ಅಕ್ಷರರೂಪ:ಶ್ರೀಮತಿ ಪ್ರಭಾ ಮತ್ತು ವೆಂಕಟರಮಣ ಭಟ್ಟ , ಪುಣಾ.
ತಮ್ಮ ಈ ಕಾಲಘಟ್ಟದ ದಿನಗಳಲ್ಲಿ ಅಲ್ಲಿ-ಇಲ್ಲಿ ಎನ್ನುತ್ತ ತಿರುಗುವದಕ್ಕಿಂತ ‘ಒಂದೇ ಕಡೆ ಇರು ಏಕಾಗ್ರ ಚಿತ್ತದಿಂದಿರು’ ಎಂಬ ತುಕೋಬಾರ ಉಪದೇಶವೇ ಸರಿಯೆನಿಸುತ್ತದೆ! ….
‘ಎಲ್ಲಿಗೆ ಹೋಗಿ ಏನು ಸಂಪಾದಿಸುವದಿದೆ? ಸ್ವಸ್ಥಾಗಿ ಒಂದೇಕಡೆ ಇದ್ದರಾಯಿತು.’
(ಇಸವಿ ಸನ ೧೯೪೬-೪೭ರ ಸುಮಾರಿಗೆ ಶ್ರೀ ಬಳವಂತರಾವ ವೈದ್ಯರಿಗೆ ಬರೆದ ಪತ್ರದ ಮುಂದುವರಿದ ಕೊನೆಯ ಭಾಗ)
ನಿಮಗೀಗ ವಯೋಮಾನವಾಗಿದೆ.
‘ಏಕಾಂತೇ ಸುಖಮಾಸ್ಯತಾಂ ಪರತರೇ ಚೇತಃ ಸಮಾಧೀಯತಾಮ್|’
ಇದೀಗ ನಿಮ್ಮ ಪರಿಸ್ಥಿತಿ,
ಜಗತ್ತಿನಲ್ಲಿ ನೋಡುವಾಗ ಚರ್ಮಚಕ್ಷು ಲಕ್ಷಿಸುವದಿಲ್ಲ; ಜಗತ್ತಿನಲ್ಲಿ ನೋಡುವಾಗ ಜ್ಞಾನಚಕ್ಷು ರಕ್ಷಿಸುವದಿಲ್ಲ|| ಜಗತ್ತಿನಲ್ಲಿ ನೋಡುವಾಗ ನೋಡುವಿಕೆಯಷ್ಟೇ ಇದೆ| ಮನಸ್ಸಿನಲ್ಲೇ ಸಂತನನ್ನು ಅನವರತ ಹುಡುಕಿ ನೋಡಬೇಕು||
ಈ ಶ್ಲೋಕಾಂತದಲ್ಲಿ ಶ್ರೀಪೂಜ್ಯಚರಣ ಸದ್ಗುರು ಸಮರ್ಥರು ಸಂತ ಈ ಶಬ್ದದ ಅರ್ಥ ಮಾಡಿದ್ದು ನೋಡಿ ತಿಳಿದಾಗ ಸಂತಸಮಾಗಮದ ಬಗ್ಗೆ ಅಲ್ಲಿ ಇಲ್ಲಿ ಹೋಗುವ ಅವಶ್ಯಕತೆ ಅಭ್ಯಾಸ ಇನ್ನೂ ಏಕೆ ಬೇಕು?
‘ಆಕಾಶ ಭಿನ್ನವಾಗಿ ನೋಡಬೇಕು| ಸ್ವರೂಪದಲ್ಲಿ ಸ್ವರೂಪವೇ ಆಗಬೇಕು| ವಸ್ತುವಿನ ಸ್ವಭಾವ ನೋಡಬೇಕು| ಹೀಗಿರಬೇಕು||’
‘ವಸ್ತು ಒಂದು ನಾವು ಒಂದು| ಈ ರೀತಿ ಭಿನ್ನತೆಯಿದೆ| ಆದರೂ ಅನುಭವದ ವಿವೇಕ| ಅದು ನಮಗೇ ನಾವೇ ಹೇಳಿಕೊಳ್ಳಬೇಕಾದುದು||
‘ಅವೇದ್ಯತ್ವೇ ಸತ್ಯಪರೋಕ್ಷಃ’
‘ಯಾವುದನ್ನು ಅನುಭವದಿಂದ ತಿಳಿದುಕೊಳ್ಳಬೇಕೋ| ಸೃಷ್ಟಿಯ ಒಳಗಲ್ಲ ಹೊರಗೆ| ನಮ್ಮದೇ ಸ್ವಾನುಭವದಿಂದ| ಅವರೇ ಬ್ರಹ್ಮನನ್ನು ಪಡೆವರು||’
‘ನಮ್ಮದೇ ಅನುಭವದಿಂದ| ಜ್ಞಾನ ಜಾಗೃತವಾಗಬೇಕು| ಆಗ ಮಾಯೆಯ ಸ್ವಭಾವ| ತಿಳಿಯಹತ್ತುತ್ತದೆ||’
‘ದೃಗ ಬ್ರಹ್ಮ ದೃಶ್ಯ ಮಾಯೇತಿ|’
‘ಸಕಲ ರೂಪ ಮತ್ತು ನಾಮ| ಅವೆಲ್ಲವೂ ಅರಿವಿಲ್ಲದವರ ಬ್ರಮೆ|
ನಾಮರೂಪದ ಗೂಢ| ಅನುಭವದಿಂದರಿಯಬೇಕು||’
‘ಜಗಜ್ಜೀವಾದಿರೂಪೇನ ಪಶ್ಯನ್ನಪಿ ಪರಾತ್ಮವಿತ್| ನ ತತ್ ಪಶ್ಯತಿ ಚಿದ್ರೂಪಂ ಬ್ರಹ್ಮವಸ್ತ್ವೇವ ಪಶ್ಯತಿ||’
‘ಅಸ್ತಿ ಭಾತಿ ಪ್ರಿಯಂ ರೂಪಂ ನಾಮಚೇದ್ಯಶಪಂಚಕಮ್| ಆದ್ಯಂ ತ್ರಯಂ ಬ್ರಹ್ಮರೂಪಂ ಮಾಯಾರೂಪಂ ತಮೋ ದ್ವಯಮ್||’
‘ಮಹಾದ್ವಾರ ದಾಟಬೇಕು| ನಂತರ ದೇವದರ್ಶನ ಪಡೆಯಬೇಕು| ಅದೇ ರೀತಿ ಈ ದೃಶ್ಯಪ್ರಪಂಚ ಬಿಡಬೇಕು| ಅವರೇ ಬುದ್ಧಿವಂತರು||’
‘ದೃಷ್ಟಾದೃಶ್ಯವಶಾದ್ಬದ್ಧೋ ದೃಶ್ಯಭಾವೇ ವಿಮುಚ್ಯತೇ’
‘ಈಶಾವಾಸ್ಯಮಿದಂ ಸರ್ವಮ್’
‘ಯತ್ರಾದ್ವೈತಮಿವಭವತಿ ತತ್ರ ಕೇನ ಕಿಂ ಪಶ್ಯೇತ್?’ ‘ಕೇನ ಕಿಂ ವಿಜಾನೀಯಾತ್?’
