ತಾಯಿಯ ಜೊತೆ ಮನಸ್ಥಾಪ : ಆತ್ಮಹತ್ಯೆಗೆ ಯತ್ನಿಸಿದ ಬಾಲಕ

ತಾಯಿ ಮತ್ತು ಮಗನ ನಡುವೆ ಜಗಳವಾಗಿದ್ದು, ತಾಯಿ ಜೊತೆ ಮಗನು ಮನಸ್ತಾಪ ಮಾಡಿಕೊಂಡು ವಿಷಸೇವನೆ ಮಾಡಿ ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಬನವಾಸಿಯಲ್ಲಿ ನಡೆದಿದೆ. ಈ ವೇಳೆ ಶಿರಸಿ -ಬನವಾಸಿ-ಗೋಣೂರು ಗ್ರಾಮದಿಂದ 112ಗೆ ಕರೆ ಬಂದಿದ್ದು,  ತಕ್ಷಣ ತುರ್ತು ಸ್ಪಂದನಾ ವಾಹನ ಸ್ಥಳಕ್ಕೆ ತೆರಳಿದೆ. ಕೂಡಲೇ 112 ವಾಹನದ ಸಿಬ್ಬಂದಿಗಳನ್ನು ವಿಷ ಕುಡಿದ ಹುಡುಗನನ್ನು ತಕ್ಷಣ ಬನವಾಸಿ ಆಸ್ಪತ್ರೆಗೆ ಸಾಗಿಸಿ  ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ.

ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾತ ಆತ್ಮಹತ್ಯೆಗೆ ಶರಣು

ಶಿರಸಿ ಮೂಲದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಇನ್ನೇನು ನಿವೃತ್ತಿಗೆ ಮೂರು ತಿಂಗಳು ಬಾಕಿ ಇರುವಾಗ ಆತ್ಮಹತ್ಯೆಗೆ ಶರಣಾಗಿದ್ದು ಕುಟುಂಬದವರನ್ನು ಆತಂಕಕ್ಕೆ ದೂಡಿದೆ. ತಾಲೂಕಿನ ಕೂರ್ಗಿಕೊಡ್ಲು ಗ್ರಾಮದ ಹರೀಶ ನಾರಾಯಣ ನಾಯ್ಕ ಆತ್ಮಹತ್ಯೆಗೆ ಶರಣಾದ ಯೋಧನಾಗಿದ್ದು ಈತನು ಲಕ್ಷದ್ವೀಪದಲ್ಲಿ ಸೇವೆ ಸಲ್ಲಿಸುತ್ತಿದ್ದ. ಕಳೆದ 20 ವರ್ಷಗಳಿಂದ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದ ಈತ ಇನ್ನು ಮೂರು ತಿಂಗಳಲ್ಲಿ ನಿವೃತ್ತರಾಗುವುದರಲ್ಲಿದ್ದರು. ಆದರೆ ಇದೀಗ ಸುದ್ದಿ ತಿಳಿದ ಆತನ ಕುಟುಂಬಸ್ಥರು ಬರಸಿಡಿಲು ಎರಗಿದಂತಾಗಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ಏನೆಂಬುದು ತಿಳಿದು ಬಂದಿಲ್ಲ ಎಂದು ಮೂಲಗಳು ತಿಳಿಸಿವೆ ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.

RELATED ARTICLES  ಅಶೋಕೆಯಲ್ಲಿ ಪುನಃಪ್ರತಿಷ್ಠಾ ಕಾರ್ಯಕ್ರಮ

ಮಾರಿಕಾಂಬಾ ದೇವಸ್ಥಾನದಲ್ಲಿ 96 ಜನರಿಗೆ ಕೊವಿಡ್‌ ಪರೀಕ್ಷೆ

ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ 96 ಜನರಿಗೆ ಕೊವಿಡ್‌ ಪರೀಕ್ಷೆ ನಡೆಸಲಾಯಿತು. ಸರಕಾರದ ಆದೇಶದಂತೆ ದೇವಾಲಯದಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗಳಿಗೆ ಪ್ರತಿ 10 ದಿನಕ್ಕೆ ಒಂದು ಸಾರಿಯಂತೆ ಕೊವಿಡ್ ಪರೀಕ್ಷೆ ನಡೆಸಲು ಆದೇಶಿಸಿರುವುದರಿಂದ ದೇವಾಲಯದ ಸಿಬ್ಬಂದಿಗಳು, ಅರ್ಚಕರು, ಹಾಗೂ ದೇವಸ್ಥಾನದ ಸಮೀಪ ಇರುವ ಭಕ್ತರು ಮತ್ತು ಸಾರ್ವಜನಿಕರೂ ಸಹ ಉಪಸ್ಥಿತರಿದ್ದು ಕೊವಿಡ್ ಪರೀಕ್ಷೆ ಮಾಡಿಸಿಕೊಂಡರು. ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದು ಎಲ್ಲರನ್ನು ಪರೀಕ್ಷೆ ನಡೆಸಿದರು.

RELATED ARTICLES  60 ಅಡಿ ಆಳದ ಬಾವಿಯಲ್ಲಿ ಸಿಲುಕಿಕೊಂಡ ವ್ಯಕ್ತಿಯ ರಕ್ಷಣೆ