ಹೌದು ಕಾಂಗ್ರೆಸ್ ತನ್ನ ರಾಜಕೀಯ ಲಾಭಕ್ಕಾಗಿ ಚಿತ್ರನಟರನ್ನು ತನ್ನೆಗೆ ಸೆಳೆಯುವ ಪ್ರಯತ್ನವನ್ನು ಮಾಡುತ್ತಿದೆ.ಇದಕ್ಕೆ ಪೂರಕ ಎಂಬಂತೆ ಕಾಂಗ್ರೆಸ್ ಕನ್ನಡದ ಚಿತ್ರನಟ ದರ್ಶನ್ ಕಾಂಗ್ರೆಸ್ ಸೇರುವುದರ ಕುರಿತು ಗಾಳಿ ಸುದ್ಧಿ ಕೇಳಿ ಬರುತ್ತಿದೆ.ದರ್ಶನ್ ಅವರನ್ನು ರಾಜಕೀಯವಾಗಿ ತನ್ನ ಬಲೆಗೆ ಬೀಳಿಸಿಕೊಳ್ಳಲು ತಣತಂತ್ರವನ್ನು ರೂಪಿಸುತ್ತಿದೆ.ದರ್ಶನ್ ಅವರ ತಾಯಿ ಕಾಂಗ್ರೆಸ್ ಪಕ್ಷದಲ್ಲಿ ಜವಬ್ಧಾರಿಯುತ ಸ್ಥಾನದಲ್ಲಿರುವುದರಿಂದ ಕಾಂಗ್ರೆಸ್‌ಗೆ ದರ್ಶನ್ ಅವರನ್ನು ತನ್ನೆಡೆಗೆ ಸೆಳೆದುಕೊಳ್ಳು ಕಷ್ಟವಲ್ಲ.ದರ್ಶನ್ ಅವರು ತಮ್ಮ ಪಕ್ಷಕ್ಕೆ ಬಂದರೆ ಅವರ ಅಭಿಮಾನಿಗಳ ಮತವನ್ನು ಕಾಂಗ್ರೆಸ್ ಪಡೆಯಬಹುದು ಎಂಬ ಉದ್ದೇಶದಿಂದ ಅವರನ್ನು ಕಾಂಗ್ರೆಸ್ ತನ್ನೆಡೆಗೆ ಸೆಳೆಯಲು ಹುನ್ನಾರ ನಡೆಸುತ್ತಿದೆ.
ಕಾಂಗ್ರೆಸ್ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನೀಡುವ ಕುರಿತು ಸುದ್ದಿಗಳು ಹರಿದಾಡುತ್ತಿದೆ.
ಅಭಿಮಾನ ಎಂಬುದು ಎಲ್ಲರ ಮೇಲು ಇರುತ್ತದೆ ಅಭಿಮಾನಕ್ಕಿಂತ ಅಭಿವೃದ್ಧಿಯಾದರೆ ಮಾತ್ರ ಜನರು ನೆಮ್ಮದಿಯಿಂದ ಜೀವನ ನಡೆಸಬಹುದು. ಕೇವಲ ಅಭಿಮಾನದಿಂದ ಮತದಾನವನ್ನು ಮಾಡುವುದರ ಮುಂಚೆ ಮತದಾರ ಯೋಚನೆ ಮಾಡಬೇಕಾಗುತ್ತದೆ.ಕೇವಲ ಮೂರು ಗಂಟೆ ನಮ್ಮ ಮನರಂಜನೆ ನೀಡುವವರು ಜನರ ಬಗ್ಗೆ ಎಷ್ಟು ಕಾಳಜಿ ಅಭಿವೃದ್ಧಿಯ ಬಗ್ಗೆ ಎಷ್ಟು ಅರಿತುಕೊಂಡು ಮತದಾರ ಮತನೀಡುವುದು ಮತದಾರನ ಸಮಯಪ್ರಜ್ನೆ ಮತ್ತು ಜಾಣತನ.
ಜನರು ಅಭಿಮಾನವನ್ನು ತೋರಿಸಿ ಆದರೆ ಅಭಿಮಾನಕ್ಕಿಂತ ಅಭಿವೃದ್ಧಿಗಾಗಿ ಹೆಚ್ಚು ಮಹತ್ವ ಕೊಡಿ.ಮೈಸೂರು-ಕೊಡಗಿನ ಜನರು ಅಭಿಮಾನಕ್ಕೆ ಕಟ್ಟುಬೀಳದೆ ಅಭಿವೃದ್ಧಿಯತ್ತ ಗಮನಹರಿಸಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಮ್ಮ ಕ್ಷೇತ್ರದ ಅಭಿಮಾನವನ್ನು ಬಯಸುತ್ತೀರ ಅಥವಾ ಅಭಿಮಾನವನ್ನು ವ್ಯಕ್ತಪಡಿಸುತ್ತೀರ ಎಂದು ಜನತೆ ನಿರ್ಧರಿಸಬೇಕಾಗಿದೆ.

RELATED ARTICLES  ಈ ದಿನ ಗಣೇಶನಿಗೆ ಮೀಸಲು.

ಸಂತೋಷ್ ಪೂಜಾರಿ ಪಾಂಡವರ ಕಲ್ಲು