‘ಯತ್ರ ನಾನ್ಯತ್ಪಶ್ಯಂತಿ ನಾನ್ಯದ್ವಿಜಾನಾತಿ ಸ ಭೂಮಾ| ಭೂಮೇವ ಸುಖಮ್|’
‘ವಿಜ್ಞಯೋಕ್ಷರ ತನ್ಮಾತ್ರಂ ಜೀವಿತಂಚಾಪಿ ಚಂಚಲಮ್| ವಿಹಾಯ ಶಾಸ್ತ್ರಜಾಲಾನಿ ಯೇತ್ಸತ್ಯಂ ತದುಪಾಸ್ಯತಾಮ್’
‘ನಿರ್ಗುಣೀ ಜೇ ಅನನ್ಯಥಾ| ತೇಚಿ ಮುಖ್ಯ ಸಾಯೋಜ್ಯತಾ||’
‘ನಮ್ಮಲ್ಲೇ ಹೇಳಿಕೊಳ್ಳಬೇಕು| ನಾವು ವಿವೇಕದಲ್ಲಿ ಪಳಗಬೇಕು| ಆತ್ಮನಿವೇದನ ಅರಿಯಬೇಕು| ಅವನ ನಾಮ||’
‘ಸ್ವರೂಪಾವಸ್ಥಿತಿರ್ಮುಕ್ತಿಸ್ತದ್ಭ್ರಂಶಹಂತ್ವವೇದನಮ್’
ಏಕೆಂದರೆ, ‘ಅಹಂ ಎಂತು ಸ್ಫುರಿಸಿತು| ಅವನ ಮಾಯೆ||’
‘ಎಲ್ಲಿ ‘ನಾನು’ ತೊಡರಿದೆಯೋ| ಅವರ ಅನುಭವದ ಚಿನ್ಹೆ||’
‘ನಾನು’ ಈ ನಮ್ಮ ಸ್ಮೃತಿ ‘ನಮ್ಮ’ಲ್ಲಿ ಲೀನವಾಗುವದು ಮತ್ತು ನಂತರ ‘ನಾವೇ’ ಉಳಿದುಕೊಳ್ಳುವದು. ಈ ತಮ್ಮ ಅದ್ವಿತೀಯ ಸ್ವರೂಪದಲ್ಲಿ ನಿರ್ವಿಕಲ್ಪ ಜ್ಞಾನಾನಂದ ಮಾತ್ರ ‘ಅವನು’.
ತಮ್ಮ ಪತ್ರದ ಈ ವಾಕ್ಯ ‘ಪತ್ರದ ಉತ್ತರ ಬಂದರೆ ಪತ್ರದರ್ಶನವಾದರೂ ಆಗುವದು’ ಓದುತ್ತಿದ್ದಾಗ, ‘ನೀವು ನಾವು ಒಂದೇ ಸ್ಥಳದಲ್ಲಿ ಅಖಂಡವಾಗಿದ್ದೇವೆ| ವ್ಯರ್ಥ ಮೃಗಜಲದಲ್ಲಿ ಮುಳುಗಬಾರದು’
ತಾವು ಬರೆದಿದ್ದೀರಿ ‘೧೫-೨೦ ದಿನ ಇಲ್ಲಿದ್ದು ನಂತರ ಮುಂದೆ ಹೋಗುವ ವಿಚಾರವಿದೆ’
ಅಹೋ! ಆತ್ಮಾನುಭವಸಂಧಾನಕ್ಕೆ ಅನುಕೂಲ ಮಾಡಿಕೊಂಡು, ತಮ್ಮ ಈ ಕಾಲಘಟ್ಟದ ದಿನಗಳಲ್ಲಿ ಅಲ್ಲಿ-ಇಲ್ಲಿ ಎನ್ನುತ್ತ ತಿರುಗುವದಕ್ಕಿಂತ ‘ಒಂದೇ ಕಡೆ ಇರು ಏಕಾಗ್ರ ಚಿತ್ತದಿಂದಿರು’ ಎಂಬ ತುಕೋಬಾರ ಉಪದೇಶವೇ ಸರಿಯೆನಿಸುತ್ತದೆ.
‘ಎಲ್ಲಿಗೆ ಹೋಗಿ ಏನು ಸಂಪಾದಿಸುವದಿದೆ? ಸ್ವಸ್ಥಾಗಿ ಒಂದೇ ಕಡೆ ಇದ್ದರಾಯಿತು.’
‘ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿದ್ದುಃಖಮಾಪ್ನುಯಾತ್’
ಶ್ರೀಧರ
ಟಿಪ್ಪಣಿ: ಈ ಪತ್ರ ಸಕಲ ಶಾಸ್ತ್ರಗಳನ್ನು ಓದಿ ಪಾರಂಗತರಾದ ಶ್ರೀ ವೈದ್ಯರಿಗೆ, ಅವರಿಗೆ ಅರ್ಥವಾಗುವ ರೀತಿ, ಅವರೋದಿದ ಶಾಸ್ತ್ರಾಧಾರಾದ ಮೇಲೆಯೇ ಸೂತ್ರರೂಪದಲ್ಲಿ ಬರೆದಿರುವದರಿಂದ ಅನುವಾದಕ್ಕೂ, ಅರ್ಥ ಮಾಡಿಕೊಳ್ಳಲಿಕ್ಕೂ ಕಷ್ಟಕರವೇ ಇದೆ ಎಂದೆನಿಸುತ್ತದೆ.