ಈ ಒಂದು ಫೋಟೋ ನೋಡಿದರೆ ಸಾಕು. ಇಂಡೋನಿಷಿಯಾ ದೇಶದ ಮೇಲೆ ಇರುವ ಗೌರವ ಇನ್ನಷ್ಟು ಹೆಚ್ಚುತ್ತದೆ..! ಯಾಕೆ ಗೊತ್ತಾ?

ಈ ಫೋಟೋದಲ್ಲಿ ನಿಮಗೇನು ಕಾಣಿಸುತ್ತದೆ? ಕುರ್ಚಿಯಲ್ಲಿ ಕುಳಿತ ಮಹಿಳೆಯರು ಕಾಲನ್ನು ತೊಳೆಯುತ್ತಿರುವ ಮಕ್ಕಳು ಕಾಣಿಸುತ್ತಿದಾರೆ ಅಲ್ಲವೇ! ಈ ಫೋಟೋ ಹಿಂದೆ ತಾಯಿಗೆ ನಡೆಯುವ ಸೇವೆ ಅಡಗಿದೆ, ತಾಯಿ ಪ್ರೀತಿಯನ್ನು ದೊಡ್ಡದಾಗಿ ಜಗತ್ತಿಗೆ ಸಾರುವ ಆತ್ಮೀಯತೆ ಅಡಗಿದೆ. ಮಾನವೀಯತೆ ಮೌಲ್ಯಗಳನ್ನು ಹೇಳುತ್ತಾ ನಾಳಿನ ಪೌರರನ್ನು ತಿದ್ದಿತೀಡುವ ಪ್ರಯತ್ನ ಅಡಗಿದೆ. ಈ ಒಂದು ಫೋಟೋದಿಂದ ನನಗೆ ಇಂಡೋನೇಷಿಯಾ ಮೇಲಿನ ಗೌರವ ಇನ್ನಷ್ಟು ಹೆಚ್ಚಾಯಿತು.

RELATED ARTICLES  ಭಟ್ಕಳದಲ್ಲಿ ಅಪರಿಚಿತ ಶವ ಪತ್ತೆ !

ಏನೀ ಫೋಟೋ…
ಇದು ಒಂದು ಸ್ಕೂಲ್ ಫೋಟೋ…ಇಂಡೋನೇಷಿಯಾದಲ್ಲಿನ ಪ್ರತಿ ಶಾಲೆಯಲ್ಲೂ…ವಾರಕ್ಕೆ ಒಮ್ಮೆ ತಮ್ಮ ಶಾಲೆಗಳಲ್ಲಿ ಓದಿಕೊಳ್ಳುತ್ತಿರುವ ಮಕ್ಕಗಳ ತಾಯಂದಿರಿಗೆ ಕಡ್ಡಾಯವಾಗಿ ತಮ್ಮ ಶಾಲೆಗೆ ಕರೆದು..ಅವರನ್ನು ಸನ್ಮಾನಿಸಿ… ಬಳಿಕ ಅವರೆಲ್ಲರನ್ನೂ ಕುರ್ಚಿಯಲ್ಲಿ ಕೂರಿಸಿ..ಅವರ ಮಕ್ಕಳಿಂದ ತಾಯಂದಿರ ಕಾಲು ತೊಳೆಸುತ್ತಾರೆ. ಆ ಕಾರ್ಯಕ್ರಮದ ಬಳಿಕ ತಾಯಂದಿರು ಮಕ್ಕಳನ್ನು ಆತ್ಮೀಯತೆಯಿಂದ ತಬ್ಬಿಕೊಳ್ಳುತ್ತಾರೆ. ಕೆಲವರು ತಾಯಂದಿರಾದರೆ ತಮ್ಮ ಮಕ್ಕಳು ಕಾಲು ತೊಳೆಯುತ್ತಿದ್ದರೆ…ತಡೆದುಕೊಳ್ಳಲಾಗದೆ ಕಣ್ಣು ತುಂಬಿ ಬರುತ್ತದೆ. ಇಲ್ಲಿದೆ ನೋಡಿ ಆ ಫೋಟೋ..

RELATED ARTICLES  ಬಿಜೆಪಿಯ ಪರಿವರ್ತನಾ ಯಾತ್ರೆಯ ಸಮಾರೊಪ ಸಮಾರಂಭದಲ್ಲಿ ಭಾಗವಹಿಸಿದ ನಾಗರಾಜ ನಾಯಕ ತೊರ್ಕೆ.

 

ಚಿಕ್ಕಂದಿನಿಂದ ತಂದೆತಾಯಿ ಮೇಲೆ ಗೌರವವನ್ನು ಹೆಚ್ಚಿಸುವ ಈ ಕಾರ್ಯಕ್ರಮದಿಂದ…ಇಂಡೋನೇಷಿಯಾದಲ್ಲಿ ಒಂದೇ ಒಂದು ಅನಾಥಾಶ್ರಮ ಇಲ್ಲದಿರುವುದು ಗಮನಾರ್ಹ. ಇದು ಒಳ್ಳೆಯದನ್ನು ತಿಳಿಹೇಳುವ ವಿಧಾನ.