ಕುಮಟಾ : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಕೊಡಮಾಡುವ ಗೌರವ ಪುರಸ್ಕಾರ ಕಾರ್ಯಕ್ರಮವು ಅಗಷ್ಟ 1 ನೇತಾರೀಖಿನಂದು ನೆರವೇರಲಿದೆ.ಕೋವಿಡ್ ನಿಯಮಾವಳಿಗಳ ಕಾರರಣದಿಂದ ಅತ್ಯಂತ ಸರಳವಾಗಿ ನೆರವೇರುವ ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಹಿರಿಯ ಕೊಂಕಣಿ ಸಾಹಿತಿ ಹಾಗೂ ಸಂಘಟಕ ಶ್ರೀ ಅರುಣ ಉಭಯಕರ್ ಹಾಗೂ ಜಾನಪದ ಕ್ಷೇತ್ರದಲ್ಲಿ ಹೆಸರು ಗಳಿಸಿರುವ ಯಲ್ಲಾಪುರದ ಶ್ರೀಮತಿ ಲಕ್ಷ್ಮೀ ಸಿದ್ದಿಯವರಿಗೆ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ.ಈ ಕಾರ್ಯವನ್ನು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿ ನೆಡೆಸಲು ಈ ಹಿಂದೆ ನಿರ್ಧರಿಸಲಾಗಿತ್ತು.ಆದರೆ ಬದಲಾದ ಸನ್ನಿವೇಶದಲ್ಲಿ ಅಕಾಡಮಿಯ ಕೇಂದ್ರ ಸ್ಥಾನವಾದ ಮಂಗಳೂರಿನ ಪುರಭವನದಲ್ಲಿ ರವಿವಾರ ಅಪರಾಹ್ನ ೨ ಗಂಟೆಗೆ ನೆಡೆಸಲಾಗುತ್ತದೆ ಎಂದು ಅಕಾಡೆಮಿಯ ಸದಸ್ಯ ಚಿದಾನಂದ ಭಂಡಾರಿ ತಿಳಿಸಿದ್ದಾರೆ.

RELATED ARTICLES  ಆರೊಳ್ಳಿ ಮುಂಡಗೋಡ ಚರ್ಚ್ ರಸ್ತೆಯ ಕಾಮಗಾರಿಯ ಗುದ್ದಲಿಪೂಜೆ ನೆರವೇರಿಸಿದ ಮಂಕಾಳ ವೈದ್ಯ

ಪ್ರಮುಖ ಸುದ್ದಿಗಳನ್ನು ಓದಿ..

ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಪೀಠಾರೋಹಣ ಕಾರ್ಯಕ್ರಮ ನಾಳೆ.

ಉತ್ತರಕನ್ನಡಕ್ಕೆ ಇಂದು ಸಿ.ಎಂ ಬರ್ತಾರೆ 

RELATED ARTICLES  ಅಕ್ಷತಾ ಭಟ್ಟ ರಾಜ್ಯ ಮಟ್ಟಕ್ಕೆ ಆಯ್ಕೆ