Home State News ಡಾಕ್ಟರೇಟ್ ಪಡೆದ ಹೊನ್ನಾವರದ ಯುವತಿ ಶೆರೋನಾ ಥಾಮಸ್ ಹೊರ್ಟಾ

ಡಾಕ್ಟರೇಟ್ ಪಡೆದ ಹೊನ್ನಾವರದ ಯುವತಿ ಶೆರೋನಾ ಥಾಮಸ್ ಹೊರ್ಟಾ

ಹೊನ್ನಾವರ : ತಾಲೂಕಿನ ಕೆಳಗಿನೂರಿನ ಯುವತಿ ಶೆರೋನಾ ಥಾಮಸ್ ಹೊರ್ಟಾ ಇವರು ಮಂಡಿಸಿದ ‘ಇನ್ವೆಸ್ಟಿಗೇಷನ್ ಆಫ್ ನ್ಯಾನೋಸ್ಕೇಲ್ ಕ್ರಿಸ್ಟಲೋಗ್ರಾಫಿಕ್ ಪೇಸಸ್ & ಎಲೆಕ್ಟ್ರಾನಿಕ್ ಪ್ರೊಪರ್ಟಿಸ್ ಸ್ಪೈನಲ್ & ಅಲಾಯ್’ ಎಂಬ ಮಹಾಪ್ರಬಂಧಕ್ಕಾಗಿ ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ ಸೈಂಟಿಪಿಕ್ ರಿಸರ್ಚ್ ಬೆಂಗಳೂರು ಇವರು ಒಂದನೇ ತಾರೀಕಿನನಂದು ಡಾಕ್ಟರೇಟ್ ನೀಡಿದ್ದಾರೆ.

ಈ ಯುವತಿ ಮೂಲತಃ. ಹೊನ್ನಾವರದ ಕೆಳಗಿನೂರಿನವಳಾಗಿದ್ದು ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕರಾಗಿರುವ ಥಾಮಸ್ ಹಾಗೂ ಶ್ರೀಮತಿ ಮೇಬಲ್ ಹೊರ್ಟಾರ ಮಗಳಾಗಿದ್ದಾಳೆ.

ತನ್ನ ಆರಂಭಿಕ ಶಿಕ್ಷಣವನ್ನು ಹೆತ್ತೂರಿನಲ್ಲೇ ಕನ್ನಡ ಮಾಧ್ಯಮದಲ್ಲಿ ಪಡೆದ ಈಕೆ ತದನಂತರ ಬಿಎಸ್ಸಿ ಪದವಿಯನ್ನು ಹೊನ್ನಾವರದ ಎಸ್ ಡಿ ಎಂ ಕಾಲೇಜಿನಲ್ಲಿ ಕಾಲೇಜಿಗೆ ಪ್ರಥಮ ಹಾಗೂ ವಿಶ್ವವಿದ್ಯಾಲಯಕ್ಕೆ ನಾಲ್ಕನೇ ಸ್ಥಾನ ಪಡೆಯುವುದರ ಮೂಲಕ ಮುಗಿಸಿರುತ್ತಾರೆ.

ಭೌತಶಾಸ್ತ್ರದಲ್ಲಿ ಎಂಎಸ್ಸಿಯನ್ನು ಕೆ. ಯು. ಡಿ (ಕರ್ನಾಟಕ ಯುನಿವರ್ಸಿಟಿ ಧಾರವಾಡ)ದಲ್ಲಿ ಚಿನ್ನದ ಪದಕದೊಂದಿಗೆ ಮುಗಿಸಿರುತ್ತಾರೆ.

ಅದಾದ ನಂತರ ಜ್ಯೂನಿಯರ್ ರಿಸರ್ಚ್ ಫೆಲೋಶಿಪ್ ಪರೀಕ್ಷೆಯನ್ನು ಪಾಸ್ ಮಾಡಿ ಐ.ಐ. ಎಸ್ಸಿ ಬೆಂಗಳೂರಿನಲ್ಲಿ ಒಂದು ವರ್ಷದ ಕೋರ್ಸ್ ಅನ್ನು ಎ ಗ್ರೇಡ್ ನೊಂದಿಗೆ ಮುಗಿಸಿರುವ ಈಕೆ ನಿಜಕ್ಕೂ ಓದಿನಲ್ಲಿ ಪ್ರತಿಭಾವಂತೆ.

ಜೆ ಎನ್ ಸಿ ಎ ಎ ಆರ್ ಬೆಂಗಳೂರು ಇಲ್ಲಿ ಡಾ|| ರಂಜನ್ ದತ್ ಇವರ ಮಾರ್ಗದರ್ಶನದಲ್ಲಿ ಮಹಾಪ್ರಬಂಧ ಮಂಡಿಸಿರುತ್ತಾರೆ.

Source: Vichitra Vismayagalu