ಅಕ್ಷರ ರೂಪ: ಶ್ರೀಮತಿ ಪ್ರಭಾ ಮತ್ತು ವೆಂಕಟ್ರಮಣ ಭಟ್, ಪುಣೆ

ಪ್ರಾರಂಭದಲ್ಲಿ ಅನೇಕ ವಿಘ್ನಗಳು ಬರುತ್ತವೆ …. ಶ್ರೀಗುರುಗಳ ಸೇವೆ ಬಿಟ್ಟು ಬಿಡಬೇಕು ಎಂದೂ ಅನಿಸುತ್ತದೆ .ಯಾವನು ತನ್ನ ಗುರುಭಕ್ತಿಯ ಪಥ ಬದಲಿಸದೇ, ಸತತ ಗುರುಸೇವೆಯಲ್ಲಿ ಕೊನೆಯವರೆಗೆ ಇರುತ್ತಾನೋ ….. ಅವನೇ ತನ್ನ ಜೀವನ ಸಾಫಲ್ಯದ ಪ್ರಾಪ್ತಿ ಮಾಡಿಕೊಳ್ಳುತ್ತಾನೆ
(ಇಸವಿ ಸನ ೧೯೬೭ರಲ್ಲಿ ಶ್ರೀ ಪ್ರಭಾಕರ ದೀಕ್ಷಿತ, ಕವಲಕುಡಾರವರಿಗೆ ಬರೆದ ಪತ್ರ)

