ಹೊನ್ನಾವರ : ವೈದಿಕ ಜ್ಞಾನಸತ್ರದ ಮೂಲಕ ಜ್ಞಾನವೆಂಬ ಬೆಳಕನ್ನು ಹಂಚುವ ಕಾರ್ಯವನ್ನು ಮಾಡುತ್ತಿರುವ
ಹೊನ್ನಾವರದ ವೇದೋಪಾಸನಾ ಟ್ರಸ್ಟ್ ನ ಕಾರ್ಯ ಶ್ಲಾಘನೀಯವಾದದ್ದು. ಸಮಾಜಕ್ಕೆ ಒಳಿತನ್ನು ನೀಡುವ ಈ ಸತ್ಕಾರ್ಯ ಮುಂದುವರಿಯಲಿ ಎಂದು ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿಗಳು ನುಡಿದರು. ಅವರು ವೇದೋಪಾಸನಾ ಟ್ರಸ್ಟ್ (ರಿ) ಹೊನ್ನಾವರ ಇವರ ಆಶ್ರಯದಲ್ಲಿ ಆನ್ ಲೈನ್ ನಲ್ಲಿ ನಡೆದ “ವೈದಿಕ ಜ್ಞಾನ ಸತ್ರ” ದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನನೀಡಿದರು. ಇದೇ ಸಂದರ್ಭದಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಹಾಗೂ ಶಿವ ಗುರುಕುಲಗಳ ಉದ್ದೇಶ ಹಾಗೂ ಕಾರ್ಯ ವ್ಯಾಪ್ತಿಗಳ ಕುರಿತು ವಿವರಿಸಿ ವೈದಿಕರು ಈ ಬಗ್ಗೆ ಹೆಚ್ಚಿನ ಆಸಕ್ತಿವಹಿಸಬೇಕು ಎಂದರು.

RELATED ARTICLES  ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ.

32 ಹಂತಗಳಲ್ಲಿ ಮೂಡಿಬಂದ ವೈದಿಕ ಜ್ಞಾನಸತ್ರದಲ್ಲಿ ನಾಡಿನ ಪ್ರಸಿದ್ಧ ಪಂಡಿತರು, ಉಪನ್ಯಾಸಕರು ಭಾಗವಹಿಸಿ ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು. ನೂರಾರು ಆಸಕ್ತರು ನಿರಂತರವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಗಮನಸೆಳೆಯಿತು. ಸಮಾರೋಪ ಸಮಾರಂಭದಲ್ಲಿ ಜಯಂತ ಭಟ್ಟ ಬೆಂಗಳೂರು ಇವರು ವೇದಘೋಷ ಗೈದರು. ವಿನಾಯಕ ಭಟ್ಟ ಬೆಟ್ಕೂರು ಸ್ವಾಗತಿಸಿದರು. ಉಪನ್ಯಾಸಕ ಗಣೇಶ ಭಟ್ಟ ಪ್ರಾಸ್ತಾವಿಕ ನುಡಿಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು. ಹರೀಶ ಭಟ್ಟ ಮಂಕಿಯವರ ವೈದಿಕ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

RELATED ARTICLES  ಉತ್ತರಕನ್ನಡದ ಪ್ರಮುಖ ಸುದ್ದಿಗಳು ಇಲ್ಲಿದೆ..!