123 copy

ಶ್ರಮ ಎಂದರೆ ಏನು ಎನ್ನುವುದನ್ನು ಇರುವೆಯ ನೋಡಿ ಕಲಿಯಬೇಕು ಎಂದು ಅಮ್ಮ ಯಾವಾಗಲೂ ಹೇಳುತ್ತಿದ್ದರು. ನಿಜ ಶ್ರಮಕ್ಕೆ ಉತ್ತಮ ಉದಾಹರಣೆ ಇರುವೆಗಳು. ಅವು ತನ್ನಲ್ಲಿ ಶಕ್ತಿ ಇರುವಷ್ಟು ಸಮಯ ತನ್ನ ಹಾಗೂ ತನ್ನಕುಲದವರಿಗಾಗಿ ದುಡಿಯುತ್ತಲೇ ಇರುತ್ತದೆ. ಇರುವೆಯ ನಂತರ ಏನಾದರೂ ಒಂದು ಕಾಯಕ ಮಾಡುತ್ತಲೇ ತಿರುಗಾಡುವುದು ಪುಟ್ಟ ಮಕ್ಕಳು. ಆಗ ತಾನೇ ನಡೆದಾಡಲು ಪ್ರಾರಂಭಿಸಿದ ಮಗುವನ್ನು ನೋಡಿ ನಿದ್ದೆ ಮಾಡಿದ ಸಮಯ ಹೊರತು ಪಡಿಸಿ ಓಡಾಡುತ್ತಲೇ ಇರುತ್ತದೆ. ಎಷ್ಟೋ ಬಾರಿ ಓಡಾಡುತ್ತ ಆಟವಾಡುವ ಆಸೆಗೆ ನಿದ್ದೆಯನ್ನು ಸಹ ದೂರಮಾಡಿ ಬಿಡುತ್ತದೆ. ಆಗೆಲ್ಲ ಅನ್ನಿಸುವುದು ನಾನೇನು ಮಾಡಿದ್ದೇನೆ ಅನ್ನುವುದು.
ಹೌದು ನಾನೇನು ಮಾಡಿದ್ದೇನೆ ಎಂದು ಒಂದು ವಾರದ ದಿನಗಳನ್ನು ಮೆಲಕು ಹಾಕಿದರೆ ಸಿಗುವ ಉತ್ತರ ಏನು ಮಾಡಿಯೇ ಇಲ್ಲ ಎಂದಲ್ಲ, ಇನ್ನೂ ಏನಾದರೂ ಮಾಡಬಹುದಾಗಿತ್ತು. ಸಮಯ ಜಾರಿ ಹೋಯಿತು ಎನ್ನುವ ಭಾವ. ಯಾಕೆ ಹಾಗೆ ಮನಸ್ಸಲಿ ಅಂದುಕೊಳ್ಳುತ್ತೇವೆ ಈ ಕೆಲಸ ಇಂದು ಮಾಡಿಬಿಡಬೇಕು ಎಂದುಕೊಂಡರೂ ಆದರೂ ಸಾಧ್ಯವಾಗಿಲ್ಲ ಎಂದರೆ ಮೊದಲ ಕಾರಣ ಆಲಸ್ಯ. ನಂತರದ ಕಾರಣಗಳು ಸಮಯದ ಅಭಾವ, ಅನಾರೋಗ್ಯ, ಅಥವಾ ಅನಿರೀಕ್ಷಿತ ಕೆಲಸಗಳ ಆಗಮನ ಹೀಗೆ ಇದ್ದರೂ ಇವುಗಳ ಕಾರಣ ಅಷ್ಟಾಗಿ ನೀಡಲು ಸಾಧ್ಯವಾಗುವುದಿಲ್ಲ.

 
ನಾವು ಇಂದು ಒಂದು ಕೆಲಸವನ್ನು ಮಾಡಿಬಿಡಬೇಕು ಎಂದುಕೊಳ್ಳುವುದೇ ನಮ್ಮಿಂದ ಈ ಕೆಲಸ ಸಾಧ್ಯವಿದೆ ಎಂದು ಅರ್ಥವಾಗಿಸಿಕೊಂಡಾಗ. ಹಾಗಿದ್ದು ನಾವು ಮುಂದುವರೆಯದೆ ಆನಂತರ, ನಾಳೆ ಮುಂದಿನವಾರ ಎಂದು ಕಾಲ ಹಾಕುವುದು ಕೇವಲ ಆಲಸ್ಯತನವನ್ನು ನಮ್ಮ ಮನಸ್ಸಲ್ಲಿ ಇಟ್ಟುಕೊಂಡಿರುವುದು. ದೇಹದ ಆಲಸ್ಯ ಮನಸ್ಸು ಮಾಡಿದರೆ ಕ್ಷಣ ಮಾತ್ರದಲ್ಲಿ ಹೋಗಿಸಿಬಿಡಬಹುದು. ಆದರೆ ಮನಸ್ಸಿನ ಒಳಗಡೆ ಆಲಸ್ಯ ಇಟ್ಟುಕೊಂಡರೆ ಓಡಿಸುವುದು ತುಂಬ ಕಷ್ಟದ ಕೆಲಸ.

 
ನಾವೆಲ್ಲ ಹೇಗಾಗಿದ್ದೇವೆ ಎಂದರೆ ಮನಸ್ಸು ಹೇಳಿದಂತೆ ಕೇಳಲು ಪ್ರಾರಂಭಿಸಿದ್ದೇವೆ. ಮನಸ್ಸು ನಮ್ಮ ಹಿಡಿತದಲ್ಲಿ ಇಲ್ಲ ಎನ್ನುವುದು ಅರಿವಿಗೆ ಇದ್ದರೂ ಮತ್ತೂ ಮನಸ್ಸಿನ ಭ್ರಮಾಲೋಕವನ್ನೆ ಹೆಚ್ಚು ಆಹ್ವಾನಿಸುತ್ತೇವೆ ಹಾಗೂ ಪ್ರೀತಿಸುತ್ತೇವೆ. ಬುದ್ಧಿಯ ಹಿಡಿತಕ್ಕೆ ಮನಸ್ಸು ಸಿಕ್ಕಿದಾಗ ನಾವು ಅಂದುಕೊಂಡ ಕೆಲಸಗಳು ಸಾಗುತ್ತವೆ.
ಗೃಹಿಣಿ ಒಬ್ಬಳು ತನ್ನದೇ ಬಟ್ಟೆಯನ್ನು ಹೊಲಿಯಲು ಇಂದು ಕೂರಬೇಕು ಎಂದು ಬೆಳಗ್ಗೆ ಕಣ್ಣು ಬಿಡುತ್ತಲೇ ನಿರ್ಧರಿಸುತ್ತಾಳೆ. ಎದ್ದು ಗಂಡ ಮಕ್ಕಳು ಮನೆಕೆಲಸ ಇತ್ಯಾದಿ ಕೆಲಸ ಮುಗಿಸಲು ಸುಮಾರು ಹನ್ನೆರಡು ಗಂಟೆಯಾಗುತ್ತದೆ. ಆನಂತರ ಆಕೆ ಬಟ್ಟೆ ಹೊಲಿಯಲು ಕೂರಬೇಕು. ಅಲ್ಲಿರುವುದೇ ಆಲಸ್ಯದ ಜಾಡು ಆಕೆ ಅದೇ ಏಕ ಮನಸ್ಸಿನಿಂದ ಬೆಳಗ್ಗೆ ಏಳುವಾಗ ಆಲೋಚಿಸಿದಂತೆ ಬಟ್ಟೆ ಹೊಲಿಯಲು ಕುಳಿತರೆ ತಾನಾಗಿಯೇ ಕೆಲಸ ಸಾಗುತ್ತದೆ. ಆದರೆ ಅಯ್ಯೋ, ಇಂದು ಹೊತ್ತಾಯಿತು. ಒಂಅಉ ಗಂಟೆಗೆ ಮಗು ಶಾಲೆಯಿಂದ ಬರುವ ಹೊತ್ತು, ಹಾಗೆ ಮಾಡಿಟ್ಟ ಅಡುಗೆ ಬಡಿಸಬೇಕು ಮತ್ತೆ ಕೆಲಸ ಶುರುವಾಗುತ್ತದೆ. ಇನ್ನೇನು ಹೊಲಿಯಲು ಕೂರುವುದು ಊಟ ಮುಗಿಸಿ ಸಂಜೆ ನೋಡಿದರಾಯಿತು ಎಂದುಕೊಳ್ಳುತ್ತಾಳೆ. ಮತ್ತೆ ಮಗು, ಊಟ, ಪಾತ್ರೆ ಎಂದು ಕೆಲಸ ಮುಗಿಸಿ ಮಗುವಿನೊಟ್ಟಿಗೆ ವಿರಮಿಸುವುದು. ಮತ್ತೆ ಎದ್ದು ನಿತ್ಯದಂತೆ ಚಾ ಕುಡಿದು ಮಗುವಿನ ಶಾಲೆಯ ಹೋಮ್ ವರ್ಕ್ ಮಾಡಿಸುವುದು. ಮತ್ತೆ ಸಂಜೆಯಾಗುತ್ತ ಬರುತ್ತದೆ. ಈಗ ಹೊಲಿಯಲು ಕುಳಿತರೆ! ಉಹು, ಮನಸ್ಸು ಈಗ ಸಂಜೆಯಾಯಿತು ನಾಳೆ ನೊಡೋಣ ಎಂದು ಸುಮ್ಮನಾಗುವುದು. ಅಲ್ಲಿಗೆ ಈ ದಿನ ಕಳೆದುಹೋಗುತ್ತದೆ.

