ಅಕ್ಷರರೂಪ:ಶ್ರೀಮತಿ ಪ್ರಭಾ ಮತ್ತು ವೆಂಕಟರಮಣ ಭಟ್ಟ ಪುಣೆ

ನವನಾಥರೆಲ್ಲರೂ ಚಿಂತಾಗ್ರಸ್ತರಾಗಿ ಕುಳಿತಿದ್ದಾಗ, ಒಮ್ಮಿಂದೊಮ್ಮಲೇ ನೀರಿನಿಂದ ಒಂದು ಲಿಂಗ ಪ್ರತ್ಯಕ್ಷವಾಯಿತು. ಅದೇ ಕದರೀಗುಡ್ಡದ ಈ ಮಂಜನಾಥೇಶ್ವರ ಲಿಂಗ!
(ಇಸವಿ ಸನ ೧೯೪೪ರಲ್ಲಿ ದಿನಕರಬುವಾ ರಾಮದಾಸಿ ಸಜ್ಜನಗಡರವರಿಗೆ ಬರೆದ ಪತ್ರ)

||ಶ್ರೀರಾಮ ಸಮರ್ಥ||
ಮಂಗಳೂರು, ಕದ್ರಿ
ಶುಕ್ರವಾರ, ೫-೧-೧೯೪೪
ಚಿ. ದಿನಕರನಿಗೆ ಆಶೀರ್ವಾದ,
ನಾವು ನಾಲ್ಕೂ ಜನ ಇಲ್ಲಿ ಸುರಕ್ಷಿತವಾಗಿದ್ದೇವೆ. ಇಲ್ಲಿಯ ಜನರಿಗೆ ದರ್ಶನವಿನ್ನೂ ಕೊಟ್ಟಿಲ್ಲ. ಅಜ್ಞಾತವಾಸವೇ ಇದೆ. ವಿಠ್ಠಲ, ವೆಂಕಟರಾವ, ಭಾಗವತ ನನ್ನ ಸಂಗಡ ಇದ್ದಾರೆ. ಇಲ್ಲಿ ಚಿಕ್ಕಮಗಳೂರಿನ ಶ್ರೀಮಚ್ಛೀಂದರನು ಇಲ್ಲಿಯ ‘ಮಂಜುನಾಥ’ ಎಂಬ ನಾಮಧೇಯದ ಶಿವಲಿಂಗದ ಸ್ಥಾಪನೆ ಮಾಡಿದ್ದಾರೆ. ಈ ದೇವಸ್ಥಾನ ಕೆಳಗಿದೆ. ನಾವಿರುವ ಸ್ಥಳ ಎತ್ತರದ ಮೇಲಿದೆ. ದೇವಸ್ಥಾನಕ್ಕೆ ಹೋಗಲಿಕ್ಕೆ ಸುಮಾರು ೫೫ ಮೆಟ್ಟಿಲು ಇಳಿದು ಹೋಗಬೇಕು. ದೇವಸ್ಥಾನಕ್ಕೆ ಹೋಗುವಾಗ ಬಲಗಡೆಗೆ ಮೊಟ್ಟಮೊದಲು ‘ಗಣೇಶತೀರ್ಥ’ ಸಿಗುತ್ತದೆ. ತೀರ್ಥದ ಮೇಲ್ಭಾಗದಲ್ಲಿ ಗಣೇಶಮೂರ್ತಿ ಇದೆ. ನೀರು ಎಲ್ಲಿಂದ ಬರುತ್ತದೆ ಅದೇನೂ ಕಾಣುವದಿಲ್ಲ.