||ಶ್ರೀರಾಮ ಸಮರ್ಥ||
ವರದಪುರ
೨೦-೭-೧೯೬೭
ಚಿ.ಪ್ರಭಾಕರನಿಗೆ ಆಶೀರ್ವಾದ,
‘ಕಷ್ಟದ ಹೊರತು ಫಲವಿಲ್ಲ’, ಇದೇ ವಿಚಾರವನ್ನು ನಾನು ಈ ಪತ್ರದಲ್ಲಿ ಹೇಳುತ್ತಿದ್ದೇನೆ. ‘ಮೊದಲು ಕಷ್ಟ ನಂತರ ಫಲ’ (ಸುಖ) – ಇದು ಜೀವನದ ರಹಸ್ಯ.
‘ಯತ್ತದಗ್ರೇ ವಿಷಮಿವ ಪರಿಣಾಮೋಮೃತೋಪಮ| ತತ್ಸುಖಂ ಸಾತ್ವಿಕಂ ಪ್ರೋಕ್ತಮಾತ್ಮಬುದ್ಧಿಪ್ರಸಾವಜಮ್|’
‘ಯಾವುದು ಮೊದಲು ವಿಷದಂತೆ ಕಹಿಯಾಗಿರುತ್ತದೆಯೋ, ಅದು ಕೊನೆಗೆ ಅಮೃತದಂತೆ ಸಿಹಿಯಾಗುತ್ತದೆ’, ಅಂತಹ ಸುಖ ಸಾತ್ವಿಕ ಸುಖ ಎಂದು ತಿಳಿದುಕೊಳ್ಳಬೇಕು ಮತ್ತು ಆಗ ಆತ್ಮಜ್ಞಾನದಿಂದ ಪ್ರಾಪ್ತವಾದ ಪ್ರಸನ್ನತೆ ದೇಹಕ್ಕೆ ನಾಟುತ್ತದೆ … ಇದೇ ತತ್ವ ನಿನ್ನ ಸ್ವಪ್ನದಿಂದ ಸ್ಪಷ್ಟವಾಗುತ್ತದೆ.
ಮೊದಲು ಕಹಿಯೆನಿಸುವ ‘ತ್ಯಾಗ’ ಮಾಡಿ ಸಿಹಿಯ ‘ಪ್ರಾಪ್ತಿ’ ಪಡೆಯಬೇಕು, ಅಂದರೆ ಪರಮಾರ್ಥದಲ್ಲಿ ಅಥವಾ ಶ್ರೀಗುರುಸೇವೆಯಲ್ಲಿ ಆಗುವ ಕಷ್ಟಗಳ ಕಡೆ ದುರ್ಲಕ್ಷ ಮಾಡಿ, ಕೊನೆಯವರೆಗೆ ಶ್ರದ್ಧಾ-ಭಕ್ತಿ ಅಚಲವಾಗಿದ್ದರೆ ಶ್ರೀಗುರುಪ್ರಸಾದ ತಪ್ಪದೇ ಸಿಕ್ಕೇ ಸಿಗುತ್ತದೆ.
ಪ್ರಾರಂಭದಲ್ಲಿ ಅನೇಕ ವಿಘ್ನಗಳು ಬರುತ್ತವೆ. ಶ್ರೀಗುರುಗಳ ಸೇವೆ ಬಿಟ್ಟು ಬಿಡಬೇಕು ಎಂದೂ ಅನಿಸುತ್ತದೆ. ಗುರುಸೇವೆ ಅಪಮಾನ ಮತ್ತು ಕಷ್ಟಗಳಿಗೆ ಕಾರಣೀಭೂತವಾಗಬಹುದು. ಈ ಎಲ್ಲದರ ಮೇಲೆ ಜಯ ಗಳಿಸಿ ಕೈಹಿಡಿದ ಶ್ರೀಗುರುಸೇವೆ ಕೊನೆಯವರೆಗೆ ಗೈದರೆ ಅದರ ಸಿಹಿ ಫಲ ನಿಶ್ಚಿತವಾಗಿಯೂ ಸಿಗುತ್ತದೆ. ಅಷ್ಟೇ ಅಲ್ಲ, ಶ್ರೀಗುರುಕೃಪೆಯಿಂದ ಇಹ-ಪರ ಕಲ್ಯಾಣವೇ ಆಗುತ್ತದೆ. ಕೆಲಜನರು ನಿನಗೆ ಒಳ್ಳೆಯ ಕೆಲಸದಿಂದ ಪರಾವೃತ್ತ ಮಾಡಲು ಮತ್ತು ಗುರುಭಕ್ತಿಯಲ್ಲಿ ಬಿರುಕು ಬೀಳಿಸಲು ಅನೇಕ ಪ್ರಕಾರದಿಂದ ನಿನ್ನ ಮನಸ್ಸು ತಿರುಗಿಸಲು ಪ್ರಯತ್ನ ಮಾಡುವರು. ಆದರೆ ಆ ವಿಚಾರಗಳಿಗೆ ಬಲಿ ಬೀಳದೇ, ಯಾವನು ತನ್ನ ಗುರುಭಕ್ತಿಯ ಪಥ ಬದಲಿಸದೇ, ಸತತ ಗುರುಸೇವೆಯಲ್ಲಿ ಕೊನೆಯವರೆಗೆ ಇರುತ್ತಾನೋ ಅವನೇ ಶ್ರೀಗುರುಕೃಪೆಗೆ ಪಾತ್ರನಾಗುತ್ತಾನೆ. ಮತ್ತು ಅವನೇ ತನ್ನ ಜೀವನ ಸಾಫಲ್ಯದ ಪ್ರಾಪ್ತಿ ಮಾಡಿಕೊಳ್ಳುತ್ತಾನೆ. ಇದೇ ತತ್ವ ನಿನ್ನ ಸ್ವಪ್ನದಲ್ಲಿಯ ದೃಷ್ಟಾಂತದಲ್ಲಿ ಹೇಳಿದ್ದು ಎಂದು ತಿಳಿದಿಕೋ.
ಒಟ್ಟಿನಮೇಲೆ, ಯಾವುದೇ ಆಪತ್ತಿಗೆ ಬೆದರದೇ ಶ್ರೀಗುರುದೇವರ ಪೂರ್ಣ ಕೃಪೆಗೆ ಪಾತ್ರನಾಗಿ, ಇಹ-ಪರ ಪ್ರಾಪ್ತಿಮಾಡಿಕೊಂಡು ಕೃತಾರ್ಥನಾಗು! ಇದೇ ನಿನಗೆ ನನ್ನ ಆಶೀರ್ವಾದ.
ಇತಿಶಮ್|
ಶ್ರೀಧರ
(ಮುಂದುವರಿಯುವದು)

RELATED ARTICLES  ಬದುಕಿಗೆ ಬಣ್ಣ ತುಂಬಿದವರು