RELATED ARTICLES  ರೌದ್ರಾವತಾರ ತಾಳುತ್ತಿರುವ ಕಡಲು.

 
ಒಂದು ದಿನವೆನೋ ಸರಾಗವಾಗಿಯೇ ಕಳಿಯಿತು. ಆ ದಿನ ಮತ್ತೆ ಬಂದೀತೆ! ಅದನ್ನೇ ಇರುವ ಸಮಯವನ್ನು ಸದುಪಯೋಗ ಪಡಿಸಿಕೊಂಡಾಗ ಏನಾದರೂ ಹೊಸತನ್ನು ನಮಗಾಗಿ ಪಡೆದುಕೊಳ್ಳಬಹುದು. ದೇಹಕ್ಕೆ ವಿಶ್ರಾಮ ಸಿಗುವುದಿಲ್ಲ, ಸ್ವಲ್ಪ ಕಷ್ಟವಾಗುತ್ತದೆ. ಹಾಗಂದ ಮಾತ್ರಕ್ಕೆ ಕಷ್ಟವೇ ಪಡದೆ ಯಾವುದು ನಮ್ಮದಾಗುವುದಿಲ್ಲ. ನಾವು ಇದ್ದಲ್ಲಿಯೇ ಇರುತ್ತೇವೆ. ನಿನ್ನೆ ಹೇಗಿತ್ತೋ ಹಾಗೆ ನಾಳೆಯೂ ಇರುತ್ತದೆ.
ಹಾಗೆ ಇದ್ದರೆ ಸಾಕು ನನಗೆನು ಕಮ್ಮಿ ಇಲ್ಲ. ಎಲ್ಲ ಅನುಕೂಲಗಳು ಇದೆ ಎಂದು ಸುಮ್ಮನಿರುವವರು ಇದ್ದಾರೆ, ಆಸೆ ಇದ್ದು ಅವಕಾಶಗಳಿಲ್ಲದಿದ್ದವರು ಇದ್ದಾರೆ, ಇಂಥವರ ಬಗ್ಗೆ ಮಾತನಾಡುವುದಿಲ್ಲ. ಜೀವನ ಅವರವರ ಸ್ವತಂತ್ರ. ಆದರೆ ಏನೋ ಒಂದು ಮಾಡಬೇಕು ಎಂದಿದ್ದೂ ಕೂಡ ಮಾಡಲಾಗದೆ ಸೋತು ನಿಲ್ಲುವ ಮುಖ್ಯ ಕಾರಣ ಆಲಸ್ಯ. ಈ ಆಲಸ್ಯವನ್ನು ಒಮ್ಮೆ ಮೈಗೂಡಿಸಿಕೊಂಡುಬಿಟ್ಟರೆ ಅದರಿಂದ ಹೊರಬರುವುದು ಸುಲಭವಲ್ಲ.

RELATED ARTICLES  ಬದುಕಿಗೆ ಬಣ್ಣ ತುಂಬಿದವರು

 
ಅದಕ್ಕಾಗಿ ನಾವು ನಿತ್ಯ ಇಷ್ಟು ಕೆಲಸ ನಿರ್ವಹಿಸಬೇಕು ಎಂದುಕೊಳ್ಳುತೇವೆಯೋ ಅವಷ್ಟನ್ನು ಶತಾಯಗತಾಯ ಮಾಡಿ ಮುಗಿಸಲೇ ಬೇಕು ಎಂದು ಗಟ್ಟಿ ತೀರ್ಮಾನದ ಜೊತೆ ಮನಸ್ಸನ್ನು ಉಲ್ಲಾಸದಲ್ಲಿ ಇಟ್ಟುಕೊಂಡು ಮುಂದುವರೆಯಬೇಕು. ಮನಸ್ಸನ್ನು ಉಲ್ಲಾಸವಾಗಿರಿಸಿಕೊಳ್ಳಲು ಒಂದಿಷ್ಟು ಧ್ಯಾನ, ಇಷ್ಟವಾಗುವ ಸಂಗೀತ, ಓದು-ಬರಹ, ಹೀಗೆ ಹವ್ಯಾಸವಾಗಿಸಿಕೊಳ್ಳುವುದು ಉತ್ತಮ. ಇದರಿಂದ ಮನಸ್ಸು ಸಂತೋಷವಾಗಿರುವುದಲ್ಲದೇ ಸಮಯ ಕಳೆಯುವುದು ಹೇಗೆ ಎನ್ನುವ ಚಿಂತೆಯೂ ದೂರವಾಗುತ್ತದೆ. ಅಲ್ಲದೇ ನಾವು ನಿತ್ಯ ಯಾವುದನ್ನು ಹವ್ಯಾಸ ಎಂದುಕೊಳ್ಳುತ್ತೇವೆಯೋ ಅದೇ ಮುಂದೊಂದು ನಮಗೆ ನೆಮ್ಮದಿಯ ಜೊತೆ ಒಂದಿಷ್ಟು ಗೌರವ ಸಂಪಾದಿಸಿಕೊಡುವ ಸಾಧ್ಯತೆಯೂ ಇದೆ.
ನಾವು ಆಲ್ಯದಿಂದ ಸೆಟೆದೆದ್ದು ಜೀವನದ ಕ್ರಮವನ್ನು ರಚಿಸಿಕೊಂಡಾಗ ಸಾಧಾರಣವಾಗಿ ಎಂಥದ್ದೆ ತೊಂದರೆಗಳು ಬಂದರೂ ಎದುರಿಸಿ ಸಾಗಲು ಸಾಧ್ಯವಾಗುತ್ತದೆ. ಒಂದು ಕೆಲಸ ಮಾಡಲು ಹೊರಟಾಗ ನೂರೆಂಟು ವಿಘ್ನಗಳು ಬಂದೆ ಬರುತ್ತದೆ. ಆದರೆ ವಿಘ್ನ ಎದುರಿಸುವ ಶಕ್ತಿಯೇ ನಾವು ನಮ್ಮೊಳಗೆ ತುಂಬಿಕೊಂಡು ಏಳಬೇಕು. ಆ ಶಕ್ತಿ ಆತ್ಮವಿಶ್ವಾಸ. ಇಂತಾದ್ದೊಂದು ನಾನು ಮಾಡಬಲ್ಲೆ ಎನ್ನುವ ಆತ್ಮವಿಶ್ವಾಸ ಇದ್ದಾಗ ವಿಘ್ನಗಳು ದೂರವಾಗುತ್ತದೆ. ಇಂದು ಯಾರು ಮಾಡುತ್ತಾರೆ, ನಾನು ಮಾಡಿದರೆ ತಪ್ಪಾಗಿಬಿಟ್ಟರೆ, ಯಾರಾದರೂ ಏನಾದರೂ ಅಂದುಕೊಂಡರೆ ಎನ್ನುತ್ತ ಕುಳಿತರೆ ಇಂದು ಇಲ್ಲಿದ್ದೇವೆಯೋ ಮುಂದೊಂದು ದಿನವೂ ಅಲ್ಲಿಯೇ ಇರುತ್ತೇವೆ. ಹಾಗಾಗಿ ಇಂದು ಆ¯ಸ್ಯ ಬಿಟ್ಟರೆ ಮಾತ್ರ ನಾಳೆ ಸುಂದರ ದಿನಗಳು ನಮ್ಮದಾಗುವುದು