RELATED ARTICLES  ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲಿಕೆ 

ಆ ಮೂರ್ತಿಯ ಸ್ಥಳದಿಂದ ಸಾಧಾರಣ ಒಂದು ಒಂದೂಕಾಲು ಮೀಟರ ಗೋಮುಖದಿಂದ ನೀರು ಬೀಳುತ್ತದೆ. ನೀರಿನ ಧಾರೆ ಸಾಧಾರಣ ಒಂದೆರಡು ಇಂಚು ದಪ್ಪ ಇದೆ. ಕೆಳಗೆ ಕುಂಡದಲ್ಲಿ ಕುಳಿತು ಅಥವಾ ಬಗ್ಗಿ ಮೈಮೇಲೆ ಧಾರೆ ತೆಗೆದುಕೊಳ್ಳಬಹುದು. ೩-೪ ಅಡಿ ಮುಂದೆ ಹೋದರೆ ಒಂಭತ್ತು ಕುಂಡಗಳಿವೆ. ಇಲ್ಲಿ ಸ್ನಾನಕ್ಕೆಂದು ಬಹಳ ಜನ ಬರುತ್ತಾರೆ. ಸಾಧಾರಣ ಸಂಜೆ ೩-೪ ಗಂಟೆಗಳಿಂದ ಜನ ಬರಹತ್ತುತ್ತಾರೆ. ಈ ನೀರಿನಿಂದ ಬಹಳಿಷ್ಟು ರೋಗ ಗುಣ ಹೊಂದುತ್ತವೆ ಎಂದು ಬರುವ ಜನರ ನಂಬುಕೆಯಿದೆ. ಈ ಒಂಭತ್ತು ಕುಂಡಗಳೆಂದರೆ ಒಂಭತ್ತು ನವನಾಥರ ಪ್ರತೀಕಳೇ. ಇಲ್ಲಿ ಒಂದು ಕಾಲದಲ್ಲಿ ನವನಾಥರು ಒಂದುಗೂಡಿದ್ದರು. ಅವರ ಆ ಸಮ್ಮೇಲನದ ನಿದರ್ಶಕವೆಂದು ಆ ಒಂಭತ್ತು ನಾಥರು ಕೂಡಿ ಕಾಶಿಯಿಂದ ಲಿಂಗವನ್ನು ತಂದು ಇಲ್ಲಿ ಸ್ಥಾಪಿಸಬೇಕೆಂದು ನಿರ್ಣಯಿಸಿದರು. ಕಾಶಿಯಿಂದ ನಿಶ್ಚಯಿಸಿದ ಮುಹೂರ್ತಕ್ಕೆ ಲಿಂಗ ಬರಲೇ ಇಲ್ಲ. ಎಲ್ಲರೂ ಚಿಂತಾಗ್ರಸ್ತರಾಗಿ ಕುಳಿತಿದ್ದಾಗ, ಒಮ್ಮಿಂದೊಮ್ಮಲೇ ನೀರಿನಿಂದ ಒಂದು ಲಿಂಗ ಪ್ರತ್ಯಕ್ಷವಾಯಿತು. ಅದೇ ಕದರೀಗುಡ್ಡದ ಈ ಮಂಜನಾಥೇಶ್ವರ ಲಿಂಗ. ದೇವಸ್ಥಾನ ತುಂಬಾ ದೊಡ್ಡದಾಗಿದೆ.ಇಲ್ಲಿ ಗರ್ಭಗುಡಿಯೊಳಗೆ ಹೋಗಿ ಎಲ್ಲರಿಗೂ ಲಿಂಗಾಭಿಷೇಕ ಮಾಡಲಿಕ್ಕಾಗುವದಿಲ್ಲ. ಹೊರಗಿನಿಂದಲೇ ದೇವರ ದರ್ಶನವಿದೆ. ಒಟ್ಟಿನಮೇಲೆ ಇದು ನವನಾಥರ – ಒಂಭತ್ತು ಸಿದ್ಧರ ಸ್ಥಳ.
ನಾವಿರುವ ಸ್ಥಳದಿಂದ ಸಮುದ್ರ ಕಾಣುತ್ತದೆ. ೫-೬ ಕಿ.ಮಿ. ಆದರೂ ದೂರವಿರಬೇಕು. ನಾವಿದ್ದ ಸ್ಥಳದಿಂದ ಸಾಧಾರಣ ೫೦-೬೦ ಮೆಟ್ಟಲು ಮೇಲೇರಿ ಹೋದರೆ ಬಹಳಿಷ್ಟು ಸಪಾಟ ಪ್ರದೇಶವಿದೆ. ಬಹಳಿಷ್ಟು ಜನರು ಇಲ್ಲಿಯೂ ತಿರುಗಾಟಕ್ಕೆಂದು ಬರುತ್ತಾರೆ. ಇಲ್ಲಿಂದ ತೆಂಗು ಮತ್ತು ಇತರ ಅನೇಕ ತರದ ಗಿಡ-ಮರಗಳಿಂದ ಆಚ್ಛಾದಿತ ಸಂಪೂರ್ಣ ಮಂಗಳೂರಿನ ರಮಣೀಯ ದೃಶ್ಯ ಕಾಣುತ್ತದೆ.
ಮತ್ತೆಲ್ಲಾ ಕ್ಷೇಮ,
– ಶ್ರೀಧರ

RELATED ARTICLES  ಕಳೆದುಹೋದ ಎಳೆಯ ದಿನಗಳು (ಭಾಗ6)