ಸೈಕಲ್ ಹಾಗೂ ಬೈಕ್ ಡಿಕ್ಕಿ
ಕುಮಟಾ ತಾಲೂಕಿನಲ್ಲಿ ಬೈಕ್ ಡಿಕ್ಕಿ ಹೊಡೆದು ಸೈಕಲ್ ಸವಾರ ಗಾಯಗೊಂಡ ಘಟನೆ ಪಟ್ಟಣದ ವಿವೇಕನಗರದ ಕೆನರಾ ಬ್ಯಾಂಕ್ ಎದುರು ಸಂಭವಿಸಿದೆ. ಕುಮಟಾ ತಾಲೂಕಿನ ಚಿಟ್ಟಿಕಂಬಿಯ ರಾಘವೇಂದ್ರ ರಾಮರಾಯ ಕಾಮತ್ (30) ಗಾಯಗೊಂಡ ಸೈಕಲ್ ಸವಾರ, ಬೈಕ್ ಸವಾರ ಸಂತೋಷ ಆಚಾರಿ ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ. ಗಾಯಗೊಂಡ ರಾಘವೇಂದ್ರ ಕಾಮತ ಅವರ ಚಿಕಿತ್ಸೆಗಾಗಿ ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ
ದಾಖಲಾಗಿದೆ.
ಡಾ.ಆರ್.ಎನ್. ಶೆಟ್ಟಿಯವರ ಪುತ್ಥಳಿ ಸ್ಥಾಪಿಸಲು ನಿರ್ಧಾರ
ಮುರ್ಡೇಶ್ವರದ ನವನಿರ್ಮಾತೃ ಡಾ.ಆರ್.ಎನ್.
ಶೆಟ್ಟಿಯವರ ಪುತ್ಥಳಿಯನ್ನು ಸ್ಥಾಪಿಸುವ ಕುರಿತು ಮುರ್ಡೇಶ್ವರ ನಾಗರಿಕರು ಸಭೆ ಸೇರಿ ನಿರ್ಣಯಿಸಿದ್ದು ಮತ್ಥಳಿಯನ್ನು ಮುರ್ಡೇಶ್ವರದ ಪುಷ್ಕರಣಿಯ ಆವಾರದಲ್ಲಿ ಸ್ಥಾಪಿಸಲು ತೀರ್ಮಾನಿಸಿದ್ದಾರೆ. ಆರ್.ಎನ್. ಶೆಟ್ಟಿಯವರ ಜನ್ಮದಿನದಂದು ಸಭೆ ಸೇರಿದ ಮುರ್ಡೇಶ್ವರ ನಾಗರಿಕರು ಮುರ್ಡೇಶ್ವರಕ್ಕೆ ಅವರು ಕೊಡುಗೆ ನೀಡಿರುವುದನ್ನು ಪರಿಗಣಿಸಿ ಅವರ ಹೆಸರನ್ನು ಅಜರಾಮರವನ್ನಾಗಿಸಲು ಎಲ್ಲರ ಸಹಕಾರ ಬೇಕು ಎಂದು ಮುಡೇಶ್ವರ ನಾಗರೀಕ ಸೇವಾ ಸಮಿತಿಯ ಅಧ್ಯಕ್ಷ ಎಸ್.ಎಸ್.ಕಾಮತ್ ಅವರು ಹೇಳಿದರು. ಆ ಪ್ರಯುಕ್ತ ನಾವು ಇಂದೇ ಶಿಲಾ ಪೂಜೆಯನ್ನು ನೆರವೇರಿಸುತ್ತಿದ್ದು ಶಿಲಾ ಪ್ರತಿಷ್ಠೆಯನ್ನು ಮಾಡಿ ಮುಂದಿನ ಕಾರ್ಯಕ್ಕೆ ಮುಂದಾಗುತ್ತಿದ್ದೇವೆ ಎಂದು ಅವರು ಹೇಳಿದರು. ನಂತರ ಮಾತನಾಡಿದ ರಾಮಾ ನಾಯ್ಕ ಅವರು ಡಾ.ಆರ್.ಎನ್.ಶೆಟ್ಟಿ ಯವರು ಈ ನಾಡಿಗೆ ನೀಡಿದ ಕೊಡುಗೆ ಅಪಾರವಾದದ್ದು ಎಂದರು.
ಬಾವಿಗೆ ಬಿದ್ದ ಹಸುವಿನ ರಕ್ಷಣೆ.
ಹೊನ್ನಾವರ ತಾಲೂಕಿನ ಹಡಿನಬಾಳ ಗ್ರಾಮದ ಕಡಿಗೇರಿಯ ನಾರಾಯಣ ನಾಯ್ಕರವರ ಮನೆಯ ಸುಮಾರು 30 ಅಡಿ ಆಳ 8 ಅಡಿ ನೀರಿರುವ ಬಾವಿಯಲ್ಲಿ ಬಿದ್ದ ಆಕಳನ್ನು ಅಗ್ನಿಶಾಮಕದಳದವರು ರಕ್ಷಿಸಿದ್ದಾರೆ. ಕಾರ್ಯಚರಣೆಯಲ್ಲಿ ಠಾಣಾಧಿಕಾರಿ ಜಯಾನಂದ ಎನ್.ಪಟಗಾರ ಸಿಬ್ಬಂದಿಗಳಾದ ಅರುಣ ಎಸ್. ಮಾಳೋದೆ, ನಾಗೇಶ್ ಪೂಜಾರಿ, ಗಜಾನನ ಪಿ. ನಾಯ್ಕ, ರಮೇಶ ಬಿ. ಚಿಕ್ಕಲಗಿ, ವೆಂಕಟೇಶ ನಾಯ್ಕ, ವಿನಾಯಕ ಎಸ್. ಭಂಡಾರಿ ಹಾಗೂ ಅಭಿಷೇಕ ನಾಯ್ಕ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಹಸುವನ್ನು ರಕ್ಷಣೆ ಮಾಡಿದ್ದಾರೆ.
ಕಾರು ಹಾಗೂ ಬೈಕ್ ನಡುವೆ ಅಪಘಾತ
ಅತಿ ವೇಗವಾಗಿ ಬಂದ ಕಾರೊಂದು ಟಿವಿಎಸ್ ಎಕ್ಸಲ್ ಗೆ ಡಿಕ್ಕಿಹೊಡೆದ ಪರಿಣಾಮ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಶಿರಸಿಯಲ್ಲಿ ನಡೆದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರನ ಟಿವಿಎಸ್ ಎಕ್ಸೆಲ್ ಸಂಪೂರ್ಣ ಜಖಂ ಆಗಿದ್ದು, ಆತನಿಗೂ ಗಂಭೀರ ಸ್ವರೂಪದ ಗಾಯಗಳಾಗಿವೆ. ಹೊಸಗದ್ದೆಯ ಓಣಿಕೇರಿ ನಿವಾಸಿ ಆತ್ಮಾತಾಮ ಶಂಕರ್ ಪಂಡಿತ ಗಾಯಗೊಂಡ ವ್ಯಕ್ತಿ. ಬನವಾಸಿ ಕಡೆಯಿಂದ ಶಿರಸಿ ಕಡೆಗೆ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದ ವೇಳೆ ಈ ದುರ್ಘಟನೆ ನಡೆದಿದ್ದು, ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗದೆ.