮನ್ನು ಅಗಲಿದ್ದಾರೆ.ಪಿ ಪಿ ಸೂರಿ ಅಕ್ಕೋರು ಕನ್ನಡ ಸಮಾಜ ಪರಿಚಯ ಕಲಿಸುತ್ತಿದ್ದರು.ಅವರಿಗೆ ಕೆಲವು ಸಲ ಮಕ್ಕಳ ಕಿರಿಕಿರಿ ಸಹಿಸಲಾಗುತ್ತಿರಲಿಲ್ಲ ಅತ್ತು ಬಿಡುತ್ತಿದ್ದರು.ಅದರೆ ಅವರು ಪಾಠ ಮಾಡುವ ರೀತಿ ಮಕ್ಕಳ ಮೇಲೆ ಅವರ ಪ್ರೀತಿ ಬಹಳ ಅಪ್ಯಾಯಮಾನವಾಗಿತ್ತು.ಅವರೂ ನಮ್ಮಿಂದ ದೂರವಾಗಿದ್ದಾರೆ ಎಂಬ ಸುದ್ದಿ ಕೇಳಿ ಕರುಳು ಚುರಕ್ ಎಂದಿತು. ಇನ್ನು ನನ್ನ ಮತ್ತೊಬ್ಬ ಶಿಕ್ಷಕಿ ಶಾಂತಿ ನಾಯಕ. ಸಾಹಿತಿಯಾಗಿ.ಜಾನಪದ ಕ್ಷೇತ್ರದಲ್ಲಿ ತಮ್ಮನ್ನು ಗುರುತಿಸಿಕೊಂಡು ನಿವ್ರತ್ತ ಬದುಕ ನಡೆಸುತ್ತಿದ್ದಾರೆ.ಅವರು ನನಗೆ ನಾನ್ ಡಿಟೇಲ್ ಪಾಠ ಮಾಡಿದ್ದು ನೆನಪು.ಕನ್ನಡ ಶಾಂತಲೆ ಚಂದ್ರಲೆ ಶಕುಂತಲೆ ಈ ಮೂರು ಪಾಠ ಮಾಡಿದ ನೆನಪು. ದೇವರು ಅವರಿಗೆ ಸುಖ ಶಾಂತಿ ನೆಮ್ಮದಿ ನೀಡಲಿ ಎಂದು ಪ್ರಾರ್ಥಿಸುವೆನು.

RELATED ARTICLES  ಅಲೆಗಳ ಅದ್ವೈತ

ಇನ್ನೂ ಸರಸೂ ಬಾಯಿ.ಗಜಾನನ.ಸುರೇಶ ಇವರುಗಳಿದ್ದರು.ಸರಸೂ ಬಾಯಿ ಪ್ರಯೋಗಾಲಯದ ಸಹಾಯಕಿ ಗಜಾನನ ಸುರೇಶ ಸಿಪಾಯಿಗಳು.ಅ ವಯಸ್ಸಿನಲ್ಲಿ ನಮಗೆ ಅವರೆಲ್ಲರೂ ಅತೀ ಪ್ರಿಯರಾಗಿದ್ದರು.ಅವರು ಅಂದು ಮಾಡುತ್ತಿದ್ದ ಕೆಲಸಗಳುಅವರ ಮಾತುಕತೆ ಈಗಲೂ ಕಣ್ಣಲ್ಲಿ ಕಿವಿಯಲ್ಲಿ ಇವೆ.

ಊರಿಗೆ ಹೋದಾಗಲೆಲ್ಲ ನನ್ನ ಶಾಲೆಯನ್ನು ಕಣ್ತುಂಬಿಕೊಳ್ಳುವ ಅಸೆ.ಅದರೆ ಶಾಲೆಯ ಒಳಗೆ ಹೋಗುವ ಧೈರ್ಯ ಮಾಡಲಿಲ್ಲ.ಇಂದು ನಾನು ಕಲಿತ ಪರಿಸರ,ನನಗೆ ಕಲಿಸಿದ ಶಿಕ್ಷಕರು ನಾನಿರುವಾಗಿನ ಸಿಪಾಯಿಗಳು ಯಾರೂ ಇಲ್ಲ.ಎಲ್ಲ ಹೊಸಬರು.ಅದರೆ ನನ್ನ ಶಾಲೆ ಎಂದಿನಂತೆ ತಲೆ ಎತ್ತಿ ನಿಂತಿದೆ.ಮಕ್ಕಳಿಗೆ ಅಶ್ರಯ ನೀಡಿದೆ.ನನಗೆ ಅಭಿಮಾನ ಉಕ್ಕಿ ಹರಿದು ತುಳುಕಿ ಭಾವನೆಯ ನೆಗಸಿಗೆ ಅಕ್ಷರ ಜೋಡಿಸಿದ್ದೇನೆ.ನನ್ನ ಶಾಲೆಯಲ್ಲಿ ಕಲಿತ ಹಲವು ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೇರಿ ಶಾಲೆಯ ಅಭ್ಯುದಯವನ್ನು ಬಯಸಿ ಶ್ರಮಿಸಿದ್ದಾರೆ.ಹಳೆ ವಿದ್ಯಾರ್ಥಿಯಾಗಿ ನಾನು ಶಾಲೆಯ ಕಾರ್ಯ ಚಟುವಟಿಕೆಗಳನ್ನು ಅಭಿನಂದಿಸಿ ಪ್ರಗತಿಯ ಗುರಿಯೆಡೆಗೆ ಸಾಗುತ್ತಿರುವ ವಿಷಯ ಕೇಳಿ ಸಂತಸ ಪಡುತ್ತೇನೆ.ಅಂದಿನ ಹಿಗ್ಗು ಅಂದಿನ ಸಂಭ್ರಮದ ದಿನಗಳು ನನ್ನ ಶಾಲೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಂತೆ ನನ್ನನ್ನು ಇಂದು ಪ್ರೇರೆಪಿಸಿದೆ.ಇದು ಊರ ಶಾಲೆ,ಕರ್ಕಿ ಹೈಸ್ಕೂಲ್ ಮುಂದೆಯೂ ಶಾಲೆಯ ಹಿರಿಮೆ ಕುಗ್ಗದಿರಲಿ.ಶಿಕ್ಷಣದ ಗುರಿಸಾಧನೆಯಲ್ಲಿ ಗುರುತರವಾದ ಹೆಸರನ್ನು ಸದಾ ಗಳಿಸಿಕೊಂಡಿರಲೆಂದು ಹಾರೈಸುತ್ತೇನೆ.

ದೇಹವಳಿದರೂ ಮನಸಿನಲ್ಲಿ ಸ್ಥಿರವಾಗಿ ನಿಂತು ಗರಿಕೆಯ ಬೇರಂತೆ ಶಿಷ್ಯ ಸಮೂಹಗಳ ಹ್ರದಯದಲ್ಲಿ ಚಿಗುರು ನೆಲೆಯಾದ ಅಳಿದ ನನ್ನ ಗುರುವರ್ಯರ ಅತ್ಮಕ್ಕೆ ಶಾಂತಿಕೋರಿ ಅವರ ಅಶೀರ್ವಾದ ಸದಾ ನನ್ನ ಮೇಲೆ ಇರುವದೆಂಬ ನಂಬಿಕೆಯಲ್ಲಿ ಪೂರ್ಣವಿರಾಮ ಕೊಡುತ್ತೇನೆ.

ಕಲ್ಪನಾಅರುಣ
ಶಿಕ್ಷಕಿ ಬರೆಹಗಾರ್ತಿ