ಶಿರಸಿ : ತಾಲೂಕಿನಿಂದ ಸಂಪರ್ಕ ಹೊಂದಿರುವ ಸುಗಾವಿ ಮತ್ತು ಇತರ ಹಳ್ಳಿಗಳಲ್ಲಿ ನಿರಂತರ ವಿದ್ಯುತ್ ವ್ಯತ್ಯಯದ ಬಗ್ಗೆ ವರದಿಯಾಗಿದೆ. ವಾರದಲ್ಲಿ ಕನಿಷ್ಠ ೨-೩ ಇಡೀ ರಾತ್ರಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತಿದೆ . ಇದರಿಂದ ರಾತ್ರಿ ಕಳ್ಳತನದ ಭಯ ಉಂಟಾಗಿದೆ ಎಂದು ಸ್ಥಳೀಯರು ತಮ್ಮ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ . ಅಲ್ಲದೇ ಈಗ ಕೊರೊನ ಸೋಂಕು ಎಲ್ಲ ಹಳ್ಳಿಗಳಲ್ಲಿ ಹೆಚ್ಚಾಗಿರುವುದರಿಂದ ಸೋಂಕಿತರು ವಿದ್ಯುತ್ ಇಲ್ಲದೇ ತೊಂದರೆ ಅನುಭವಿಸುವ ಸಾಧ್ಯತೆ ಇದೆ ಎನ್ನುವ ಸುದ್ಧಿ ಕೇಳಿ ಬರುತ್ತಿದೆ. ದಿನಪೂರ್ತಿ ಲೆಕ್ಕವಿಲ್ಲದಷ್ಟು ಸಲ ವಿದ್ಯುತ್ ಸಂಪರ್ಕ ಕಡಿತ ಆಗಿಯೂ ಸಹ ರಾತ್ರಿ ಮತ್ತೆ ಯಾಕೆ ಸಂಪರ್ಕ ಕಡಿತವಾಗುತ್ತದೆ ಎನ್ನುವ ಪ್ರಶ್ನೆಗೆ ಅಲ್ಲಿನ ಸೆಕ್ಷನ್ ಆಫೀಸರ್ ಹಾರಿಕೆಯ ಉತ್ತರ ನೀಡುತ್ತಿದ್ದಾರೆ ಎಂದು ಗಣೇಶ ಹೆಗಡೆ ಸತ್ವಾಧಾರ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ.

ಮಳೆಗಾಲ ಶುರುವಾಗುವ ಮುಂಚಿತವೇ ಈ ಪರಿಸ್ಥಿತಿ ಆದರೆ ಇನ್ನು ಮಳೆಗಾಲದಲ್ಲಿ ಹೇಗೆ ಎಂದು ಸ್ಥಳೀಯರು ಚಿಂತಿತರಾಗಿದ್ದರೆ .
RELATED ARTICLES  ತುರ್ತು ಅಗತ್ಯದ ಸಂದರ್ಭದಲ್ಲಿ ರಕ್ತದಾನ ಮಾಡಿ ಮಾನವೀಯತೆ ಮೆರೆದ ಎಂ.ಜಿ ಭಟ್ಟ